Home » School Holiday: ನಾಳೆ ಶಾಲೆಗಳಿಗೆ ರಜೆ ಘೋಷಣೆ!

School Holiday: ನಾಳೆ ಶಾಲೆಗಳಿಗೆ ರಜೆ ಘೋಷಣೆ!

by Mallika
1 comment
School Holiday

School Holiday: ರಾಜ್ಯ ಸರಕಾರದ ಶಕ್ತಿ ಯೋಜನೆಯಿಂದ ಖಾಸಗಿ ಸಾರಿಗೆ ಉದ್ಯಮಕ್ಕೆ ಬಹಳ ನಷ್ಟ ಉಂಟಾಗಿದ್ದು, ಇದಕ್ಕೆ ಪರಿಹಾರ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಯನ್ನು ಪೂರೈಸಬೇಕೆಂದು ಒತ್ತಾಯಿಸಿ, ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಮುಷ್ಕರವನ್ನು ನಾಳೆ ಕೈಗೊಂಡಿದೆ.

ಇಂದು ರಾತ್ರಿಯಿಂದಲೇ ಈ ಸಾರಿಗೆ ಬಂದ್‌ ಆಗಲಿದ್ದು, ಕೆಲವು ಖಾಸಗಿ ಶಾಲೆಗಳಿಗೆ ಸೋಮವಾರ ಬೆಂಗಳೂರಿನಲ್ಲಿ ರಜೆ(School Holiday) ಘೋಷಣೆ ಮಾಡಲಾಗಿದೆ. ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಬಂದ್‌ಗೆ ಶಾಲಾ ವಾಹನಗಳ ಮಾಲೀಕರು ಬೆಂಬಲ ನೀಡಿದ್ದಾರೆ.

ಶಾಲಾ ಮಕ್ಕಳಿಗೆ ಹೋಗಲು ತೊಂದರೆಯಾಗುವುದರಿಂದ ಬೆಂಗಳೂರಿನ ಆರ್ಕಿಡ್‌ ಶಾಲೆ ಸೇರಿದಂತೆ ಕೆಲವು ಖಾಸಗಿ ಶಾಲೆಗಳು ನಾಳೆ ರಜೆ ಘೋಷಣೆ ಮಾಡಿದೆ.

ಸರಕು ಸಾಗಣೆ ವಾಹನ, ಶಾಲಾ ವಾಹನ, ಟ್ಯಾಕ್ಸಿ, ಖಾಸಗಿ ಬಸ್‌, ಓಲಾ, ಉಬರ್‌, ಆಟೋ ಸೋಮವಾರ ರಸ್ತೆಗಿಳಿಯುವುದಿಲ್ಲವೆಂದು ಹೇಳಲಾಗಿದೆ. ಅನೇಕ ಶಾಲೆಗಳು ರಜೆ ಘೋಷಣೆ ಮಾಡಿದೆ. ಹಾಗೆ ಮತ್ತಷ್ಟು ಶಾಲೆಗಳು ರಜೆ ಘೋಷಣೆ ಮಾಡಲಿದೆ ಎಂದು ಒಕ್ಕೂಟದ ಪ್ರಮುಖ ಜಿ ರವಿಕುಮಾರ್‌ ಹೇಳಿದ್ದಾರೆ.

ಕರ್ನಾಟಕ ಖಾಸಗಿ ಶಾಲಾ ವಾಹನಗಳ ಯೂನಿಯನ್‌ ವತಿಯಿಂದ ಖಾಸಗಿ ಸಾರಿಗೆ ಮುಷ್ಕರಕ್ಕೆ ಬೆಂಬಲ ನೀಡಿದೆ.

ಇದನ್ನೂ ಓದಿ: ನೀವು ಹೊಸದಾಗಿ ಮದುವೆಯಾದವರಾ? ನಿಮಗೆ ಸರಕಾರ ಕೊಡುತ್ತೆ ಹಣ, ಈ ಯೋಜನೆ ಬಗ್ಗೆ ಗೊತ್ತಿದೆಯೇ?

You may also like

Leave a Comment