Vijayapura :ಇಂದು (ಶನಿವಾರ) ವಿಜಯಪುರ (Vijayapura) ಜಿಲ್ಲೆಯ ಇಂಡಿ ತಾಲೂಕಿನ ಅಂಜುಟಗಿ ಬಳಿ ಬುಲೆರೋ ವಾಹನವೊಂದರಲ್ಲಿ ಕರುಗಳ ಸಾಗಾಟ ಮಾಡುತ್ತಿದ್ದ ಸಂದರ್ಭ ಅಪಘಾತ ನಡೆದಿದ್ದು, ಸದ್ಯ, 60ಕ್ಕು ಅಧಿಕ ಕರುಗಳ ರಕ್ಷಣೆ ಮಾಡಲಾಗಿದೆ.
ಬುಲೆರೋ ಪಿಕಪ್ ವಾಹನ ಅಪಘಾತದ (Accident)ಸಂದರ್ಭದಲ್ಲಿ ವಾಹನದಲ್ಲಿ 60ಕ್ಕೂ ಅಧಿಕ ಕರುಗಳ ಕೈಕಾಲು ಕಟ್ಟಿ, ಬಾಯಿಗೆ ಟಿಕ್ಸೋ ಬಿಗಿದು ಕರುಗಳನ್ನ ಹೇರಿಕೊಂಡ ಹೋಗುತ್ತಿದ್ದರು ಎನ್ನಲಾಗಿದೆ. ಮಹಾರಾಷ್ಟ್ರದ ಸಾತಾರಾ ಕಡೆಯಿಂದ ವಿಜಯಪುರಕ್ಕೆ ಬರುತ್ತಿದ್ದ ವಾಹನದಲ್ಲಿ ಅಕ್ರಮವಾಗಿ ಗೋವುಗಳ ಸಾಗಾಟ ಮಾಡುತ್ತಿದ್ದ ಕಿಡಿಗೇಡಿಗಳು ಸ್ಥಳೀಯ ರೈತರ ಮುಂದೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಇದರ ಜೊತೆಗೆ ವಾಹನದಲ್ಲಿ ಮಾರಕಾಸ್ತ್ರಗಳು ಕೂಡ ಪತ್ತೆಯಾಗಿವೆ ಎನ್ನಲಾಗಿದೆ.
ಖದೀಮರು ಕರುಗಳ ಸಾಗಾಟ ಮಾಡುವ ಸಲುವಾಗಿ ಜೊತೆಗೆ ಜನರನ್ನು ಯಾಮಾರಿಸಲು ವಾಹನದ ಮೇಲೆ ಸ್ವಾಮಿ ಸಮರ್ಥ ಎಂದು ಬರೆದುಕೊಂಡಿದ್ದು, ಅಕ್ರಮ ಗೋ ಸಾಗಾಟಕ್ಕೆ ವಾಹನದ ಮೇಲೆ ಹಿಂದೂ ದೇವರ, ದಾರ್ಶನಿಕರ ಫೋಟೋ, ಹೆಸರನ್ನು ಬಳಸಿಕೊಂಡಿದ್ದಾರೆ. ಇದರ ಜೊತೆಗೆ ವಾಹನದಲ್ಲಿ ಪತ್ತೆಯಾದ ಮಾರಕಾಸ್ತ್ರಗಳನ್ನು ಕರುಗಳನ್ನ ಕತ್ತರಿಸಲು ತಂದಿರುವ ಅನುಮಾನ ಭುಗಿಲೆದ್ದಿದೆ. ಅಪಘಾತವಾದ ಬಳಿಕ ವಾಹನ ಸ್ಥಳದಲ್ಲಿಯೇ ಬಿಟ್ಟು ಭೂಪರು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: Ganesh Chaturthi: ಈ ಮೂರು ದಿನ ಬ್ಯಾಂಕ್ ಬಂದ್ ಗ್ರಾಹಕರೇ!! ಪಟ್ಟಿ ಇಲ್ಲಿದೆ, ಪರಿಶೀಲಿಸಿ
