Home » Shilpa Shetty: ‘ವಯಸ್ಸಾದೋರು, ಯುವಕರು.. ಯಾರೊಂದಿಗೆ ನಿಮಗೆ ಸುಖ ಜಾಸ್ತಿ’? ಎಂದ ನೆಟ್ಟಿ- ಏನಂದ್ರು ಗೊತ್ತಾ ಶಿಲ್ಪಾ ಶೆಟ್ಟಿ ?!

Shilpa Shetty: ‘ವಯಸ್ಸಾದೋರು, ಯುವಕರು.. ಯಾರೊಂದಿಗೆ ನಿಮಗೆ ಸುಖ ಜಾಸ್ತಿ’? ಎಂದ ನೆಟ್ಟಿ- ಏನಂದ್ರು ಗೊತ್ತಾ ಶಿಲ್ಪಾ ಶೆಟ್ಟಿ ?!

2 comments
Shilpa Shetty

Shilpa shetty: ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳಿಗೆ, ಸಿನಿಮಾ ನಟ- ನಟಿಯರಿಗೆ ಇಂಟರ್ವ್ಯೂಗಳಲ್ಲಿ ಇಲ್ಲ ಯಾವುದಾದರೂ ಕಾರ್ಯಕ್ರಮದಲ್ಲಿ ಅವರ ವೈಯಕ್ತಿಕ ಬದುಕಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವುದು ಸಾಮಾನ್ಯವಾಗಿ ಬಿಟ್ಟಿದೆ. ಅಂತಯೇ ಇದೀಗ ಶಿಲ್ಪ ಶೆಟ್ಟಿ(Shilpa shetty) ಅವರಿಗೆ ಒಂದು ಸಂದರ್ಶನದಲ್ಲಿ ಒಬ್ಬ ನೆಟ್ಟಿಗನು ವಿಚಿತ್ರ ರೀತಿಯ ಪ್ರಶ್ನೆಯನ್ನು ಕೇಳಿದ್ದು, ಅದಕ್ಕೆ ಶಿಲ್ಪ ಶೆಟ್ಟಿ ಸಾವಧಾನದಿಂದಲೇ ಉತ್ತರಿಸಿದ್ದಾರೆ.

ಹೌದು, ಸಿನಿಮಾ ತಾರೆಯರು ಅಂದಮೇಲೆ ಅವರಿಗೆ ಸಂದರ್ಶನ, ಇಂಟರ್ವ್ಯೂಗಳು ಅಥವಾ ಸಿನಿಮಾ ಪ್ರಮೋಷನ್ಗಳು, ಟ್ರೇಲರ್ ರಿಲೀಸ್, ಸಿನಿಮಾ ರಿಲೀಸ್ ಎಂದೆಲ್ಲಾ ಕಾರ್ಯಕ್ರಮ ಇದ್ದೇ ಇರುತ್ತದೆ. ಇಲ್ಲಿ ಕಾರ್ಯಕ್ರಮಕ್ಕೆ ಸೀಮಿತವಾದ ಪ್ರಶ್ನೆಗಳು ಮಾತ್ರ ಬರುವುದಲ್ಲದೆ ವೈಯಕ್ತಿಕ ವಿಚಾರಗಳನ್ನು ಕೆದಕುವ, ಲೈಂಗಿಕತೆಗೆ ಸಂಬಂದಿಸಿದ ಬೇರೆ ಬೇರೆ ಪ್ರಶ್ನೆಗಳನ್ನು ಕೇಳುತ್ತಾರೆ. ಕೇಳಿದ್ದನ್ನು ನೋಡಿದ್ದೇವೆ. ಈ ಸಿನಿಮಾದ ಪ್ರಚಾರ ಭಾಗವಾಗಿ ಆಗಾಗ ಶಿಲ್ಪಾ ಶೆಟ್ಟಿ ಮಾಧ್ಯಮದ ಮುಂದೆ ಕಾಣಿಸಿಕೊಳ್ಳುತ್ತಿದ್ದು ಸಂದರ್ಶನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ವೇಳೆ ನಡೆದ ಸಂದರ್ಶನವೊಂದರಲ್ಲಿ ನಟಿಗೆ ಕುತೂಹಲದ ಪ್ರಶ್ನೆ ಎದುರಾಗಿದೆ. ಅದಕ್ಕೆ ಶಿಲ್ಪ ಶೆಟ್ಟಿ ಸಾವಧಾನದಿಂದಲೇ ಉತ್ತರಿಸಿದ್ದಾರೆ. ಅದು ಸದ್ಯ ವೈರಲ್ ಆಗುತ್ತಿದೆ.

