Home » Mangalore: ಯುವಕನಿಗೆ ಚೂರಿ ಇರಿತ ಪ್ರಕರಣ!!! ವೈಯಕ್ತಿಕ ದ್ವೇಷಕ್ಕೆ ಗಲಾಟೆ, ಪೊಲೀಸರ ಮಿಂಚಿನ ಕಾರ್ಯಾಚರಣೆ, ಮೂವರು ಆರೋಪಿಗಳ ಸೆರೆ

Mangalore: ಯುವಕನಿಗೆ ಚೂರಿ ಇರಿತ ಪ್ರಕರಣ!!! ವೈಯಕ್ತಿಕ ದ್ವೇಷಕ್ಕೆ ಗಲಾಟೆ, ಪೊಲೀಸರ ಮಿಂಚಿನ ಕಾರ್ಯಾಚರಣೆ, ಮೂವರು ಆರೋಪಿಗಳ ಸೆರೆ

1 comment
Mangalore

Mangalore: ಸುರತ್ಕಲ್‌ ಠಾಣಾ ವ್ಯಾಪ್ತಿಯ ಕಳವಾರಿನಲ್ಲಿ ನಿನ್ನೆ ಯುವಕನೋರ್ವನಿಗೆ ಚೂರಿ ಇರಿತದ ಘಟನೆಯೊಂದು ನಡೆದಿತ್ತು (Mangalore). ಇದೀಗ ಪೊಲೀಸರು ಈ ಪ್ರಕರಣದ ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.

ಅಬ್ದುಲ್‌ ಸಫ್ವಾನ್‌ (23) ಎಂಬಾತನಿಗೇ ಚೂರಿ ಇರಿತವಾಗಿತ್ತು. ಈ ಪ್ರಕರಣ ಸಂಬಂಧಿಸಿ ಕಳವಾರು ನಿವಾಸಿಗಳಾದ ಪ್ರಶಾಂತ್‌ (28) ಮತ್ತು ಯಜ್ಞೇಶ್‌ (23) ಎಂಬುವವರನ್ನು ಬಂಧನ ಮಾಡಲಾಗಿದೆ.

ಅಬ್ದುಲ್‌ ಸಫ್ವಾನ್‌ ಮತ್ತು ಮೊಹಮ್ಮದ್‌ ಸಫ್ವಾನ್‌ ಅವರನ್ನು ಆ.31 ರಂದು ನಡೆದ ಗಲಾಟೆ ಬಗ್ಗೆ ಮಾತಾಡಕ್ಕೆ ಎಂದು ಕರೆದಿದ್ದು, ಬೈಕಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಎರಡು ಬೈಕ್‌ನಲ್ಲಿ ಬಂದಿದ್ದ ಐದಾರು ಮಂದಿ ತಡೆದು ಹಲ್ಲೆ ನಡೆಸಿದ್ದರು. ಜನ ಸ್ಥಳದಲ್ಲಿ ಸೇರುತ್ತಿದ್ದಾಗ ಎಲ್ಲರೂ ಪರಾರಿಯಾಗಿದ್ದರು. ಸಫ್ವಾನ್‌ ಅವರ ಕೈ, ತೋಳು ಹಾಗೂ ಬೆನ್ನಿಗೆ ಚೂರಿಯಿಂದ ಇರಿದು ಗಾಯಗಳಾಗಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಲವರನ್ನು ವಶಕ್ಕೆ ಪಡೆದಿದ್ದು ಮೂವರನ್ನು ಬಂಧಿಸಿದ್ದಾಗಿ ಪೊಲೀಸ್‌ ಕಮಿಷನರ್‌ ಕುಲದೀಪ್‌ ಜೈನ್‌ ತಿಳಿಸಿದ್ದಾರೆ.

ಇದನ್ನೂ ಓದಿ: Scientist N Valarmathi passed away: ಚಂದ್ರಯಾನ -3 ಉಡಾವಣೆ ಸಮಯದಲ್ಲಿ ಕೌಂಟ್‌’ಡೌನ್‌’ಗೆ ಧ್ವನಿ ನೀಡಿದ್ದ ಇಸ್ರೋ ವಿಜ್ಞಾನಿ ನಿಧನ!

You may also like

Leave a Comment