Home » ಭಾರತದ GDP ಯಲ್ಲಿ ಅಬ್ಬರ ಉಬ್ಬರ ! ವಿಶ್ವದಲ್ಲಿ ಮೊದಲ ಸ್ಥಾನ ಮತ್ತು ಲಾಸ್ಟ್ ಯಾರು ಇರಬಹುದು ಊಹಿಸಿ !

ಭಾರತದ GDP ಯಲ್ಲಿ ಅಬ್ಬರ ಉಬ್ಬರ ! ವಿಶ್ವದಲ್ಲಿ ಮೊದಲ ಸ್ಥಾನ ಮತ್ತು ಲಾಸ್ಟ್ ಯಾರು ಇರಬಹುದು ಊಹಿಸಿ !

by ಹೊಸಕನ್ನಡ
1 comment
GDP

GDP: ಏಪ್ರಿಲ್ ಜೂನ್ ಮೊದಲ ತ್ರೈಮಾಸಿಕದ ಜಿಡಿಪಿ(GDP) ಪ್ರಕಟವಾಗಿದೆ 7.8% ನಷ್ಟು ಜಿಡಿಪಿ ದಾಖಲಿಸುವ ಮೂಲಕ ಈ ಬಾರಿಯೂ ಚೀನಾವನ್ನು ಹಿಂದಿಕ್ಕಿ ಸಾಧನೆ ಮಾಡಿದೆ. ಜಿಡಿಪಿಯಲ್ಲಿ ಈ ಮಟ್ಟಿಗಿನ ಸಾಧನೆ ಮಾಡಲು ಹಲವು ಕ್ಷೇತ್ರಗಳು ವಿಪರೀತ ಬೆಳವಣಿಗೆ ಸಾಧಿಸಿದ್ದು ಕಾರಣ ಆಗಿದೆ ಎನ್ನುವ ಅಂಶ ಬೆಳಕಿಗೆ ಬಂದಿದೆ.

ಭಾರತದಲ್ಲಿ ಕೃಷಿ ರಿಯಲ್ ಎಸ್ಟೇಟ್ ಮತ್ತು ಹಣಕಾಸು ಕ್ಷೇತ್ರಗಳಲ್ಲಿ ವ್ಯಾಪಕ ಬೆಳವಣಿಗೆ ಸಾಧಿಸಿದ ಪರಿಣಾಮ ಭಾರತದ ಆರ್ಥಿಕತೆ ಬೆಳವಣಿಗೆ ಹೊಂದುತ್ತಿದೆ ಆದುದರಿಂದ ಭಾರತದ ಆರ್ಥಿಕತೆ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. ಹಾಗಾದ್ರೆ ಭಾರತದ ಆರ್ಥಿಕತೆ ಕಳೆದ ತ್ರೈಮಾಸಿಕದಲ್ಲಿ ಎಷ್ಟಿತ್ತು ಈಗ ಎಷ್ಟು ಸುಧಾರಣೆಯಾಗಿದೆಯಾ ಅಥವಾ ಕೆಳಕ್ಕೆ ಜಾರಿದೆಯಾ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

2022 23 ರ ಹಣಕಾಸು ವರ್ಷದ ತ್ರೈಮಾಸಿಕದಲ್ಲಿ 13.1% ಜಿಡಿಪಿ ದಾಖಲಾಗಿತ್ತು ಈ ಪ್ರಮಾಣಕ್ಕೆ ಹೋಲಿಸಿದಾಗ ಈಗಿನ GDP ಕುಸಿದಿದೆ. ಆದರೆ 2023ರ ಜನವರಿಯಿಂದ ಮಹರ್ಷಿ ಹೊರಗಿನ ತ್ರೈಮಾಸಿಕದಲ್ಲಿ 6.1 % ಇದ್ದ ಜಿಡಿಪಿ ಇದೀಗ 7.8 % ಗೆ ನೆಗೆದು ಕೂತಿದೆ. ವ್ಯಾಪಾರ ಮತ್ತು ನಿರ್ಮಾಣ ಕ್ಷೇತ್ರಗಳಲ್ಲಿ ಕ್ರಮವಾಗಿ 9.2% ಮತ್ತು 7.9 % ಬೆಳವಣಿಗೆ ಸಾಧಿಸಿ ಇದೀಗ ಪ್ರಪಂಚದಲ್ಲಿಯೇ ಭಾರತ ಜಿಡಿಪಿ ನಲ್ಲಿ ಅಗ್ರಸ್ಥಾನದಲ್ಲಿದೆ.

