Home » Dharmasthala temple: ಧರ್ಮಸ್ಥಳ ಪ್ರೈವೇಟ್ ದೇವಸ್ಥಾನವೇ ಅಥವಾ ಸಾರ್ವಜನಿಕವೇ ? – ಇಲ್ಲಿದೆ ನೋಡಿ ನೀವು ಬೆಚ್ಚಿ ಬೀಳೋ ವಿವರ !

Dharmasthala temple: ಧರ್ಮಸ್ಥಳ ಪ್ರೈವೇಟ್ ದೇವಸ್ಥಾನವೇ ಅಥವಾ ಸಾರ್ವಜನಿಕವೇ ? – ಇಲ್ಲಿದೆ ನೋಡಿ ನೀವು ಬೆಚ್ಚಿ ಬೀಳೋ ವಿವರ !

2 comments
Dharmasthala temple

Dharmasthala temple: ಧರ್ಮಸ್ಥಳ(Dharmasthala) ಪ್ರೈವೇಟ್ ದೇವಸ್ಥಾನವೇ ಅಥವಾ ಸಾರ್ವಜನಿಕ ದೇವಸ್ಥಾನವೇ ಎನ್ನುವ ಬಗ್ಗೆ ಇನ್ನೂ ಹಲವರಿಗೆ ಅನುಮಾನಗಳಿವೆ. ಹೆಚ್ಚಿನ ಮಂದಿ ಇದು ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರ ತಲೆಮಾರಿನಿಂದ ಬಂದದ್ದು, ಅದು ಹೆಗ್ಗಡೆಯವರ ಖಾಸಗಿ ಸ್ವತ್ತು ಎಂದು ಅಂದುಕೊಂಡಿದ್ದಾರೆ. ಇವತ್ತು ನಾವು ಸತ್ಯವನ್ನು ತಿಳಿದುಕೊಳ್ಳುವ ಸಮಯ. ‘ಶ್ರೀ ಕ್ಷೇತ್ರ ಧರ್ಮಸ್ಥಳ'(Shree kshetra dharmasthala Temple)ಖಾಸಗಿ ದೇವಸ್ಥಾನವೇ ಅಥವಾ ಸಾರ್ವಜನಿಕ ದೇವಸ್ಥಾನವೇ ಎನ್ನುವ ಪ್ರಶ್ನೆ ಮತ್ತು ತಿಳಿದುಕೊಳ್ಳುವ ಕುತೂಹಲ ನಿಮಗೂ ಇದೆ ಅಂದುಕೊಂಡು ಈ ಸತ್ಯ ಸಂಗತಿಗಳ ಲೇಖನ.

ಸರಳವಾಗಿ ಹೇಳಬೇಕೆಂದರೆ, ‘ಖಾಸಗಿ ದೇವಸ್ಥಾನ'(Private temple)ಅಂತ ಯಾವುದೂ ಇಲ್ಲ. ಹಿಂದೂಗಳ ಎಲ್ಲರ ಮನೆಯಲ್ಲೂ ಮೂರ್ತಿ ಅಥವಾ ಫೋಟೊ ಇಟ್ಟು ಪೂಜೆ ಮಾಡುವುದು ಸಾಮಾನ್ಯ. ಒಂದು ವೇಳೆ ನೀವು ಮನೆಯಲ್ಲಿಯೇ ಪೂಜೆ ನಡೆಸಲು ದೇವರನ್ನು ಇಟ್ಟು ಅಥವಾ ಪ್ರತಿಷ್ಠಾಪಿಸಿ ಪೂಜೆ ಪುರಸ್ಕಾರ ಮಾಡುತ್ತಿದ್ದೀರಿ ಅಂದುಕೊಳ್ಳಿ. ಆಗ ಅದಕ್ಕೆ ಪೂಜೆಯ ಮನೆ ಪೂಜಾ ಗ್ರಗೃಹ ಅನ್ನಬಹುದು ಅಥವಾ ಗುಡಿ ಎನ್ನಬಹುದು. ತಮ್ಮ ತಮ್ಮ ಮನೆಯ ಒಳಗೆ ಇರುವ ಪೂಜಾ ಸ್ಥಳಗಳಿಗೆ ದೇವಸ್ಥಾನ ಅಂತ ಯಾರು ಹೇಳುವುದಿಲ್ಲ. ಆದುದರಿಂದ ‘ಖಾಸಗಿ ದೇವಸ್ಥಾನ’ ಎನ್ನುವ ಪದ ಬಳಕೆಯೇ ಸರಿಯಲ್ಲ.

