Home » Saving Scheme: ಗೃಹಿಣಿಯರೇ ಕೂತಲ್ಲೇ ನಿಮ್ಮನ್ನು ಲಕ್ಷಾದಿಪತಿಯಾಗಿಸುತ್ತೆ ಈ ಹೊಸ ಸ್ಕೀಮ್ !! ಅರ್ಜಿ ಹಾಕಲು ಮುಗಿಬಿದ್ದ ನಾರಿಯರು

Saving Scheme: ಗೃಹಿಣಿಯರೇ ಕೂತಲ್ಲೇ ನಿಮ್ಮನ್ನು ಲಕ್ಷಾದಿಪತಿಯಾಗಿಸುತ್ತೆ ಈ ಹೊಸ ಸ್ಕೀಮ್ !! ಅರ್ಜಿ ಹಾಕಲು ಮುಗಿಬಿದ್ದ ನಾರಿಯರು

by ಹೊಸಕನ್ನಡ
1 comment
Government Scheme for Housewife

Government Scheme for Housewife:ಮನೆಯ ಜವಾಬ್ದಾರಿ ನಿಭಾಯಿಸುವ ಪ್ರತಿ ಮಹಿಳೆಯರು ಉಳಿತಾಯ ಮಾಡುವ ಕಡೆಗೆ ಹೆಚ್ಚಿನ ಗಮನ ಹರಿಸುವುದು ಸಹಜ. ಉಳಿತಾಯ ಒಂದು ಉತ್ತಮ ಹವ್ಯಾಸವಾಗಿದ್ದು, ಭವಿಷ್ಯದಲ್ಲಿ ಎದುರಾಗುವ ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ನೆರವಾಗುತ್ತದೆ. ಅಷ್ಟೇ ಅಲ್ಲದೆ, ವೃದ್ಧಾಪ್ಯದಲ್ಲಿ ಹಣಕಾಸಿನ(Finance) ಅಗತ್ಯತೆಯನ್ನು ಪೂರೈಸಲು ಕೂಡ ಉಳಿತಾಯ(Savings) ನೆರವಾಗುತ್ತದೆ.

ಸಾಮಾನ್ಯವಾಗಿ ಉಳಿಕೆಗಿಂತ ಹೆಚ್ಚಾಗಿ ಹಣ ನೀರಿನಂತೆ ಖರ್ಚಾಗುವುದನ್ನು ಉಳಿಸಲು ವಿಮಾ ಪಾಲಿಸಿ ಮಾಡುವುದು ಉತ್ತಮ. ಅದರಲ್ಲಿಯೂ ಸುರಕ್ಷತೆಯ ದೃಷ್ಟಿಯಿಂದ ಗಮನಿಸಿದರೆ ಅಂಚೆ ಕಚೇರಿ (Post Office) ವಿಮಾ ಯೋಜನೆಯಲ್ಲಿ ಹೂಡಿಕೆ( Government Scheme for housewife ) ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು.ಮನೆಯಲ್ಲಿರುವ ಗೃಹಿಣಿಯರಿಗೆ ಆದಾಯ ಕೂಡ ಇಲ್ಲದೆ  ಕೇವಲ 1000 ರೂಪಾಯಿಗಳನ್ನು ಹೂಡಿಕೆ (Investment Options for Housewife)ಮಾಡುವ ಹೆಚ್ಚಿನ ಲಾಭ ಪಡೆಯಬಹುದು.

RD:
ಸುರಕ್ಷಿತ ಆಯ್ಕೆಯನ್ನು ಬಯಸಿದರೆ ಬ್ಯಾಂಕ್‌ನಲ್ಲಿ ಆರ್‌ಡಿಯನ್ನು ತೆರೆಯಬಹುದಾಗಿದ್ದು, ಹೂಡಿಕೆದಾರರು ಆರ್‌ಡಿಯಲ್ಲಿ ಸ್ಥಿರ ಲಾಭವನ್ನು ಪಡೆಯಬಹುದು.ಸುಮಾರು 6.5 ಶೇಕಡಾ ದರದಲ್ಲಿ ಬಡ್ಡಿಯ ಲಾಭವನ್ನು ಪಡೆಯಬಹುದು.ಅಲ್ಪಾವಧಿಗೆ ಹೂಡಿಕೆ ಮಾಡುವುದಾದರೆ  RD ಅತ್ಯುತ್ತಮ ಆಯ್ಕೆಯಾಗಿದ್ದು, 5 ವರ್ಷಗಳ ಕಾಲ ಅಂಚೆ ಕಚೇರಿಯಲ್ಲಿ ಆರ್‌ಡಿ ಮಾಡಿಸಿಕೊಳ್ಳಬಹುದು.

