Mangaluru: ಮಂಗಳೂರಿನಲ್ಲಿ( Mangaluru) ಸಮುದ್ರ ವಿಹಾರಕ್ಕೆಂದು ಬಂದಿದ್ದ ಐವರು ವೈದ್ಯರಲ್ಲಿ ಓರ್ವ ವೈದ್ಯ ಸಮುದ್ರಪಾಲಾದ ಘಟನೆಯೊಂದು ಸೋಮೇಶ್ವರ ರುದ್ರಪಾದೆ ಸಮೀಪ ನಿನ್ನೆ ತಡರಾತ್ರಿ 11 ಗಂಟೆ ವೇಳೆ ಸಂಭವಿಸಿದೆ.
ಬೆಂಗಳೂರಿನ ರಾಮನಗರ ನಿವಾಸಿ ಡಾ.ಆಶೀಕ್ ಗೌಡ (30) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಮೃತದೇಹ ಪತ್ತೆಯಾಗಿದೆ.

ನಿನ್ನೆ ತಡರಾತ್ರಿ ಸೋಮೇಶ್ವರಕ್ಕೆ ಮೃತ ವೈದ್ಯ ಸೇರಿದಂತೆ ಇನ್ನೋರ್ವ ಸರ್ಜನ್ ಕುಂದಾಪುರ ಮೂಲಕ ಡಾ.ಪ್ರದೀಪ್ ಮೂವರು ಇಂಟರ್ನ್‌ಶಿಪ್ ನಡೆಸುತ್ತಿರುವ ವೈದ್ಯರ ಜೊತೆಗೆ ಸಮುದ್ರ ವಿಹಾರಕ್ಕೆಂದು ಬಂದಿದ್ದಾರೆ. ಡಾ.ಪ್ರದೀಪ್ ಅವರು ರುದ್ರಪಾದೆಯಲ್ಲಿ ವಿಹರಿಸುತ್ತಿರುವ ಸಂದರ್ಭದಲ್ಲಿ ಕಲ್ಲಿನಿಂದ ಸಮುದ್ರಕ್ಕೆ ಜಾರಿ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ನೀರಿನಲ್ಲಿ ನಿಂತು ಕೂಗುತ್ತಿದ್ದ ಸಂದರ್ಭ ಡಾ.ಅಶೀಕ್ ಗೌಡ ಅವರು ಇಣಿಕಿದ್ದು, ಅವರು ಆಯತಪ್ಪಿ ಆ ಕ್ಷಣದಲ್ಲಿ ಕಾಲು ಜಾರಿ ಬಿದ್ದಿದ್ದು ಅವರು ಕೂಡಾ ಸಮುದ್ರಪಾಲಾಗಿದ್ದಾರೆ. ಸಣ್ಣ ಕಲ್ಲು ಹಿಡಿದು ಡಾ.ಪ್ರದೀಪ್ ಪಾರಾಗಿದ್ದಾರೆ.
ಅಗ್ನಿಶಾಮಕ ದಳ, ಉಳ್ಳಾಲ ಪೊಲೀಸ್ ಠಾಣೆ ರಕ್ಷಣಾ ಕಾರ್ಯಾಚಣೆ ನಡೆಸಿದ್ದು, ಇಂದು ಸಮುದ್ರ ತೀರದಲ್ಲಿ ಡಾ.ಆಶೀಖ್ ಮೃತದೇಹ ಪತ್ತೆಯಾಗಿದೆ.
ಇದನ್ನೂ ಓದಿ: ಬೆಳ್ತಂಗಡಿ : ಕಾರು-ಬೈಕ್ ಡಿಕ್ಕಿ ,ಬೈಕ್ ಸವಾರ ಮೃತ್ಯು
