Home » ಪುತ್ತೂರು: ಕಲಾವಿದನೋರ್ವನ ಬಂಧನ- ಚೆಕ್‌ಬೌನ್ಸ್‌ ಕೇಸ್‌

ಪುತ್ತೂರು: ಕಲಾವಿದನೋರ್ವನ ಬಂಧನ- ಚೆಕ್‌ಬೌನ್ಸ್‌ ಕೇಸ್‌

2 comments
Check bounce case

Check bounce case : ಪುತ್ತೂರು: ಕಲಾವಿದನೋರ್ವನನ್ನು ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು ಬಂದಿಸಿರುವ ಘಟನೆಯೊಂದು ನಡೆದಿದೆ. ಯಕ್ಷಗಾನ ಮೇಳವೊಂದರ ಚೆಕ್‌ಬೌನ್ಸ್‌ ಪ್ರಕರಣಕ್ಕೆ(Check bounce case) ಸಂಬಂಧಪಟ್ಟಂತ ಘಟನೆ ಇದಾಗಿದೆ. ಬದಿಯಡ್ಕದ ಶಬರೀಶ್‌ ಮಾನ್ಯ ಎಂಬುವವರೇ ಬಂಧಿತ ಆರೋಪಿ.

2021ರ ನವೆಂಬರ್‌ನಲ್ಲಿ ಸುಮಾರು 3.5 ಲಕ್ಷ ಹಣವನ್ನು ಶಬರೀಶ್‌ ಮಾನ್ಯ ಅವರು ಹನುಮಗಿರಿ ಯಕ್ಷಗಾನ ಮೇಳದ ಕಲಾವಿದರಾಗಿದ್ದ ಸಂದರ್ಭದಲ್ಲಿ ಹಣ ಪಡೆದು ಚೆಕ್‌ ನೀಡಿದ್ದರು. ಆದರೆ ಅನಂತರ ಅವರು ಪಡೆದ ಹಣ ನೀಡದೆ, ಮೇಳಕ್ಕೂ ಬಾರದೆ ತಲೆಮರೆಸಿಕೊಂಡಿರುವುದಾಗಿ ಹನುಮಗಿರಿ ಮೇಳದವರ ಕಡೆಯಿಂದ ಪೊಲೀಸ್‌ ಠಾಣೆಗೆ ದೂರು ನೀಡಲಾಗಿತ್ತು.

ನ್ಯಾಯಾಲಯದ ವಿಚಾರಣೆಗೆ ಹಾಜರಾಗದಿರುವುದರಿಂದ ನ್ಯಾಯಾಲಯವರು ಶಬರೀಶ್‌ ಅವರ ಬಂಧನಕ್ಕೆ ವಾರಂಟ್‌ ಜಾರಿ ಮಾಡಿತ್ತು. ಇದೀಗ ಸಂಪ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಲಾಯಕ್ಕೆ ಹಾಜರುಪಡಿಸಿದ್ದಾರೆ.

ಇದನ್ನೂ ಓದಿ: Heart Attack: ಊರಿನ ನಾಟಕದಲ್ಲಿ ನೃತ್ಯ ಮಾಡುತ್ತಿದ್ದ 24 ವರ್ಷದ ಯುವಕ ಕುಸಿದು ಸಾವು!

You may also like

Leave a Comment