ಹಾಗಾದ್ರೆ ಧರ್ಮಸ್ಥಳದ ದೇವಸ್ಥಾನವು ಏನು ?

ಯಾವ ಪೂಜಾ ಸ್ಥಳಕ್ಕೆ ನಾವು ಅಥವಾ ನಮ್ಮ ಕುಟುಂಬ ಮಾತ್ರ ಪೂಜೆಗೆ ಭಾಗವಹಿಸುತ್ತದೆಯೋ, ಅದು ಮಾತ್ರ ಖಾಸಗಿ ಪೂಜಾ ಸ್ಥಳವಾಗುತ್ತದೆ ಅಥವಾ ಗುಡಿಯಾಗುತ್ತದೆ. ಒಂದು ವೇಳೆ ಯಾವುದೇ ಪೂಜಾ ಸ್ಥಳ ಅಥವಾ ಪೂಜಾ ಮಂದಿರಕ್ಕೆ ಹೊರಗಿನ ವ್ಯಕ್ತಿಗಳು ಅಂದರೆ ಸಾರ್ವಜನಿಕ ವ್ಯಕ್ತಿಗಳು ಬಂದು ಪೂಜೆ ಮಾಡಲು ಅವಕಾಶ ಕಲ್ಪಿಸಿದರೆ ಆಗ ಅದು ಖಾಸಗಿ ಗುಡಿಯಾಗಿ ಉಳಿಯುವುದಿಲ್ಲ. ಧರ್ಮಸ್ಥಳದಲ್ಲಿ ಕೂಡ ಇದೇ ಆಗಿದ್ದು. ಧರ್ಮಸ್ಥಳ ಯಾವ ಕಾರಣಕ್ಕೂ ‘ಖಾಸಗಿ ದೇವಸ್ಥಾನ’ ( ಈ ಪದ ಬಳಕೆಯೇ ಸರಿಯಲ್ಲ, ಅದು ಬೇರೆ ವಿಷಯ !) ಆಗಲು ಸಾಧ್ಯವೇ ಇಲ್ಲ. ಏಕೆಂದರೆ ಒಬ್ಬಿಬ್ಬರಲ್ಲ, ಲಕ್ಷಾಂತರ ಮಂದಿ ಧರ್ಮಸ್ಥಳಕ್ಕೆ ಬರ್ತಾರೆ. ಲಕ್ಷ ಲಕ್ಷ ದುಡ್ಡು ತಂದು ಸುರೀತಾರೆ. ಹಾಗಾಗಿ ಇದು ‘ ಪ್ರೈವೇಟ್ ದೇವಸ್ಥಾನ’ ಆಗಲು ಅಸಾಧ್ಯ !

ಇಲ್ಲಿ ಇನ್ನೊಂದು ವಿಷಯ ಏನೆಂದರೆ, ಇದು ಸಾರ್ವಜನಿಕ ದೇವಸ್ಥಾನ ಅಲ್ಲ, ಇದು ಪ್ರೈವೇಟ್ ದೇವಸ್ಥಾನ ಅಂತಲೇ ಇಟ್ಟುಕೊಳ್ಳೋಣ. ನಾವು ಮೊದಲೇ ಹೇಳಿದಂತೆ ಲಕ್ಷಾಂತರ ಮಂದಿ ಬಂದು ಕೋಟ್ಯಂತರ ರೂಪಾಯಿ ದುಡ್ಡು ಹುಂಡಿಗೆ ಸುರಿಯುತ್ತಿದ್ದಾರೆ. ಇದು ಖಾಸಗಿ ದೇವಸ್ಥಾನ ಆಗಿದ್ದರೆ, ಅಲ್ಲಿ ಬರುವ ಹುಂಡಿಯ ದುಡ್ಡನ್ನು ಖಾಸಗಿ ಆದಾಯ ಎಂದು ಪರಿಗಣಿಸಬೇಕಾಗುತ್ತದೆ. ಖಾಸಗಿ ಆದಾಯಕ್ಕೆ ಆದಾಯ ತೆರಿಗೆ ಪಾವತಿಸಲೇಬೇಕು, ಇದು ಸರ್ಕಾರದ ನಿಯಮ. ಈ ನಿಯಮ ಎಲ್ಲಾ ಭಾರತೀಯರೂ ಪಾಲಿಸಲೇ ಬೇಕು. ಆದರೆ ಶುರುವಿನಿಂದ ಈ ದಿನದ ತನಕ ದೇವಸ್ಥಾನದ ಆದಾಯಕ್ಕೆ ಟ್ಯಾಕ್ಸ್ ಕಟ್ಟಿದ ವ್ಯಕ್ತಿಯಲ್ಲ ಈ ವೀರೇಂದ್ರ ಹೆಗ್ಗಡೆ.