ಅಂದಹಾಗೆ ಸಂದರ್ಶನದಲ್ಲಿ ‘ಹೇಗೇಗೋ ಇರೋ ವೃದ್ಧರು, ಯುವಕರು ಎಲ್ಲರೂ ನಿಮ್ಮನ್ನು ನೋಡ್ತಾರೆ. ಇಂತ ವೇಳೆ ನಿಮಗೆ ಸುಖ ಯಾವುದರಿಂದ ಸಿಗುತ್ತದೆ?’ ಎಂದು ತರ್ಲೆ ವ್ಯಕ್ತಿಯೊಬ್ಬ ಶಿಲ್ಪಾ ಶೆಟ್ಟಿ ಅವರನ್ನು ಪ್ರಶ್ನಿಸಿದ್ದಾರೆ. ಇದನ್ನು ಕೇಳಿದ ನಟಿ ಶಿಲ್ಪಾ ಶೆಟ್ಟಿ ಸ್ವಲ್ಪ ಹೊತ್ತು ಏನು ಹೇಳುಬೇಕು ಎಂದು ತಿಳಿಯದೇ ಸುಮ್ಮನಾಗಿ ಮತ್ತೆ ನಿಧಾನಾಗಿ ಉತ್ತರಕೊಟ್ಟಿದ್ದಾರೆ. ನೋಡಿ, ಜನರನ್ನು ಖುಷಿ ಪಡಿಸುವಲ್ಲಿ ನನ್ನ ಸುಖ ಇದೆ. ಜನರಿಗೆ ಮನೋರಂಜನೆ ಕೊಡುವುದೇ ನಮ್ಮ ಕೆಲಸ. ಅದರಲ್ಲಿಯೇ ನಟರಾದವರಿಗೆ ಖುಷಿ ಇರುತ್ತದೆ. ಯಾವುದರಲ್ಲಿ ಖುಷಿ ಸಿಗುತ್ತದೆ ಎಂದು ತೀರ್ಪು ಕೊಡಲು ನನಗೆ ಸಾಧ್ಯವಿಲ್ಲ. ನನಗೆ ದುಡ್ಡು ಕೊಟ್ಟರೆ ಮಾತ್ರ ಟಿವಿಗಳಲ್ಲಿ ತೀರ್ಪುಗಾರಳಾಗಿ ಹೋಗ್ತೇನೆ. ಸುಮ್ಮನೆ ತೀರ್ಪು ಕೊಡಲ್ಲ ಎಂದು ಜೋರಾಗಿ ನಕ್ಕಿದ್ದಾರೆ. ಅಲ್ಲಿ ನೆರೆದವರು ಕೂಡ ಶಿಲ್ಪಾ ಅವರ ಮಾತನ್ನು ಕೇಳಿ ನಕ್ಕಿದ್ದಾರೆ.

ಇನ್ನು ಕರಾವಳಿ ಬೆಡಗಿ, ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿ ಅವರು ಸದ್ಯ ಸುಖಿ ಚಿತ್ರದಲ್ಲಿ ಬಿಜಿ ಇದ್ದಾರೆ. ಈ ಚಿತ್ರವು ಇದೇ 22ರಂದು ಬಿಡುಗಡೆಯಾಗಲಿದೆ. ಸದ್ಯ ನಟಿ ತಮ್ಮ ಚಿತ್ರದ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದೆ. ಅದರ ಪ್ರಕಾರ, ಶಿಲ್ಪಾ ಇದರಲ್ಲಿ ಅತೃಪ್ತ ಗೃಹಿಣಿಯ ಪಾತ್ರ ನಿರ್ವಹಿಸುತ್ತಿರುವುದನ್ನು ತಿಳಿಯಬಹುದು. ಅವಳು ತನ್ನ ಕೆಲಸ ಮಾಡುವ ಗಂಡನನ್ನು ನೋಡಿಕೊಳ್ಳುವುದು, ಅವನ ಅನಾರೋಗ್ಯದ ತಂದೆಗೆ ಚಿಕಿತ್ಸೆ ನೀಡುವುದು ಮತ್ತು ಶಾಲೆಗೆ ಹೋಗುವ ಮಗನನ್ನು ಕರೆದುಕೊಂಡು ಹೋಗುವುದು… ಹೀಗೆ ತನ್ನ ಪ್ರಾಪಂಚಿಕ ದಿನಚರಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಮಹಿಳೆಯಾಗಿದ್ದಾಳೆ. ತನ್ನ ಶಾಲೆಯ ಸ್ನೇಹಿತರ ಮರು ಭೇಟಿಯ ಕಾರ್ಯಕ್ರಮಕ್ಕೆ ಕರೆ ಬಂದಾಗ, ಹಳೆಯ ಸ್ನೇಹಿತರನ್ನು ನೋಡಲು ಉತ್ಸುಕಳಾಗಿರುತ್ತಾಳೆ ನಾಯಕಿ. ಆದರೆ ಪತಿಯು ದೆಹಲಿಗೆ ಭೇಟಿ ನೀಡಬೇಕಿರುವ ಹಿನ್ನೆಲೆಯಲ್ಲಿ ಇದಕ್ಕೆ ಅನುಮತಿ ನೀಡುವುದಿಲ್ಲ. ಆಗ ನಾಯಕಿ ಸುಖಿ ತನ್ನ ಪತಿಗೆ ತಿಳಿಸದೆ ಹೋಗುವ ನಿರ್ಧಾರ ಮಾಡಿದಾಗ ಮುಂದೇನಾಗುತ್ತದೆ ಎನ್ನುವುದೇ ಈ ಚಿತ್ರದ ಕುತೂಹಲ.

ಇದನ್ನೂ ಓದಿ: Bangluru bandh: ಬೆಂಗಳೂರು ಬಂದ್ ಎಫೆಕ್ಟ್- ಇಂತವರು ರಸ್ತೆಗೆ ಬಂದ್ರೆ ಬೀಳುತ್ತೆ ಮೊಟ್ಟೆ ಏಟು !! ಸಂಘಟನೆಗಳಿಂದ ಖಡಕ್ ಎಚ್ಚರಿಕೆ

You may also like

Leave a Comment