ಸಾರ್ವಜನಿಕ ಭವಿಷ್ಯ ನಿಧಿ (PPF) :
ಗೃಹಿಣಿಯರು PPF ಅಂದರೆ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆಯಲ್ಲಿ ಕನಿಷ್ಠ 500 ಮತ್ತು ಗರಿಷ್ಠ 1.5 ಲಕ್ಷ ರೂ.ವರೆಗೆ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಶೇಕಡಾ 7.1 ರ ದರದಲ್ಲಿ ಬಡ್ಡಿಯ ಲಾಭವನ್ನು ಪಡೆಯಲಿದ್ದಾರೆ. ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆಯಲ್ಲಿ 15 ವರ್ಷಗಳ ಕಾಲ ನಿರಂತರವಾಗಿ ಹೂಡಿಕೆ ಮಾಡಬೇಕಾಗಿದ್ದು, ಬಳಿಕ ಸಂಪೂರ್ಣ ಹಣವನ್ನು ಬಡ್ಡಿಯೊಂದಿಗೆ ಹಿಂತಿರುಗಿಸಲಾಗುತ್ತದೆ.

SIPನಲ್ಲಿ ಹೂಡಿಕೆ : 
ಗೃಹಿಣಿಯರು ಮ್ಯೂಚುವಲ್ ಫಂಡ್‌ಗಳಲ್ಲಿ SIP ಮಾಡಲು ಅವಕಾಶವಿದ್ದು, ಇದರಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ದೊಡ್ಡ ಮಟ್ಟದ ಲಾಭವನ್ನು ಪಡೆಯಬಹುದಾಗಿದೆ.  SIP ನಲ್ಲಿ ರಿಟರ್ನ್ ಬಡ್ಡಿ 12 ಶೇಕಡಾವಿದ್ದು, ಈ ಬಡ್ಡಿ ದರ ಕೆಲವೊಮ್ಮೆ ಹೆಚ್ಚು ಅಥವಾ ಕಡಿಮೆ ಆಗುತ್ತದೆ. ಪ್ರತಿ ತಿಂಗಳು 1000 ರೂಪಾಯಿಗಳ ಶಿಪ್ ಮಾಡಿದರೆ ,15 ವರ್ಷಗಳಲ್ಲಿ 1,80,000 ರೂಪಾಯಿಗಳನ್ನು ಇಲ್ಲಿ ಹೂಡಿಕೆ ಮಾಡಿದರೆ ನೀವು ಶೇಕಡಾ 12 ರ ದರದಲ್ಲಿ ಬಡ್ಡಿಯಾದರೆ,  3,24,576 ರೂ ಬಡ್ಡಿ ನಿಮ್ಮ ಖಾತೆಗೆ ಜಮೆ ಆಗಲಿದೆ. ಈ ಮೂಲಕ 15 ವರ್ಷಗಳಲ್ಲಿ 5,04,576 ರೂ. ಆದಾಯ ಪಡೆಯಬಹುದು.

ಇದನ್ನೂ ಓದಿ: Chaitra Kundapura: ಚೈತ್ರಾ ಕುಂದಾಪುರ ವಂಚನೆ ಪ್ರಕರಣ- ದುಡ್ಡು ಕೊಟ್ಟ ಉದ್ಯಮಿ ‘ಗೋವಿಂದ’ ಬಾಬುಗೆ ಎದುರಾಯ್ತು ಹೊಸ ಸಂಕಷ್ಟ

You may also like

Leave a Comment