Kalburagi: ಟಾಟಾ ಏಸ್, ಕ್ಯಾಂಟರ್ ಮತ್ತು ಖಾಸಗಿ ಬಸ್ (Private bus) ನಡುವೆ ಭೀಕರ ಅಪಘಾತ ನಡೆದಿದ್ದು, ಈ ಸರಣಿ ಅಪಘಾತದಲ್ಲಿ (Accident) ಟಾಟಾ ಏಸ್‌ನಲ್ಲಿದ್ದ ಮಗ ಮತ್ತು ತಾಯಿ ಸಾವನ್ನಪ್ಪಿರುವ (death) ಘಟನೆ ತುಮಕೂರಿನ (tumkur) ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕನಹಳ್ಳಿಯಲ್ಲಿ ನಡೆದಿದೆ. ಮೃತರನ್ನು ಕಲಬುರಗಿ (Kalburagi) ಜಿಲ್ಲೆಯ ಅರಳಗುಂಡಗಿ ಗ್ರಾಮದ ನಿವಾಸಿ ಮಹಾಂತಪ್ಪ (50) ಮತ್ತು ಅವರ ತಾಯಿ ಭೀಮಬಾಯಿ (70) ಎಂದು ಗುರುತಿಸಲಾಗಿದೆ.
ಮಹಾಂತಪ್ಪ ಅವರು ಬಿಎಂಟಿಸಿಯಲ್ಲಿ (BMTC) ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಮಹಾಂತಪ್ಪ ಅವರಿಗೆ ಬೆಂಗಳೂರಿನಿಂದ (Bengaluru) ಸ್ವಂತ ಊರಿಗೆ ವರ್ಗವಾಗಿತ್ತು. ಕಲಬುರಗಿ ಜಿಲ್ಲೆಯ ಸೇಡಂ ಡಿಪೋಗೆ ವರ್ಗಾವಣೆಗೊಂಡಿದ್ದು, ಇದೇ ಕಾರಣದಿಂದ ಇಡೀ ಕುಟುಂಬ ಊರಿಗೆ ಬರುವ ಖುಷಿಯಲ್ಲಿತ್ತು. ಮಹಾಂತಪ್ಪ ಪತ್ನಿ, ಮಕ್ಕಳು ಮತ್ತು ತಾಯಿಯೊಂದಿಗೆ ಕಲಬುರಗಿ ಜಿಲ್ಲೆಯ ಅರಳಗುಂಡಗಿಯ ಸ್ವಗ್ರಾಮಕ್ಕೆ ಮನೆ ಸಾಮಾನುಗಳ ಸಮೇತ ಟಾಟಾ ಏಸ್‌ನಲ್ಲಿ ಬರುತ್ತಿದ್ದರು. ಆದರೆ, ಊರು ತಲುಪುವ ಮುನ್ನವೇ ಅಪಘಾತ ಸಂಭವಿಸಿದೆ.
ಚಿಕ್ಕನಹಳ್ಳಿ ಬಳಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾರಿ ವಾಹನ ದಟ್ಟಣೆ ಇತ್ತು. ಈ ವೇಳೆ ಮುಂದೆ ಹೋಗುತ್ತಿದ್ದ ಟ್ಯಾಂಕರ್‌ಗೆ ಟಾಟಾ ಏಸ್ ಡಿಕ್ಕಿ ಹೊಡೆದಿದೆ. ಬಳಿಕ ಹಿಂಬದಿಯಿಂದ ಬಂದ ಖಾಸಗಿ ಬಸವೊಂದು ಟಾಟಾ ಏಸ್‌ಗೆ ಡಿಕ್ಕಿ ಹೊಡೆದಿದೆ. ಈ ಸರಣಿ ಅಪಘಾತದಿಂದ ಮಹಾಂತಪ್ಪ ಅವರ ತಾಯಿ ಸ್ಥಳದಲ್ಲಿಯೇ ಸಾವನ್ನಪ್ಪಿದರು. ತೀವ್ರ ಗಾಯಗೊಂಡ ಮಹಾಂತಪ್ಪ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ.
ಅವರ ಹೆಂಡತಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಇತರೆ ವಾಹನದಲ್ಲಿದ್ದವರಿಗೂ ಗಾಯಗಳಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಗ್ಗೆ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Arecanut price: ಭೂತಾನ್ ನಿಂದ ಅಡಿಕೆ ಆಮದು; ರೈತರಿಗೆ ಶಾಕ್, ಒಂದೇ ದಿನದಲ್ಲಿ ಎರಡು ಸಾವಿರ ಕುಸಿತ ಕಂಡ ಅಡಿಕೆ ದರ!!!
