Home » Lottery Ticket Winner: 42 ಕೋಟಿಯ ಲಾಟ್ರಿ ಗೆದ್ದ ಅಜ್ಜ, ಆದ್ರೆ ಪತ್ನಿಗೆ ಕೊಟ್ಟಿದ್ದು ಕಲ್ಲಂಗಡಿ ಹಣ್ಣು ಗಿಫ್ಟ್ ! ಯಾಕೆ ಗೊತ್ತಾ?

Lottery Ticket Winner: 42 ಕೋಟಿಯ ಲಾಟ್ರಿ ಗೆದ್ದ ಅಜ್ಜ, ಆದ್ರೆ ಪತ್ನಿಗೆ ಕೊಟ್ಟಿದ್ದು ಕಲ್ಲಂಗಡಿ ಹಣ್ಣು ಗಿಫ್ಟ್ ! ಯಾಕೆ ಗೊತ್ತಾ?

1 comment
Lottery Ticket Winner

Lottery Ticket Win: ಲಾಟರಿ ಟಿಕೆಟ್​ ಒಂದು ರೀತಿ ಅದೃಷ್ಟರಾಣಿ ಇದ್ದಂತೆ. ಅದೃಷ್ಟ ಒಲಿದರೆ ರಾತ್ರೋ ರಾತ್ರಿ ಕೋಟ್ಯಾಧಿಪತಿ ಆಗಬಹುದು. ಆದರೆ ಈ ಅದೃಷ್ಟರಾಣಿ ಖಂಡಿತವಾಗಿ ಒಳಿಯುತ್ತಾಳೆ ಅನ್ನೋ ಗ್ಯಾರಂಟಿ ಇಲ್ಲದೇ ಇರುವ ಕಾರಣ ಎಷ್ಟೋ ಜನ ಲಾಟರಿ ಟಿಕೆಟ್ ಕೊಂಡು ಕೊಳ್ಳುವ ಚಟದಿಂದ ದಿವಾಳಿಯಾಗಿದ್ದು ಇದೆ.

ಇದೀಗ ಇಲ್ಲೊಂದು ವೃದ್ಧನ ಹಣೆಬರಹವನ್ನು ಬದಲಾಯಿಸಲು, ಲಾಟರಿ ಟಿಕೆಟ್​ನಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 42 ಕೋಟಿ ರೂಪಾಯಿ ಬಂದಿದೆ(Lottery Ticket Win). ಆದ್ರೆ ಲಾಟರಿ ಗೆದ್ದ ಖುಷಿಯಲ್ಲಿ ತನ್ನ ಪತ್ನಿಗೆ ವಿಶೇಷ ಉಡುಗೊರೆ ಕೊಟ್ಟಿದ್ದಾರೆ.

ವರದಿಗಳ ಪ್ರಕಾರ, ವೃದ್ಧ ಲಾಟರಿಯಲ್ಲಿ ಗೆದ್ದ ಸಂಪೂರ್ಣ ನಗದನ್ನೇ ಆಯ್ಕೆ ಮಾಡಿದ್ದರು ಮತ್ತು ಅದರ ಅನುಸಾರ ಅವರು ಸುಮಾರು 21 ಕೋಟಿ ರೂಪಾಯಿ ಬಹುಮಾನವನ್ನು ಪಡೆದರು. ಇದಾದ ನಂತರ ಮುದುಕ ನೇರವಾಗಿ ಹಣ್ಣಿನ ಅಂಗಡಿಗೆ ಹೋಗಿ ಅಲ್ಲಿಂದ ಕಲ್ಲಂಗಡಿ ಹಣ್ಣನ್ನು ಖರೀದಿಸಿದ್ದು,
ಜೊತೆಗೆ ಹೂವಿನ ಅಂಗಡಿಯಿಂದ ಹೂಗುಚ್ಛವನ್ನೂ ಖರೀದಿಸಿ ಮನೆಗೆ ತೆರಳಿದ್ದಾರೆ.

ವೃದ್ಧ ರ ಅನುಭವದ ಪ್ರಕಾರ ತನ್ನ ಹೆಂಡತಿಯನ್ನು ಅಚ್ಚರಿಗೊಳಿಸಲು ತನ್ನ ಹೆಂಡತಿಗೆ ಕಲ್ಲಂಗಡಿ ಮತ್ತು ಹೂವಿನ ಗೊಂಚಲು ಕೊಟ್ಟು, ತನಗೆ ಇಷ್ಟು ದೊಡ್ಡ ಲಾಟರಿ ಗೆದ್ದಿದೆ ಎಂದು ಹೇಳಿದ್ದು, ಇದನ್ನು ಅರಿತ ಪತ್ನಿಯೂ ಖುಷಿಯಿಂದ ಕುಣಿದಾಡತೊಡಗಿದ್ದಾರಂತೆ.

ಸದ್ಯ ಈ ಗೆದ್ದ ಹಣವನ್ನು ಪತ್ನಿಯ ಆರೋಗ್ಯ ಹದಗೆಟ್ಟಿರುವ ಕಾರಣ ಮೊದಲು ಆಕೆಯನ್ನು ಚೆನ್ನಾಗಿ ನೋಡಿಕೊಂಡು, ಇದಾದ ನಂತರ ಅವರು ತಮ್ಮ ಕುಟುಂಬದ ಆರ್ಥಿಕ ಸಮಸ್ಯೆ ಸರಿ ಮಾಡಿ, ನಂತರ ಸ್ವಲ್ಪ ಹಣವನ್ನು ಹೂಡಿಕೆ ಮಾಡುತ್ತಾರೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ.. ನೀರಿಕ್ಷೆಗೂ ಮೀರಿದ ಕಾಂತಾರ-2 ! ಮೊದಲ ಪಾರ್ಟ್‌ಗಿಂತ ಹತ್ತು ಪಟ್ಟು ಬಜೆಟ್ ಏರಿಸಿದ ಸೆಟ್!

You may also like

Leave a Comment