Home » Gruha Lakshmi Yojana: ಯಜಮಾನಿಯರೇ ಇತ್ತ ಗಮನಿಸಿ – ಈ ಕೂಡಲೇ ಇದೊಂದು ಈ ಕೆಲಸ ಮಾಡಿ, ಗೃಹಲಕ್ಷ್ಮೀ ಹಣವನ್ನು ವೇಗವಾಗಿ ಪಡೆಯಿರಿ

Gruha Lakshmi Yojana: ಯಜಮಾನಿಯರೇ ಇತ್ತ ಗಮನಿಸಿ – ಈ ಕೂಡಲೇ ಇದೊಂದು ಈ ಕೆಲಸ ಮಾಡಿ, ಗೃಹಲಕ್ಷ್ಮೀ ಹಣವನ್ನು ವೇಗವಾಗಿ ಪಡೆಯಿರಿ

by ಹೊಸಕನ್ನಡ
1 comment

Gruha Lakshmi Yojana: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ (Gruha Lakshmi Scheme)ಅನುಸಾರ ಕರ್ನಾಟಕ ರಾಜ್ಯದ ಪ್ರತಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2,000ಗಳನ್ನು ನೀಡಲಿದೆ. ಕರ್ನಾಟಕದಲ್ಲಿ ಸುಮಾರು 1.70 ಕೋಟಿ ಫಲಾನುಭವಿಗಳನ್ನು ಈ ಯೋಜನೆಯಡಿ ಅರ್ಹರು ಎಂದು ಪರಿಗಣಿಸಲಾಗಿದೆ.

 

ಈ ನಡುವೆ, ಕಾಂಗ್ರೆಸ್ ಸರ್ಕಾರದ(Congress Party)ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ(Gruha Lakshmi Yojana latest Updates)ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಮಹಿಳೆಯರಿಗೆ 2000 ರೂ ನೀಡುವ ‘ಗೃಹಲಕ್ಷ್ಮಿ’ ಯೋಜನೆಗೆ ಸರ್ಕಾರ ಚಾಲನೆ ನೀಡಿದ್ದು,ಈಗಾಗಲೇ ಮಹಿಳೆಯರ ಖಾತೆಗೆ 2000 ರೂ. ಹಣ ಜಮೆ ಪ್ರಕ್ರಿಯೆ ನಡೆಯುತ್ತಿದೆ.

 

ಒಂದೇ ಬಾರಿಗೆ ಕೋಟ್ಯಾಂತರ ಮಹಿಳೆಯರಿಗೆ ಹಣರವಾನೆ ಮಾಡುತ್ತಿರುವ ಹಿನ್ನೆಲೆ ಇನ್ನೂ ಕೆಲವರಿಗೆ ಹಣ ಜಮೆ ಆಗಿಲ್ಲ ಇಲ್ಲವೇ ನಿಮ್ಮ ರೇಷನ್ ಕಾರ್ಡ್ ಸಮಸ್ಯೆಯಿಂದ ಹಣ ಜಮಾ ಆಗಿರಲಿಕ್ಕಿಲ್ಲ. ಒಂದು ವೇಳೆ, ಗೃಹ ಲಕ್ಷ್ಮೀ ಯೋಜನೆಯ ಹಣ ಜಮೆ ಆಗಬೇಕಾದರೆ ತಪ್ಪದೇ ಈ ಕೆಲಸಗಳನ್ನು ಮಾಡಿಬಿಡಿ!

 

# ನಿಮ್ಮ ಹತ್ತಿರದಲ್ಲಿರುವ ಯಾವುದೇ ಸೇವಾಕೇಂದ್ರ ಅಥವಾ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ದಾಖಲೆಗಳನ್ನ ನೀಡಿ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿ.

 

# ನಿಮ್ಮ ರೇಷನ್ ಕಾರ್ಡ್ ಗೆ KYC ಅಪ್ಲೇಟ್ ಆಗಿದೆಯೇ ಇಲ್ಲವೇ ಎಂಬುದನ್ನು ಗಮನಿಸಿ. ಒಂದು ವೇಳೆ kyc ಅಪ್ಡೇಟ್ ಆಗದಿದ್ದರೆ ಕೂಡಲೇ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ತಿದ್ದುಪಡಿ ಮಾಡಿಸಿ.

 

# ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಮಾಹಿತಿಯಲ್ಲಿ ತಿದ್ದುಪಡಿ ಇಲ್ಲವೇ ಏನಾದರೂ ಬದಲಾವಣೆ ಇದ್ದರೆ ಸರಿಪಡಿಸಿ. ಆಧಾರ್ ಕಾರ್ಡ್ ಲಿಂಕ್, NPCI ಮ್ಯಾಪಿಂಗ್ ಮಾಡಿಸಿದರೆ, ಮುಂದಿನ ತಿಂಗಳಿನಿಂದ ನೀವು 2000 ರೂ ಹಣ ಪಡೆಯಬಹುದು.

 

# ನಿಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಅಕೌಂಟ್ ನಲ್ಲಿರುವ ಮಾಹಿತಿ ಹೊಂದಾಣಿಕೆ ಆಗುತ್ತಿದೆಯೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳಿ. ಇಲ್ಲ ಎಂದಾದರೆ ಇದನ್ನು ತಿದ್ದುಪಡಿ ಮಾಡಿಸಿ.

ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳು ಇಲ್ಲಿಯವರೆಗೆ ಅರ್ಜಿ ಸಲ್ಲಿಸದೆ ಇದ್ದಲ್ಲಿ ಮತ್ತು ತಾಂತ್ರಿಕ ತೊಂದರೆಯಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇದ್ದವರು ಸಮಸ್ಯೆ ಅರಿತು ಅದನ್ನು ಬಗೆಹರಿಸಿಕೊಂಡು ಅರ್ಜಿ ಸಲ್ಲಿಸಿದರೆ ಸೆಪ್ಟೆಂಬರ್ ನಿಂದ ಯೋಜನೆಯ ಹಣ ಜಮೆ ಆಗಲಿದೆ.

You may also like

Leave a Comment