Home » Bengaluru: ಸೆ. 11 ರಂದು ಬೆಂಗಳೂರು ಸಾರಿಗೆ ಬಂದ್: ಶಾಲಾ ಕಾಲೇಜುಗಳಿಗೆ ಅಂದು ರಜೆ ಇರುತ್ತಾ ?

Bengaluru: ಸೆ. 11 ರಂದು ಬೆಂಗಳೂರು ಸಾರಿಗೆ ಬಂದ್: ಶಾಲಾ ಕಾಲೇಜುಗಳಿಗೆ ಅಂದು ರಜೆ ಇರುತ್ತಾ ?

by ಹೊಸಕನ್ನಡ
4 comments
Bengaluru bandh

Bengaluru bandh: ಬರುವ ಸೆಪ್ಟೆಂಬರ್ 11ನೇ ತಾರೀಖಿನಂದು ಕರ್ನಾಟಕ ರಾಜ್ಯ ಖಾಸಗಿ ವಾಹನಗಳ ಒಕ್ಕೂಟ ಬೆಂಗಳೂರು ಬಂದ್(Bengaluru bandh) ಗೆ ಕರೆ ನೀಡಿವೆ. ಅವತ್ತು ಬೆಂಗಳೂರು ಪೂರ್ತಿ ಸ್ತಬ್ಧ ಆಗಲಿದೆ. ಬೆಂಗಳೂರಿನ ಬರೋಬ್ಬರಿ 32 ಸಾವಿರ ಖಾಸಗಿ ವಾಹನ ಮಾಲೀಕರು ತಮ್ಮ 7 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ರಸ್ತೆಗೆ ಇಳಿಸದೆ ಸಂಪು ಹೂಡಲಿದ್ದಾರೆ. ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗಸ್ಟ್ 31 ನೆಯ ಕೊನೆಯ ಗಡುವನ್ನು ಸರಕಾರಕ್ಕೆ ವಿಧಿಸಿತ್ತು. ಖಾಸಗಿ ವಾಹನ ಮಾಲೀಕರ ಸಂಘ ಆದರೆ ಈ ಗಡಿ ದಾಟಿದ ಹಿನ್ನೆಲೆಯಲ್ಲಿ ಬಂದ್ ಪ್ರಸ್ತಾಪ ಬಂದಿದೆ. ಒಟ್ಟು 32 ಟ್ರಾನ್ಸ್ಪೋರ್ಟ್ ಯೂನಿಯನ್ ಗಳು ಈ ಬಂದ್ ಅನ್ನು ಬೆಂಬಲಿಸಿದೆ ರಿಕ್ಷಾಗಳು, ಬಸ್ಸುಗಳು, ಟ್ಯಾಕ್ಸಿಗಳು, ಕ್ಯಾಬ್ ಗಳು, ಏರ್ಪೋರ್ಟ್ ಕ್ಯಾಬ್ ಗಳು ಈ ಸಲ ಎಲ್ಲರೂ ಜೊತೆಯಾಗಿದ್ದು ಬೆಂಗಳೂರು ಸ್ತಬ್ಧ ಆಗಲಿದೆ ಈ ಸಂದರ್ಭ ಶಾಲಾ- ಕಾಲೇಜುಗಳ ಕಥೆ ಏನು ಎನ್ನುವುದೇ ದೊಡ್ಡ ಪ್ರಶ್ನೆ.

ಯಾಕೆ ಈ ಬಂದ್ ?
ಕರ್ನಾಟಕ ರಾಜ್ಯ ಸರ್ಕಾರವು ತನ್ನ ಜನಪ್ರಿಯ ಶಕ್ತಿ ಯೋಜನೆಯನ್ನು ತಂದ ನಂತರ ಖಾಸಗಿ ವಾಹನ ಮಾಲೀಕರು ವ್ಯಾಪಾರವಿಲ್ಲದೆ ಕಷ್ಟಪಡುವಂತಾಗಿದೆ. ಹಾಗಾಗಿ ಸರ್ಕಾರದ ಮುಂದೆ 28 ಬೇಡಿಕೆಗಳನ್ನು ಖಾಸಗಿ ವಾಹನ ಮಾಲೀಕರ ಸಂಘ ಇಟ್ಟಿತ್ತು. ಅದಕ್ಕೆ ಗಡುವನ್ನು ನಿಗದಿಪಡಿಸಿತ್ತು ಆದರೆ ಇದೀಗ ಗಡು ದಾಟಿದ ಹಿನ್ನೆಲೆಯಲ್ಲಿ ಬರುವ ಸೋಮವಾರ ಬೆಂಗಳೂರು ಬಂದ್ ನಡೆಯಲಿದೆ.