ಯಾವ ದೇಶದ ಜಿಡಿಪಿ ಎಷ್ಟೆಷ್ಟು ?:
ಭಾರತದ ಜಿಡಿಪಿ 7.8% ಇದ್ದರೆ ಚೀನಾ 6.3%, ಇಂಡೋನೇಷ್ಯಾ 5.17 %, ರಷ್ಯಾ 4.9 % ಇದೆ. ಆಶ್ಚರ್ಯದ ಸಂಗತಿ, ಏನೆಂದರೆ ವಿಶ್ವದ ದೊಡ್ಡಣ್ಣ ಬಲಾಢ್ಯ ಆರ್ಥಿಕತೆಯ ದೇಶ ಅಮೇರಿಕಾ ಜಿಡಿಪಿ 2.1% ಇದೆ. ಈ ಪಟ್ಟಿಯಲ್ಲಿ ನೆದರ್ಲ್ಯಾಂಡ್ ಅತ್ಯಂತ ಕೆಳ ಮಟ್ಟದಲ್ಲಿದ್ದು ಇಲ್ಲಿನ ಜಿಡಿಪಿ – 0.3 % ದಾಖಲಾಗಿದೆ.

https://twitter.com/amitmalviya/status/1697242926563438651/photo/1?ref_src=twsrc%5Etfw%7Ctwcamp%5Etweetembed%7Ctwterm%5E1697242926563438651%7Ctwgr%5E054d57506e84dc38353780e882ae7ac3a6e2e9b6%7Ctwcon%5Es1_&ref_url=https%3A%2F%2Fpublictv.in%2Findias-april-june-quarter-gdp-grows-at-7-8-country-remains-fastest-growing-large-economy%2F

ಜಿಡಿಪಿ ಅಂದರೆ ಗ್ರಾಸ್ ಡೊಮೆಸ್ಟಿಕ್ ಪ್ರೊಡಕ್ಷನ್ ಅಂದರೆ ಏನು ?
ಜಿಡಿಪಿ ಅಥವಾ ಗ್ರಾಸ್ ಡಮಿಕ್ ಸ್ಟಿಕ್ ಪ್ರೊಡಕ್ಷನ್ ಅಥವಾ ಕನ್ನಡದಲ್ಲಿ ಹೇಳಬೇಕಾದರೆ ರಾಷ್ಟ್ರೀಯ ಒಟ್ಟಾರೆ ಉತ್ಪತ್ತಿ ಅಂದರೆ ಒಂದು ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಒಂದು ನಿರ್ದಿಷ್ಟ ಅವಧಿಯಲ್ಲಿ ಅಂದರೆ ಸಾಮಾನ್ಯವಾಗಿ ಮೂರು ತಿಂಗಳಿಗೊಮ್ಮೆ (ತ್ರೈಮಾಸಿಕವಾಗಿ) ಉತ್ಪತ್ತಿಯಾಗುವ ಎಲ್ಲಾ ರಂಗಗಳ ಸಮಗ್ರ ಸೇವೆಗಳ ಒಟ್ಟಾರೆ ಮೌಲ್ಯಮಾಪನ. ಜಿಡಿಪಿ ಲೆಕ್ಕ ಹಾಕಲು ಆಯಾ ರಾಷ್ಟ್ರಗಳು ಹೆಚ್ಚು ಕಮ್ಮಿ ಒಂದೇ ರೀತಿಯ ಟೂಲ್ ಅಥವಾ ಪರಿಮಾಣಗಳನ್ನು ಹೊಂದಿವೆ. ಉತ್ಪನ್ನಗಳ ಬಳಕೆ ಸರ್ಕಾರದ ಖರ್ಚು ವೆಚ್ಚ ಹೂಡಿಕೆ ಮತ್ತು ಒಟ್ಟಾರೆ ರಫ್ತು ಇವುಗಳ ಮೇಲೆ ಕ್ಯಾಲ್ಕ್ಯುಲೇಷನ್ ಮಾಡಿ ಜಿಡಿಪಿಯನ್ನು ಅಳೆಯಲಾಗುತ್ತದೆ.

https://twitter.com/JoshiPralhad/status/1697469406815944902/photo/1?ref_src=twsrc%5Etfw%7Ctwcamp%5Etweetembed%7Ctwterm%5E1697469406815944902%7Ctwgr%5E054d57506e84dc38353780e882ae7ac3a6e2e9b6%7Ctwcon%5Es1_&ref_url=https%3A%2F%2Fpublictv.in%2Findias-april-june-quarter-gdp-grows-at-7-8-country-remains-fastest-growing-large-economy%2F

ಇದನ್ನೂ ಓದಿ: ಸೌಜನ್ಯ ಹುಟ್ಟೂರಿಗೆ ಕೊನೆಗೂ ಬಂತು ಹೊಸ ಸರ್ಕಾರಿ ಬಸ್ ! ಚಾಲನೆ ನೀಡಿದ ಸೌಜನ್ಯ ತಾಯಿ : ಬಸ್ ಬರುವಂತೆ ಮಾಡಿದ್ದು ಅವರೇ !!!

You may also like

Leave a Comment