Home » Actress Vijayalakshmi: ವಿಜಯ ಲಕ್ಷ್ಮಿಯ 7 ಬಾರಿ ಗರ್ಭಪಾತ ಪ್ರಕರಣಕ್ಕೆ ರೋಚಕ ಟ್ವಿಸ್ಟ್- ಕೊನೆಗೂ ಯೂಟರ್ನ್ ಹೊಡೆದೇ ಬಿಟ್ಲಾ ಈ ನಟಿ !!

Actress Vijayalakshmi: ವಿಜಯ ಲಕ್ಷ್ಮಿಯ 7 ಬಾರಿ ಗರ್ಭಪಾತ ಪ್ರಕರಣಕ್ಕೆ ರೋಚಕ ಟ್ವಿಸ್ಟ್- ಕೊನೆಗೂ ಯೂಟರ್ನ್ ಹೊಡೆದೇ ಬಿಟ್ಲಾ ಈ ನಟಿ !!

by ಹೊಸಕನ್ನಡ
2 comments
Actress Vijayalakshmi

Actress Vijayalakshmi: ಕಳೆದ ಕೆಲವು ಸಮಯಗಳಿಂದ ಸ್ವಸ್ತಿಕ್, ಕನಕಾಂಬರಿ ಹಾಗೂ ಸೂರ್ಯವಂಶ ಸೇರಿದಂತೆ ಹಲವು ಕನ್ನಡ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿರುವ ವಿಜಯಲಕ್ಷ್ಮಿ(Actress vijayalakshmi) ಈಗ ತಮಿಳುನಾಡಿನಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ಆದರೆ ಅದು ಸಿನಿಮಾದಿಂದಲ್ಲ, ಅವರ ವೈಯಕ್ತಿಕ ಬದುಕಿನಿಂದ.

ಹೌದು, ಇತ್ತೀಚೆಗೆ ಬಹುಭಾಷಾ ನಟಿ ವಿಜಯಲಕ್ಷ್ಮಿ ಅವರು ನಾಮ್ ತಮಿಳರ್ ಕಚ್ಚಿ ನಾಯಕ ಸೀಮನ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದು ಅವರು ಏಳು ಬಾರಿ ಗರ್ಭಪಾತ ಮಾಡಿದ್ದಾರೆ ಎಂದು ದೂರಿ ದೂರು ಕೂಡ ನೀಡಿದ್ದರು. ಈ ವಿಚಾರವಂತು ಸಿನಿಮಾ ರಂಗದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಈ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇಷ್ಟು ದಿನ ಈ ಕುರಿತು ಬಾಯಿ ಬಾಯಿ ಬಡ್ಕೊಳ್ತಿದ್ದ ನಟಿ ವಿಜಯಲಕ್ವ್ಮಿ ಇದೀಗ ಯೂಟರ್ನ್ ಹೊಡೆದಿದ್ದಾರೆ.

ಅಂದಹಾಗೆ ಸೀಮನ್ ತನ್ನನ್ನು ಬಳಸಿಕೊಂಡು ಮೋಸ ಮಾಡಿದ್ದಾನೆ ಎಂದು ವಿಜಯಲಕ್ಷ್ಮಿ ಈಗ ಒಂದು ದಶಕದಿಂದ ಹೋರಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಮೊನ್ನೆ ಮೊನ್ನೆ ಕೂಡ ಸೀಮನ್ ಅವರು ಅನೇಕ ಬಾರಿ ಗರ್ಭಪಾತ ಮಾಡಿಸಿದ್ದಾರೆ ಎಂದು ಆರೋಪಿಸಿ ಮಾಧ್ಯಮಗಳ ಮುಂದೆ ವಿಜಯಲಕ್ವ್ಮಿ ಮಾತನಾಡಿದ್ದರು. ನಾನು ಸೀಮಾನ್ ವಿಷಯಗಳನ್ನು ಹೊರಗೆ ತೆಗೆಯುತ್ತಿರುವೆ ಎಂದು ನನ್ನನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ನಾನು ಪಬ್ಲಿಸಿಟಿಗಾಗಿ ಇದನ್ನು ಮಾಡುತ್ತಿಲ್ಲ ಆದರೆ ಅವರ ಕಡೆಯವರು ತಪ್ಪಾಗಿ ಬಿಂಬಿಸುತ್ತಿದ್ದಾರೆ. ನಾವು ಒಟ್ಟಿಗೆ ಕುಳಿತುಕೊಂಡು ಮಾತನಾಡಿಕೊಂಡು ಸೆಟಲ್ ಮಾಡಿಕೊಳ್ಳಬೇಕಾದ ವಿಷಯಗಳು ದೊಡ್ಡದಾಗಿದೆ. ಭವಿಷ್ಯದಲ್ಲಿ ಎಷ್ಟು ಬೆದರಿಕೆ ಬಂದರೂ ಹಿಂದೆ ಸರಿಯುವುದಿಲ್ಲ’ ಎಂದು ಮಾಧ್ಯಮಗಳ ಜೊತೆ ಮಾತನಾಡುತ್ತಾ ವಿಜಯಲಕ್ಷ್ಮಿ ಕಣ್ಣೀರಿಟ್ಟಿದ್ದರು.

ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದರು. ಆದಾಗ್ಯೂ, ಈ ಪ್ರಕರಣದಲ್ಲಿ ಸೀಮನ್ ಪೊಲೀಸರ ಮುಂದೆ ಹಾಜರಾಗಬೇಕಿತ್ತು. ಆದರೆ ಈ ಹಿನ್ನೆಲೆಯಲ್ಲೇ ವಿಜಯಲಕ್ಷ್ಮಿ ಯು-ಟರ್ನ್ ತೆಗೆದುಕೊಂಡಿದ್ದಾರೆ. ಅಂದು ವಿಜಯ ಲಕ್ಷ್ಮೀ ಕಂಪ್ಲೆಂಟ್ ಕೊಟ್ಟ ಬಳಿಕ ಪೊಲೀಸರು ಕೂಡ ತ ನಿಖೆಯನ್ನು ತೀವ್ರಗೊಳಿಸಿದ್ದರು. ಆದರೀಗ ಈ ಬೆನ್ನಲ್ಲೇ ಪ್ರಕರಣವು ಅನಿರೀಕ್ಷಿತ ತಿರುವು ಪಡೆದಿದ್ದು, ಸೀಮನ್ ವಿರುದ್ಧದ ಪ್ರಕರಣವನ್ನು ಹಿಂತೆಗೆದುಕೊಂಡಿದ್ದೇನೆ ಎಂದು ನಟಿ ವಿಜಯಲಕ್ಷ್ಮಿ ಹೇಳಿದ್ದಾರೆ. ವಿಜಯಲಕ್ವ್ಮಿ ಅವರ ಈ ನಡೆ ಇದೀಗ ಭಾರೀ ಅಚ್ಚರಿ ಮೂಡಿಸಿದೆ.

ಏನಂದ್ರು ವಿಜಯಲಕ್ವ್ಮಿ?
ಸೀಮನ್ ಪವರ್ ಮುಂದೆ ಸೋಲನ್ನು ಒಪ್ಪಿಕೊಳ್ಳುವುದಾಗಿ ಅವರು ಹೇಳಿದರು. ಅವರು ಚೆನ್ನಾಗಿರಬೇಕೆಂದು ನಾನು ಬಯಸುತ್ತೇನೆ .. ಅವರು ಹೆಚ್ಚು ರಾಜಕೀಯ ಯಶಸ್ಸನ್ನು ಸಾಧಿಸಲು ಬಯಸಿದ್ದರು. ಸೀಮನ್ ಅವರಿಂದ ಯಾವುದೇ ನಗದು ಅಥವಾ ಇತರ ಯಾವುದೇ ಹಣವನ್ನು ತೆಗೆದುಕೊಂಡಿಲ್ಲ ಎಂದು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಇದನ್ನೂ ಓದಿ: Chattisghar: ‘ಗದರ್‌ 2’ ಕ್ಲೈಮಾಕ್ಸ್ ನೋಡಿ ‘ಹಿಂದೂಸ್ತಾನ್ ಜಿಂದಾಬಾದ್’ ಎಂದು ಭಾವುಕನಾದ ಯುವಕ – ಸ್ಥಳದಲ್ಲೇ ಹೊಡೆದು ಕೊಂದ ಪಾಪಿ ಸ್ನೇಹಿತರು !!

You may also like

Leave a Comment