ಮುಖ್ಯ ಬೇಡಿಕೆ ಏನು?
ಆಟೋರಿಕ್ಷಾ ಗಳು ಮತ್ತು ಟ್ಯಾಕ್ಸಿ ಡ್ರೈವರ್ ಗಳು, ಶಕ್ತಿ ಯೋಜನೆ ಬಂದ ನಂತರ ಹೆಚ್ಚಿನ ಮಹಿಳೆಯರು ಮತ್ತು ಪುರುಷರು ಸರಕಾರಿ ಬಸ್ಸನ್ನು ಅವಲಂಬಿಸುತ್ತಿದ್ದಾರೆ. ನಮಗೆ ಬದುಕಲು ಕಷ್ಟವಾಗುತ್ತಿದೆ. ಹಾಗಾಗಿ ತಮಗೆ ಪರಿಹಾರ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಅರ್ಥ ಖಾಸಗಿ ಬಸ್ ಆಡಳಿತವು ಶಕ್ತಿ ಯೋಜನೆಯನ್ನು ಖಾಸಗಿ ಬಸ್ಸುಗಳನ್ನು ಅಳವಡಿಸಬೇಕು. ಮಹಿಳೆಯರು ಖಾಸಗಿ ಬಸ್ಸಿನಲ್ಲಿ ಕೂಡ ಬರಲಿ. ಅವರಿಗೆ ನಾವು ಫ್ರೀ ಟಿಕೆಟ್ಟು ಕೊಡುತ್ತೇವೆ. ಈ ಹಣವನ್ನು ಸರಕಾರ ಭರಿಸಬೇಕು ಎಂದು ಸರ್ಕಾರದ ಮುಂದೆ ಉಚಿತ ಶಕ್ತಿ ಖಾಸಗಿ ಯೋಜನೆಯನ್ನು ಮುಂದಿಟ್ಟಿವೆ. ಅಲ್ಲದೆ ಈ ಸಂಘಗಳ ಮಾಲೀಕರು ಮತ್ತು ಡ್ರೈವರ್ ಗಳು ಬೈಕ್ ಟ್ಯಾಕ್ಸಿ ಮೇಲೆ ಮುಗಿಬಿದ್ದಿದ್ದಾರೆ. ಬೈಕ್ ಟ್ಯಾಕ್ಸಿ ಬಂದ ನಂತರ ತಮ್ಮ ದೈನಂದಿನ ಗಳಿಕೆ ಕಳೆದುಹೋಗಿದೆ ಎನ್ನುತ್ತಿದ್ದಾರೆ. ಮತ್ತೊಂದು ಕಡೆ ಆಪ್ ಆಧಾರಿತ ಟ್ಯಾಕ್ಸಿ ಬುಕಿಂಗ್ ಆಡಳಿತವು ಹೆಚ್ಚಿನ ಕಮಿಷನ್ ಅನ್ನು ತಮ್ಮಿಂದ ಪಡೆಯುತ್ತಿದ್ದು ಅದನ್ನು ತಮ್ಮ ಗಳಿಕೆಯ 5 ಪರ್ಸೆಂಟ್ ಮೊತ್ತಕ್ಕೆ ಮಾತ್ರ ಸೀಮಿತ ಮಾಡುವಂತೆ ಕಾನೂನು ರೂಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

ಬಂದ್ ಕಾರಣದಿಂದ ಶಾಲಾ ಕಾಲೇಜು ಬಂದ್ ?
ಶಾಲೆಗಳಿಗೆ ಮತ್ತು ಕಾಲೇಜುಗಳಿಗೆ ಸ್ಕೂಲ್ ಬಸ್ ಅನ್ನು ಒದಗಿಸುವ ವಾಹನ ಮಾಲೀಕರು ಕೂಡ ಈ ಸಾರಿಗೆ ಸಂಸ್ಥೆಗಳ ಮೆಂಬರುಗಳೇ. ಆದುದರಿಂದ ಸಹಜವಾಗಿ ಶಾಲಾ-ಕಾಲೇಜುಗಳ ವ್ಯಾನುಗಳು ಕಾರ್ಯನಿರ್ವಹಿಸುವುದಿಲ್ಲ. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಬದಲಿ ವ್ಯವಸ್ಥೆ ಮಾಡುತ್ತಾ ಇಲ್ಲವಾ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಹೆಚ್ಚಿನ ಸಂದರ್ಭದಲ್ಲಿ ಈ ಸಾಧ್ಯತೆ ತೀರಾ ಕಡಿಮೆ. ಆದುದರಿಂದ ಶಾಲೆಗಳಿಗೆ ರಾಜ್ಯ ಘೋಷಿಸದೆ ಇದ್ದರೂ ಮಕ್ಕಳ ಹಾಜರಾತಿಯಲ್ಲಿ ತೀರ ಏರುಪೇರು ಆಗುವುದು ಖಚಿತ. ಒಂದು ವೇಳೆ ಶಾಲೆಯ ಆಡಳಿತ ಮಂಡಳಿಗಳು ಸೂಕ್ತ ವ್ಯವಸ್ಥೆ ಕಲ್ಪಿಸಿದರೆ ಶಾಲೆಗಳು ನಡೆಯಲಿವೆ ಇಲ್ಲದೆ ಹೋದರೆ ಶಾಲೆಗಳು ರಜೆ ಘೋಷಿಸದೆ ಹೋದರೂ, ಮಕ್ಕಳ ಪಾಠ ಪ್ರವಚನಗಳಿಗೆ ಅಡ್ಡಿಯಾಗುವುದಂತೂ ಖಚಿತ.

ಇದನ್ನೂ ಓದಿ: ‘ಗಜ’ ನಟಿಯ ಲವ್ವಿ ಡವ್ವಿಯ ಕುರಿತು ಶಾಕಿಂಗ್ ನ್ಯೂಸ್! ಲಕ್ಷಗಟ್ಟಲೆ ಬೆಲೆಬಾಳುವ ಗೆಜ್ಜೆ ಗಿಫ್ಟ್ ನೀಡಿದನಾ ಕಂದಾಯ ಇಲಾಖೆಯ ಅಧಿಕಾರಿ?!!!

You may also like

Leave a Comment