Aadhaar card update: ಇಂದು ಸರ್ಕಾರದ ಪ್ರತಿಯೊಂದು ಯೋಜನೆಯನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಅದರಲ್ಲೂ ಕೂಡ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಂದ ನಂತರ ಅವುಗಳ ಫಲಾನುಭವಿಗಳಾಗಲು ಆಧಾರ್ ಕಾರ್ಡ್ ಬೇಕೇ ಬೇಕು. ಹೀಗಾಗಿ ಆಧಾರ್ ಕಾರ್ಡ್ ಅಪ್ಡೇಟ್ ಕಡ್ಡಾಯವಾಗಿದೆ.
ಸದ್ಯ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ (Aadhaar card update) ಮಾಡುವ ವಿಚಾರವಾಗಿ ಬಿಗ್ ಅಪ್ಡೇಟ್ ಬಂದಿದ್ದು, ಉಚಿತವಾಗಿ ಅಪ್ಡೇಟ್ ಮಾಡಲು ಸೆ.14 ಕೊನೆಯ ದಿನವಾಗಿದೆ. ಸೆಪ್ಟೆಂಬರ್ 14ರವರೆಗೆ ಆನ್‌ಲೈನ್ ಮೂಲಕ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್ಡೇಟ್ ಮಾಡಬಹುದು. ಇಲ್ಲವಾದರೆ ಪ್ರತಿ ಕೆಲಸಕ್ಕೂ ನಿಗದಿತ ಶುಲ್ಕ ಪಾವತಿಸಬೇಕು.
ಹೌದು, ಆಧಾರ್ ಕಾರ್ಡ್‌ನಲ್ಲಿರುವ ಆನ್‌ಲೈನ್ ದಾಖಲೆಗಳು, ಮಾಹಿತಿಗಳ ಅಪ್‌ಡೇಟ್ ಮಾಡಲು ಇರುವ ಅಂತಿಮ ದಿನಾಂಕವನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಎಡಿಎಐ) ಸೆಪ್ಟೆಂಬರ್ 14ರವರೆಗೆ ವಿಸ್ತರಿಸಿತ್ತು. ಹೀಗಾಗಿ, ಆಧಾರ್ ಅಪ್‌ಡೇಟ್ ಮಾಡಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಹತ್ತು ವರ್ಷದ ಹಿಂದೆ ಆಧಾರ್ ಕಾರ್ಡ್ ಮಾಡಿಕೊಂಡಿರುವವರು, ಇನ್ನೂ ಅಪ್‌ಡೇಟ್ ಮಾಡದೆ ಇದ್ದರೆ ಈ ಅವಧಿಯೊಳಗೆ ಉಚಿತವಾಗಿ ಅಪ್‌ಡೇಟ್ ಮಾಡಬಹುದಾಗಿದೆ. ಸಾಮಾನ್ಯವಾಗಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಲು 50 ರೂಪಾಯಿ ಖರ್ಚು ಇರುತ್ತದೆ. ಆದರೆ, ಸೆಪ್ಟೆಂಬರ್ 14ರೊಳಗೆ ಉಚಿತವಾಗಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಬಹುದು. ಇಲ್ಲದಿದ್ದಲ್ಲಿ ನೀವು ದಂಡ ಪಾವತಿಸಬೇಕಾದಿತು.
ಮೈ ಆಧಾರ್ (myAadhaar) ಪೋರ್ಟಲ್
ಉಚಿತ ಸೇವೆಯು myAadhaar ಪೋರ್ಟಲ್‌ನಲ್ಲಿ ಮಾತ್ರ ಲಭ್ಯವಿದೆ. ಆಧಾರ್ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಭೌತಿಕವಾಗಿ ಅಪ್ಡೇಟ್ ಮಾಡಿದರೆ, ಅಗತ್ಯ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆನ್‌ಲೈನ್ ಮಾಧ್ಯಮದ ಮೂಲಕ ಸೆಪ್ಟೆಂಬರ್ 14 ರವರೆಗೆ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಬಹುದು.
ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಹೇಗೆ?
• ನಿವಾಸಿಗಳು ತಮ್ಮ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು https://myaadhaar.uidai.gov.in/ ಗೆ ಲಾಗ್ ಇನ್ ಮಾಡಬಹುದು.
• ವಿಳಾಸವನ್ನು ನವೀಕರಿಸಲು continue ಆಯ್ಕೆಯನ್ನು ಆರಿಸಿ.
• ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.
ಅಪ್‌ಡೇಟ್ ಡಾಕ್ಯುಮೆಂಟ್’ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಪ್ರಸ್ತುತ ವಿವರಗಳು ಕಾಣಿಸಿಕೊಳ್ಳುತ್ತವೆ.
• ಆಧಾರ್ ಹೊಂದಿರುವವರು ವಿವರಗಳನ್ನು ಪರಿಶೀಲಿಸಬೇಕು, ಸರಿಯಾಗಿ ಕಂಡುಬಂದರೆ, ಮುಂದಿನ ಹೈಪರ್ಲಿಂಕ್ ಅನ್ನು ಕ್ಲಿಕ್ ಮಾಡಿ.
• ಮುಂದಿನ ಹಂತದಲ್ಲಿ, ಡ್ರಾಪ್‌ಡೌನ್ ಪಟ್ಟಿಯಿಂದ ಗುರುತಿನ ಪುರಾವೆ ಮತ್ತು ವಿಳಾಸದ ದಾಖಲೆಗಳ ಪುರಾವೆಗಳನ್ನು ಆಯ್ಕೆ ಮಾಡಬೇಕಾಗುತ್ತದೆ.
• ವಿಳಾಸ ಪುರಾವೆಯ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಿ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ.
ಅಂತಿಮವಾಗಿ ಆಧಾರ್ ಅಪ್ಡೇಟ್ ರಿಕ್ವೆಸ್ಟ್ ಬರುತ್ತದೆ. 14 ಅಂಕೆಗಳ ಅಪ್ಡೇಟ್ ರಿಕ್ವೆಸ್ಟ್ ನಂಬರ್ (URN) ಜನರೇಟ್ ಆಗುತ್ತದೆ.
