Mangalore news: ಯುವತಿಯೊಬ್ಬಳನ್ನು ಕದ್ರಿ ಪೊಲೀಸರು ಠಾಣೆಯಲ್ಲಿ ಹಿಡಿದಿಡಲು ಹರಸಾಹಸ ಪಟ್ಟಂತಹ ಘಟನೆಯೊಂದು ನಡೆದಿದೆ(Mangalore news). ಇದರ ವೀಡಿಯೋ ಈಗ ವೈರಲ್ ಆಗಿದೆ.
ಸೆ.1 ರಂದು ಬೆಳಗ್ಗೆ 6.45 ಕ್ಕೆ ಪಂಪ್ವೆಲ್‌ನಲ್ಲಿ ಮೆಡಿಕಲ್ ಒಂದಕ್ಕೆ ಬಂದಿದ್ದ ಯುವತಿಯೋರ್ವಳು ಎಲ್ಲರ ಮೇಲೆ ಆಕ್ರಮಣಕಾರಿಯಾಗಿ ವರ್ತನೇ ಮಾಡುತ್ತಿದ್ದು, ಇದನ್ನು ಕಂಡ ರೌಂಡ್ಸ್ ಅಬಕಾರಿ ಇಲಾಖೆಯವರು ಆಕೆಯನ್ನು ಹಿಡಿದು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನ ಪಟ್ಟಾಗ ಆಕೆ ದಾಳಿ ಮಾಡಲು ಮುಂದಾಗಿದ್ದಾಳೆ. ಕೊನೆಗೆ ಯಾವುದೇ ಉಪಾಯ ತೋಚದೆ ಯುವತಿಯನ್ನು ಕದ್ರಿ ಠಾಣೆಗೆ ತಂದಿದ್ದಾರೆ.
ಯುವತಿ ಅಲ್ಲಿ ಕೂಡಾ ಮಹಿಳಾ ಪೊಲೀಸರಿಗೆ ತನ್ನ ಕಾಲಿನಿಂದ ಒದೆಯುವ ದೃಶ್ಯಗಳು ವೀಡಿಯೋದಲ್ಲಿ ಕಂಡು ಬಂದಿದೆ. ನಂತರ ಯುವತಿಯ ಕೈಗೆ ಕೋಳ ತೊಡಿಸಿ ಕೈ ಕಾಲು ಕಟ್ಟಿ ಆಸ್ಪತ್ರೆಗೆ ಒಯ್ದಿದ್ದು ತಪಾಸಣೆ ಮಾಡಲಾಗಿದೆ.
ಡ್ರಗ್ಸ್ ಏನಾದರೂ ತಗೊಂಡು ಈ ರೀತಿ ವರ್ತನೆ ಮಾಡುತ್ತಿದ್ದಾಳೆಯೇ ಎಂದು ಚೆಕ್ ಮಾಡಿದಾಗ, ಇದೆಲ್ಲ ನೆಗೆಟಿವ್ ಬಂದಿದೆ. ನಂತರ ಆಕೆಯ ಪೋಷಕರ ಬಗ್ಗೆ ಕೇಳಿದಾಗ ಏನೂ ಮಾಹಿತಿ ನೀಡುತ್ತಿರಲಿಲ್ಲ. ಒಮ್ಮೆ ಹಿಂದಿ, ಇಂಗ್ಲೀಷ್ ಮಾತನಾಡುವ ಈಕೆಯನ್ನು ಕೊನೆಗೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಒಯ್ಯುವ ಸಂದರ್ಭದಲ್ಲಿ ನನ್ನ ಮನೆ ಇಲ್ಲಿದೆ ಎಂದಿದ್ದಾಳೆ. ಕೊನೆಗೆ ಆಕೆಯ ಪೋಷಕರಿಗೆ ಮಾಹಿತಿ ನೀಡಿ, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
