Pavitra Lokesh-Naresh: ಇತ್ತೀಚಿನ ಕೆಲ ದಿನಗಳಿಂದ ತೆಲುಗು ನಟ ನರೇಶ್ ಮತ್ತು ಪವಿತ್ರಾ ಲೋಕೇಶ್(Pavitra Lokesh-Naresh) ಅವರದ್ದೇ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಮದುವೆಯಾಗುವ ಫೋಟೋ ಹರಿಬಿಟ್ಟ ಜೋಡಿ, ಮತ್ತೆ ಲಿಪ್ ಲಾಕ್ ಮಾಡಿ ಹನಿಮೂನ್ ಎಂದೆಲ್ಲ ಹೇಳಿ ಮದುವೆಯೇ ಆಗಿಬಿಟ್ಟಿತೇನೋ ಎಂಬ ಮಟ್ಟಿಗೆ ಸಂಚಲನ ಸೃಷ್ಟಿ ಮಾಡಿದ್ದು ಸುಳ್ಳಲ್ಲ.
ಇವರಿಬ್ಬರ ಲವ್ವಿ – ಡವ್ವಿ ಕಹಾನಿ ನೋಡಿ ಇಬ್ಬರ ಮದುವೆಯೇ ಆಯಿತೆನೋ ಅನ್ನೋ ಹಾಗೆ ಎಲ್ಲರಿಗೂ ಕಾಗೆ ಹಾರಿಸಿ,ಕೊನೆಗೆ ಇದೆಲ್ಲ ‘ಮತ್ತೆ ಮದುವೆ’ ಸಿನಿಮಾ ಮಾಡಿದ್ದು ಎಂದು ಎಲ್ಲರೂ ಬಾಯಿ ಮುಚ್ಚುವ ಹಾಗೆ ಮಾಡಿದ್ದ ಜೋಡಿ ಇದೀಗ ಮತ್ತೆ ಸುದ್ದಿಯಾಗುತ್ತಿದೆ. ಈ ಜೋಡಿ ಕಿರುತೆರೆಯಲ್ಲಿ ನಟಿಸುತ್ತಿದೆ ಎನ್ನಲಾಗಿದೆ.
ಟಾಲಿವುಡ್ (Tollywood)ಜನಪ್ರಿಯ ನಟ ನರೇಶ್ ವಿಜಯ ಕೃಷ್ಣ ಮತ್ತು ಕನ್ನಡದ ನಟಿ ಪವಿತ್ರಾ ಲೋಕೇಶ್ ಅವರ ಪ್ರೇಮ(Love)ಪುರಾಣ ಅರಿಯದವರೇ ಕಮ್ಮಿ. ಈ ಜೋಡಿ ಜೊತೆಯಾಗಿ ಕಿರುತೆರೆಯಲ್ಲಿ ಬಣ್ಣ ಹಚ್ಚುತ್ತಿದ್ದು, ಪವಿತ್ರ ಲೋಕೇಶ್ ಮತ್ತು ನರೇಶ್ ಜೋಡಿ ಎಲ್ಲರ ಮುಂದೆ ಮುತ್ತಿನ ಮಳೆ ಹರಿಸೋದು ಹೊಸತೇನಲ್ಲ. ಟಿವಿ ಶೋವೊಂದರಲ್ಲಿ ಬಹಿರಂಗವಾಗಿ ಮುತ್ತಿಟ್ಟು ಎಲ್ಲರ ಕೆಂಗಣ್ಣಿಗೆ ಗುರಿಯಾಗಿ ಟ್ರೊಲ್ ಆಗಿದ್ದು ಇದೆ.
ವೇದಿಕೆ ಮೇಲೆ ಪವಿತ್ರಾ ಲೋಕೇಶ್ ನರೇಶ್ ಕೆನ್ನೆಗೆ ಮುತ್ತು ಕೊಟ್ಟಿದ್ದು, ಆದ್ರೆ ಇಷ್ಟು ದಿನ ಅವರು ತಮ್ಮ ಸಿನಿಮಾ ಪ್ರಚಾರಕ್ಕಾಗಿ ಇಷ್ಟೇಲ್ಲ ಮಾಡಿದ್ರು ಅಂತ ನೆಟ್ಟಿಗರು ಭಾವಿಸಿದ್ದರು. ಆದ್ರೆ, ಈ ಬಾರಿ ಬರಿ ಕಿಸ್ ಮಾತ್ರವಲ್ಲ ಮಸ್ತ್ ಡಾನ್ಸ್ ಕೂಡ ಮಾಡಿದ್ದರಂತೆ ಈ ಜೋಡಿ. ವಿನಾಯಕ ಚೌತಿ ಹಬ್ಬದ ಸಲುವಾಗಿ ಈಟಿವಿ ವಾಹಿನಿಗಾಗಿ ‘ಸ್ವಾಮಿ ರಾರಾ’ ಎಂಬ ಕಾರ್ಯಕ್ರಮ ಆಯೋಜನೆ ಮಾಡಿದೆ. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಬಂದಿದ್ದ ನರೇಶ್ ಪವಿತ್ರಾ ಜೋಡಿ ಎಲ್ಲರ ಗಮನ ಸೆಳೆಯಲು ಮುಂದಾಗಿದ್ದಾರೆ.ಈ ಸಂದರ್ಭ ನರೇಶ್ ಅವರಿಗೆ ಕಿಸ್ ಮಾಡುವ ಮೂಲಕ ಪವಿತ್ರ ಲೋಕೇಶ್ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದು, ಈ ಕುರಿತ ದೃಶ್ಯ ಸ್ವಾಮಿ ರಾ ರಾ ಶೋನ ಪ್ರೋಮೋದಲ್ಲಿ ನೋಡಬಹುದು.
ಇದನ್ನೂ ಓದಿ: Bigg Boss OTT: ಬಿಗ್ ಬಾಸ್ ಸೀಸನ್-10ರ ಆರಂಭಕ್ಕೆ ಡೇಟ್ ಫಿಕ್ಸ್ ?! ಈ ಬಾರಿ ಶೋ ನಡೆಸೋದು ಇವ್ರೆನಾ?
