Home » Raksha Bandhan: ಅಣ್ಣನಿಗೆ ರಾಖಿ ಕಟ್ಟಿ 21 ಸಾವಿರ ಡಿಮ್ಯಾಂಡ್ ಮಾಡಿದ ಸೋದರಿಯರು- ಹಣವಿಲ್ಲ ಅಂದಿದ್ದಕ್ಕೆ ಅತ್ತಿಗೆಗೆ ಮಾಡಿದ್ದೇನು ಗೊತ್ತೇ ?

Raksha Bandhan: ಅಣ್ಣನಿಗೆ ರಾಖಿ ಕಟ್ಟಿ 21 ಸಾವಿರ ಡಿಮ್ಯಾಂಡ್ ಮಾಡಿದ ಸೋದರಿಯರು- ಹಣವಿಲ್ಲ ಅಂದಿದ್ದಕ್ಕೆ ಅತ್ತಿಗೆಗೆ ಮಾಡಿದ್ದೇನು ಗೊತ್ತೇ ?

1 comment
Raksha Bandhan

Raksha Bandhan: ಶ್ರಾವಣ ಮಾಸದ ಪೂರ್ಣಿಮ ತಿಥಿಯಂದು ಅಣ್ಣ- ತಂಗಿಯರ ನಡುವಿನ ಬಾಂಧವ್ಯವನ್ನು ವೃದ್ಧಿಸಲು ರಕ್ಷಾಬಂಧನ (Raksha Bandhan) ಅಥವಾ ರಾಖಿ ಹಬ್ಬ ಅಂತಲೂ ಕರೆಯುವ ಈ ಹಬ್ಬವನ್ನು ಭಾರತ ದೇಶದಾದ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ.

ಈ ಹಬ್ಬದಂದು ಸಹೋದರಿಯರು ಅಣ್ಣನ ಕೈಗೆ ರಾಖಿ ಕಟ್ಟುವ ಮೂಲಕ ಆಶೀರ್ವಾದ ಪಡೆಯುತ್ತಾರೆ. ಅಲ್ಲದೇ ಅಣ್ಣ ದೀರ್ಘಾಯಸ್ಸಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ. ಸಹೋದರರ ಕೈಗೆ ರಾಖಿ ಕಟ್ಟುವ ಸಹೋದರಿಯರು ಅವರಿಂದ ಉಡುಗೊರೆಗಳನ್ನು ಪಡೆಯುತ್ತಾರೆ. ಆದರೆ ಇದೇ ಭಾಂದವ್ಯವನ್ನು ತಮ್ಮ ಸ್ವಾರ್ಥ ಕ್ಕಾಗಿ ಬಳಸಿಕೊಂಡು ಸಹೋದರಿಯರು ಮನುಷತ್ವ ಮರೆತಿದ್ದಾರೆ.

ಹೌದು, ದೆಹಲಿಯ ಮೈದಾನ್ ಗರ್ಹಿಯಲ್ಲಿ ಮೂವರು ಸಹೋದರಿಯರು ಅಣ್ಣನಿಗೆ ರಾಖಿ ಕಟ್ಟಲು ಮನೆಗೆ ಬಂದು ರಾಖಿ ಕಟ್ಟಿದ್ದು, ಉಡುಗೊರೆಯಾಗಿ ಹಣ ಪಡೆಯುವ ವಿಚಾರಕ್ಕೆ ಅತ್ತಿಗೆಗೆ ಮನಸೋ ಇಚ್ಛೆ ತಳಿಸಿದ್ದಾರೆ . ಸಹೋದರಿಯರು ತನ್ನ ಅಣ್ಣನಿಗೆ ರಾಖಿ ಕಟ್ಟಿ 21,000 ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ನಂತರ ಅಷ್ಟೊಂದು ಹಣ ಇಲ್ಲ ಎಂದು ಹೇಳಿದ್ದಕ್ಕೆ ಜಗಳ ವಿಕೋಪಕ್ಕೆ ತಿರುಗಿ, ಮಧ್ಯ ಬಂದ ಅತ್ತಿಗೆಗೆ ಮನಬಂದಂತೆ ಥಳಿಸಿದ್ದಾರೆ.

ಅಲ್ಲದೇ ನಾದಿನಿಯರು ಥಳಿಸಿದ ಘಟನೆ ಬಗ್ಗೆ ಸಂತ್ರಸ್ತೆ ಪೊಲೀಸರಿಗೆ ತಿಳಿಸಲು ಪ್ರಯತ್ನಿಸಿದಾಗ, ನಾದಿನಿಯರ ಜೊತೆಗೆ ಕುಟುಂಬ ಇತರೆ ಮಹಿಳೆಯರು ಸೇರಿ ಮನಬಂದಂತೆ ಥಳಿಸಿದ್ದಾರೆ ಎಂದು ತಿಳಿದುಬಂದಿದೆ. ನಂತರ ಚಿಕಿತ್ಸೆಗಾಗಿ ಮಹಿಳೆಯನ್ನ ದೆಹಲಿಯ ಏಮ್ಸ್​ಗೆ ದಾಖಲಿಸಲಾದ ನಂತರ ಪೊಲೀಸರಿಗೆ ಮಾಹಿತಿ ದೊರೆತಿದೆ.

ಒಟ್ಟಿನಲ್ಲಿ ಇತ್ತೀಚಿಗೆ ಮನುಷ್ಯರು ಮನುಷ್ಯತ್ವ, ಬಾಂಧವ್ಯ ಮರೆತು ತಮ್ಮ ಸ್ವಾರ್ಥಕ್ಕಾಗಿ ಮಾತ್ರ ಸಂಪ್ರದಾಯ ಆಚರಣೆಗಳನ್ನು ಮಾಡುತ್ತಿದ್ದಾರೆ ಎಂದು ಈ ಮೂಲಕ ತಿಳಿಯಬಹುದು.

ಇದನ್ನೂ ಓದಿ: ಅಬ್ಬಬ್ಬಾ.. ರಾಶಿ ರಾಶಿ, ದೈತ್ಯ ಹಾವುಗಳ ಜೊತೆ ರೋಮ್ಯಾನ್ಸ್ ಮಾಡುತ್ತಾಳಂತೆ ಈಕೆ !! ಅಷ್ಟಕ್ಕೂ ಇದೇನಿದು ವಿಚಿತ್ರ ಅಂತೀರಾ?! ಇಲ್ಲಿದೆ ನೋಡಿ ಭಯಾನಕ ವಿಡಿಯೋ

You may also like

Leave a Comment