ONGC recruitment: ONGC (ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಷನ್ ಲಿಮಿಟೆಡ್) ಯಲ್ಲಿ 2500 ಅಪ್ರೆಂಟಿಸ್ ಹುದ್ದೆಗಳನ್ನು (ONGC recruitment) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಐಟಿಐ, ಡಿಪ್ಲೋಮಾ, ಬಿಇ/ಇತರೆ ಪದವಿ ಪಾಸಾದವರು ಅರ್ಜಿ ಸಲ್ಲಿಸಲು ಅವಕಾಶವಿದೆ.
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 01-09-2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 20-09-2023
ಫಲಿತಾಂಶ ಬಿಡುಗಡೆ ಮತ್ತು ಆಯ್ಕೆಪ್ರಕ್ರಿಯೆ: 05-10-2023
ಹುದ್ದೆಗಳ ನೇಮಕ ಎಲ್ಲಿ ಮಾಡಲಾಗುತ್ತದೆ?
ಅಪ್ರೆಂಟಿಸ್ ಹುದ್ದೆಗಳನ್ನು ಒಎನ್ಜಿಸಿ’ಯ ಮುಂಬೈ ಸೆಕ್ಟಾರ್ನಲ್ಲಿ 436, ನಾರ್ಥರ್ನ್ ಸೆಕ್ಟಾರ್ 159, ವೆಸ್ಟರ್ನ್ ಸೆಕ್ಟಾರ್ 732, ಈಸ್ಟರ್ನ್ ಸೆಕ್ಟಾರ್ 593, ಸದರ್ನ್ ಸೆಕ್ಟಾರ್ 378, ಸೆಂಟ್ರಲ್ ಸೆಕ್ಟಾರ್ನಲ್ಲಿ 202 ಪೋಸ್ಟ್ಗಳನ್ನು ಭರ್ತಿ ಮಾಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ: ಕಲಿಕೆಯಲ್ಲಿ ಗಳಿಸಿದ ಅಂಕಗಳ ಆಧಾರ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿ ಆಯ್ಕೆ ಮಾಡಲಾಗುತ್ತದೆ.
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 24 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಹಾಕಲು ಅರ್ಹರು. ಮೀಸಲಾತಿ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, PWBD ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ವಿದ್ಯಾರ್ಹತೆ: 2020, 2021, 2022, 2023 ನೇ ಸಾಲಿನಲ್ಲಿ ಪಾಸಾದ ಅಭ್ಯರ್ಥಿಗಳು ಡಿಪ್ಲೊಮ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಅಪ್ರೆಂಟಿಸ್ ಸ್ಟೈಫಂಡ್ : ಗ್ರಾಜುಯೇಟ್ ಅಪ್ರೆಂಟಿಸ್ಗಳಿಗೆ ಮಾಸಿಕ ರೂ.9000 ನೀಡಲಾಗುತ್ತದೆ, ಹಾಗೆನೇ ಟ್ರೇಡ್ ಅಪ್ರೆಂಟಿಸ್ ಗಳಿಗೆ ಮಾಸಿಕ ರೂ.7,700. (2ನೇ ವರ್ಷ Rs.8,050) ಇದೆ. ಡಿಪ್ಲೊಮ ಅಪ್ರೆಂಟಿಸ್ ಹುದ್ದೆಗಳಿಗೆ ರೂ.8000 ಎಂದು ನಿಗದಿ ಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಇದನ್ನೂ ಓದಿ: 6 ಮಂಗಳಮುಖಿಯರಿಂದ 30 ರ ಹರೆಯದ ಯುವಕನ ಕಿಡ್ನ್ಯಾಪ್ ಮಾಡಿ ವಿಕೃತಿ!!! ಯುವಕನ ಮರ್ಮಾಂಗ ಕಟ್ ಮಾಡಿ ಎಸೆದೋದ ಪಾಪಿಗಳು!!!
