Tirupati: ಕಲಿಯುಗದ ವೈಕುಂಠ ಎಂದು ಕರೆಯಲ್ಪಡುವ ತಿರುಪತಿಯು ತಿಮ್ಮಪ್ಪನ (Tirupati) ದೇವಸ್ಥಾನ (temple ) ಕ್ಕೆ ಪ್ರತಿ ನಿತ್ಯ ಲಕ್ಷಾಂತರ ಭಕ್ತರಿಂದ ಪೂಜೆಗೊಳ್ಳುತ್ತದೆ. ಆದ್ದರಿಂದ ತಿರುಮಲ ದರ್ಶನಕ್ಕೆ ಮೊದಲೇ ಟಿಕೆಟ್ ಪಡೆಯಬೇಕಾಗುತ್ತದೆ. ಇದೀಗ ತಿರುಪತಿ ಶಾಸಕ ಭೂಮನ ಕರುಣಾಕರ ರೆಡ್ಡಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಟಿಟಿಡಿ ನೂತನ ಆಡಳಿತ ಮಂಡಳಿಯ ಮೊದಲ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ತಿರುಪತಿಯ ಅನ್ನಮಯ್ಯ ಭವನದಲ್ಲಿ ಆಡಳಿತ ಮಂಡಳಿ ಸಭೆ ನಡೆಸಿ ಬಳಿಕ ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಮಾತನಾಡಿ, ಟಿಟಿಡಿ ಆಡಳಿತ ಮಂಡಳಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ತಿಳಿಸಲಾಗಿದೆ.
ಸನಾತನ ಧರ್ಮದ ಬಗ್ಗೆ ಯುವ ಸಮುದಾಯಲ್ಲಿ ಭಕ್ತಿಯನ್ನು ಹೆಚ್ಚಿಸಲು, ರಾಮ ಕೋಟಿಯಂತೆ ಗೋವಿಂದ ಕೋಟಿ ಬರೆಯಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ಇನ್ನು 25 ವರ್ಷದ ಒಳಗನ ಯುವ ಸಮುದಾಯ ಗೋವಿಂದ ಕೋಟಿ ಬರೆದರೆ ಅವರ ಕುಟುಂಬಕ್ಕೆ ವಿಐಪಿ ದರ್ಶನ ನೀಡುವುದಾಗಿ ಟಿಟಿಡಿ ತಿಳಿಸಿದೆ. ಅದಲ್ಲದೆ ಎಲ್ ಕೆಜಿಯಿಂದ ಪಿಜಿವರೆಗಿನ ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ಭಗವದ್ಗೀತೆ ಪುಸ್ತಕಗಳನ್ನು ಮುದ್ರಿಸಿ ವಿತರಿಸಲು ನಿರ್ಧರಿಸಲಾಗಿದೆ ಎಂದು ಟಿಟಿಡಿ ಅಧ್ಯಕ್ಷ ತಿಳಿಸಿದ್ದಾರೆ.
ಅದಲ್ಲದೆ ಮುಂಬೈನ ಬಾಂದ್ರಾದಲ್ಲಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಮತ್ತು ಮಾಹಿತಿ ಕೇಂದ್ರವನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ಅಲ್ಲದೆ, ಮಕ್ಕಳ ಆಸ್ಪತ್ರೆಯಲ್ಲಿ 29 ತಜ್ಞರು, 15 ವೈದ್ಯರು ಮತ್ತು 300 ಉದ್ಯೋಗಿಗಳ ನೇಮಕಕ್ಕೆ ಅನುಮೋದನೆ ನೀಡಲಾಗಿದೆ. ಟಿಟಿಡಿ ಆಸ್ಪತ್ರೆಗಳಲ್ಲಿ 2.16 ಕೋಟಿ ರೂಪಾಯಿ ವೆಚ್ಚದಲ್ಲಿ ಔಷಧ ಖರೀದಿ ಹಾಗೂ 47 ವೈದಿಕ ಬೋಧಕ ಹುದ್ದೆಗಳ ನೇಮಕಕ್ಕೆ ಆಡಳಿತ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಇನ್ನು ತಿರುಮಪತಿ ತಿಮ್ಮಪ್ಪನ ಬ್ರಹ್ಮೋತ್ಸವ ಸೆಪ್ಟೆಂಬರ್ 18 ರಿಂದ 26 ರವರೆಗೆ ನಡೆಯಲಿದೆ. ಅಧಿಕ ಮಾಸದ ಕಾರಣ ನವರಾತ್ರಿ ಬ್ರಹ್ಮೋತ್ಸವವು ಅಕ್ಟೋಬರ್ ನಲ್ಲಿ ನಡೆಯಲಿದೆ. ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರು, ಸೆಪ್ಟೆಂಬರ್ 18 ರಂದು ಧ್ವಜಾರೋಹಣ ನಡೆಸಿ ಸಾಲಕಟ್ಲ ಬ್ರಹ್ಮೋತ್ಸವಕ್ಕೆ ರೇಷ್ಮೆ ವಸ್ತ್ರಗಳನ್ನು ಅರ್ಪಿಸಲಿದ್ದಾರೆ. ಅದೇ ದಿನ ಟಿಟಿಡಿ ಕ್ಯಾಲೆಂಡರ್ ಮತ್ತು ಡೈರಿಗಳನ್ನು ಅನಾವರಣಗೊಳಿಸಲಾಗುತ್ತದೆ.
ಮುಖ್ಯವಾಗಿ 2 ಕೋಟಿ ವೆಚ್ಚದಲ್ಲಿ ಚಂದ್ರಗಿರಿ ಮೂಲಸ್ಥಾನ ದೇವಸ್ಥಾನದ ಪುನರ್ ನಿರ್ಮಾಣ, 49.5 ಕೋಟಿ ವೆಚ್ಚದಲ್ಲಿ ಟಿಟಿಡಿ ನೌಕರರ ವಸತಿ ನಿಲಯಗಳ ನವೀಕರಣ ಹಾಗೂ ಉಳಿದಿರುವ 413 ಹುದ್ದೆಗಳ ಭರ್ತಿಗೆ ಸರ್ಕಾರದ ಅನುಮತಿಗಾಗಿ ಅನುಮತಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: ರೈತರಿಗೆ ಬಿಗ್ ಶಾಕ್- ಇನ್ಮುಂದೆ ಇಂತವರ ಖಾತೆಗೆ ಬರೋದಿಲ್ಲ PM ಕಿಸಾನ್ ಹಣ !! ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆಯಾ ?!