ಇದು ಖಾಸಗಿ ಆಸ್ತಿಯಾಗಿದ್ದರೆ ಅವರು ಅಥವಾ ಅವರ ಕುಟುಂಬ ಈಗಿರುವ ಇನ್ ಕಮ್ ಟ್ಯಾಕ್ಸ್ ರೂಲ್ಸ್ ನ ಪ್ರಕಾರ ನಿಯತ್ತಾಗಿ 30% ಟ್ಯಾಕ್ಸ್ ಕಟ್ಟಬೇಕಾಗಿತ್ತು. ಜತೆಗೆ ಸೆಸ್ ಬೇರೆ ತೆರಬೇಕಿತ್ತು. ಆದ್ರೆ ಕಾನೂನು ಮುರಿಯುವುದರಲ್ಲಿ ಆತ ಕಾನೂನು ಪಂಡಿತ. ಒಂದು ಕಡೆ ನಮ್ಮ ಕುಟುಂಬದ ಆಸ್ತಿ, ಪ್ರೈವೇಟ್ ದೇವಸ್ಥಾನ ಅನ್ನೋದು, ಮತ್ತೊಂದು ಕಡೆ ಸಾರ್ವಜನಿಕ ದೇವಸ್ಥಾನದ ಎಲ್ಲಾ ಲಾಭಗಳನ್ನು ಪಡೆದುಕೊಳ್ಳೋದು ಹೆಗ್ಗಡೆಯ ಹಾಬಿ. ಬೇಕಾದ ಹಾಗೆ ಪ್ಲೇಟ್ ಬದಲಾಯಿಸಿ ಟ್ಯಾಕ್ಸ್ ಕದಿಯುತ್ತಾ ಬಂದಿದ್ದಾರೆ ‘ಮಾತು ತಪ್ಪದ ಮಂಜುನಾಥ ‘ ನಾಮಾಂಕಿತ, ಬಹುಪರಾಕ್, ಡಾಕ್ಟರ್, ರಾಜಶ್ರೀ, ಪದ್ಮಶ್ರೀ, ಶ್ರೀ ಶ್ರೀ ವೀರೇಂದ್ರ ಹೆಗ್ಗಡೆ. ಈಗ ಹೆಗ್ಗಡೆ ಕರ್ಮಕಾಂಡ ಬಯಲಾಗಿದೆ. ತನ್ನ ಇಳಿ ವಯಸ್ಸಿನಲ್ಲಿ ಛೀಕಾರಕ್ಕೆ ಹೆಗ್ಗಡೆ ಈಗ ಗುರಿಯಾಗಿದ್ದಾರೆ. ಇಷ್ಟರ ತನಕ ಪಡೆದುಕೊಂಡ ಮತ್ತು ‘ಕೊಂಡು ಕೊಂಡ’ ಒಳ್ಳೆಯ ಹೆಸರು ಈಗ ಅರ್ಧ ಭಾಗ ಅಳಿಸಿ ಹೋಗಿದೆ. ಉಳಿದ ಹೆಸರನ್ನು ಉಳಿಸಿಕೊಳ್ಳಲು ವ್ಯರ್ಥ ಪ್ರಯತ್ನ ಸಾಗಿದೆ.
Ref case No.: CCIT/PNG/136(2),2009-10, dt.10.3.2010)

ಇದನ್ನೂ ಓದಿ: Charmadi ghat: ಮಧ್ಯರಾತ್ರಿ ಚಾರ್ಮಾಡಿ ಘಾಟ್ ನಲ್ಲಿ ಕೆಟ್ಟು ನಿಂತ ಬಸ್- ಸಹಾಯಕ್ಕಾಗಿ ಟ್ವೀಟ್ ಮಾಡಿದ ಪ್ರಯಾಣಿಕ- ನಂತರ ಆದದ್ದನ್ನು ಕೇಳಿದ್ರೆ ನೀವೇ ಶಾಕ್ ಆಗ್ತೀರಾ !!

You may also like

Leave a Comment