Home » ಮಂಗಳೂರು: ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್‌ನ್ಯೂಸ್‌! ಉಚಿತ ಲ್ಯಾಪ್‌ಟಾಪ್‌ ಗಾಗಿ ಅರ್ಜಿ ಆಹ್ವಾನ!! ತ್ವರೆ ಮಾಡಿ

ಮಂಗಳೂರು: ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್‌ನ್ಯೂಸ್‌! ಉಚಿತ ಲ್ಯಾಪ್‌ಟಾಪ್‌ ಗಾಗಿ ಅರ್ಜಿ ಆಹ್ವಾನ!! ತ್ವರೆ ಮಾಡಿ

by Mallika
2 comments
Free laptop

Free laptop: ಪ್ರಥಮ/ದ್ವಿತೀಯ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಗುಡ್‌ನ್ಯೂಸ್‌. ಉಚಿತ ಲ್ಯಾಪ್‌ ಪಡೆಯಲು ನಿಮ್ಮಿಂದ ಅರ್ಜಿ ಆಹ್ವಾನಿಸಲಾಗಿದೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅರ್ಹ ನೊಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ ಪೈಕಿ 2023-24ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ/ದ್ವಿತೀಯ ಪಿಯುಸಿ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್‍ಟಾಪ್‍ಗಳನ್ನು(Free laptop) ನೀಡಲಾಗುತ್ತಿದೆ.

ಗಮನಸಬೇಕಾದ ಅಂಶಗಳು:
ಎಸ್.ಎಸ್.ಎಲ್.ಸಿ ಯಲ್ಲಿ ಹೆಚ್ಚು ಅಂಕಗಳನ್ನು ಪಡೆದಿರುವ (ಮೆರಿಟ್ ಆಧಾರದ ಮೇಲೆ) ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು ಹಾಗೂ ಸಮನಾದ ಅಂಕಗಳನ್ನು ಪಡೆದಾಗ ಫಲಾನುಭವಿಯ ನೊಂದಣಿ ಸದಸ್ಯತ್ವದ ಹಿರಿತನವನ್ನು ಆಯ್ಕೆಗೆ ಪರಿಗಣಿಸಲಾಗುವುದು.
ಫಲಾನುಭವಿಯು ಮಂಡಳಿಯಲ್ಲಿ ಮಾರ್ಚ್ 2023ರ ಅಂತ್ಯಕ್ಕೂ ಮೊದಲು ನೋಂದಣಿಯಾಗಿರಬೇಕು.
ಫಲಾನುಭವಿಯ ಒಂದು ಮಗುವಿಗೆ ಮಾತ್ರ ಈ ಸೌಲಭ್ಯವನ್ನು ನೀಡಲಾಗುವುದು.
ಸರ್ಕಾರದ ಯಾವುದೇ ಯೋಜನೆಯಲ್ಲಿ ಇದುವರೆಗೂ ಲ್ಯಾಪ್‍ಟಾಪ್ ಪಡೆದಿರಬಾರದು.

ಕಾರ್ಮಿಕ ಅಧಿಕಾರಿಯವರ ಕಛೇರಿ, ದಕ್ಷಿಣ ಕನ್ನಡ ಉಪ ವಿಭಾಗ-1, ಮಂಗಳೂರು ಹಾಗೂ ದಕ್ಷಿಣ ಕನ್ನಡ ಉಪ ವಿಭಾಗ-2, ಮಂಗಳೂರು ಇವರ ಕಾರ್ಯ ವ್ಯಾಪ್ತಿಯಲ್ಲಿ ನೊಂದಣಿಯಾಗಿರುವ ಕಾರ್ಮಿಕರು ಈ ಸೌಲಭ್ಯವನ್ನು ಪಡೆಯಲು ಇಚ್ಚಿಸಿದ್ದಲ್ಲಿ, ಅರ್ಜಿ ನಮೂನೆಯನ್ನು ಫಲಾನುಭವಿಯು ನೋಂದಣಿಯಾಗಿರುವ ಸಂಬಂಧಪಟ್ಟ ಹಿರಿಯ/ಕಾರ್ಮಿಕ ನಿರೀಕ್ಷಕರ ಕಚೇರಿಯಿಂದ ಪಡೆದು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಇದೇ ಸೆ.22ರಂದು ಕೊನೆಯ ದಿನ. ಅನಂತರ ಬರುವ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸುವುದಿಲ್ಲ.

ಹೆಚ್ಚಿನ ಮಾಹಿತಿಗೆ ಕಾರ್ಮಿಕ ಅಧಿಕಾರಿಯವರ ಕಚೇರಿ, ದಕ್ಷಿಣ ಕನ್ನಡ ಉಪ ವಿಭಾಗ-1, ಮಂಗಳೂರು ಹಾಗೂ ದಕ್ಷಿಣ ಕನ್ನಡ ಉಪ ವಿಭಾಗ-2, ಮಂಗಳೂರು, 2 ಮತ್ತು 3ನೇ ಮಹಡಿ, ಕಾರ್ಮಿಕ ಭವನ, ಶರಭತ್‍ಕಟ್ಟೆ, ಯೆಯ್ಯಾಡಿ, ಕೊಂಚಾಡಿ ಅಂಚೆ, ಮಂಗಳೂರು-575008 ಅಥವಾ ಸಂಬಂಧಪಟ್ಟ ಹಿರಿಯ/ಕಾರ್ಮಿಕ ನಿರೀಕ್ಷಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಬಸ್ ನಲ್ಲಿ ಪ್ರಯಾಣಿಸುವಾಗ ಮಹಿಳೆಯ ಜತೆ ಅನುಚಿತ ವರ್ತನೆ : ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

You may also like

Leave a Comment