Chaitra kundapura: ಚೈತ್ರಾ ಕುಂದಾಪುರ(Chaitra kundapura) ಟಿಕೆಟ್ ವಂಚನೆ ಪ್ರಕರಣ ಪಡೆದುಕೊಳ್ಳುತ್ತಿರುವ ತಿರುವುಗಳು ಒಂದಾ ಎರಡಾ. ನೀವೇ ಪ್ರತಿದಿನ ಆಕೆಯ ಬಣ್ಣಗಳು ಬಯಲಾಗುವುದನ್ನು ನೋಡುತ್ತಿದ್ದೀರಿ. ನಿನ್ನೆ ತಾನೇ ಈ ಕೇಸಿನ 3ನೇ ಆರೋಪಿ ಅಭಿನವ ಹಾಲಸ್ವಾಮಿಗಳು ಬಂದನವಾಗಿದ್ದಾರೆ. ತಲೆಮರೆಸಿಕೊಂಡು ಒರಿಸ್ಸಾ ಹೋಗಿದ್ದ ಈ ಸ್ವಾಮಿಯನ್ನು ಬೆನ್ನಟ್ಟಿದ ಕರ್ನಾಟಕದ ಸಿಸಿಬಿ ಪೊಲೀಸರು ಬರ್ಮುಡಾ ಚಡ್ಡಿ, ಟೀ ಶರ್ಟ್ ನಲ್ಲಿರುವಾಗಲೇ ಹಿಡಿದಿದ್ದಾರೆ. ಇದೀಗ ಈ ಸ್ವಾಮಿಯ ಬಂದನವಾಗುತ್ತಿದ್ದಂತೆ ಚೈತ್ರಾ ಕುಂದಾಪುರಳ ನೊರೆ ಉಕ್ಕಿದ ಬಾಯಲ್ಲಿ ನಗು ಉಕ್ಕಿ ಬರುತ್ತಿದೆ.
ಹೌದು, ಅಭಿನವ ಹಾಲಶ್ರೀ ಬಂಧನವಾಗುತ್ತಿದ್ದಂತೆ ಚೈತ್ರಾ ಕುಂದಾಪುರಳಿಗೆ ಖುಷಿಯೋ ಖುಷಿ. ಮುಖದಲ್ಲಿ ಭಾರಿ ಮಂದಹಾಸ. ಬಾಯಲ್ಲಿ ನೊರೆ ಬಂದು ಅಸ್ವಸ್ಥಳಾಗಿದ್ದ ಚೈತ್ರಾ ಇದೀಗ ನಗು ಬೀರುತ್ತಾ ಮಾಧ್ಯಮಗಳ ಎದುರು ಬಂದಿದ್ದಾಳೆ. ಈಗಂತೂ ಮುಖದಲ್ಲಿ ಫುಲ್ ಸ್ಮೈಲೋ ಸ್ಮೈಲ್ ಅನ್ನುವಂತಾಗಿದೆ. ಇದಕ್ಕೆಲ್ಲಾ ಕಾರಣ ಸ್ವಾಮಿಜಿ ಅರೆಸ್ಟ್ ಆಗಿರುವುದು.
ಅಂದಹಾಗೆ ಸ್ನೇಹಿತರೆ ನಿಮಗೆ ನೆನಪಿರಬಹುದು. ಸಿಸಿಬಿ ಪೊಲೀಸರು ಚೈತ್ರಾಳನ್ನು ಬಂಧಿಸಿದ ಮರುದಿನ ಆಕೆಯನ್ನು ವಿಚಾರಣೆಗೆ ಕರೆದುಕೊಂಡು ಬಂದಾಗ ಚೈತ್ರಾ ಕುಂದಾಪುರಳು ಸ್ವಾಮೀಜಿ ಸಿಕ್ಕಬೀಳಲಿ ಎಲ್ಲಾ ದೊಡ್ಡ ದೊಡ್ಡವರ ಹೆಸರು ಹೊರಗೆ ಬೀಳುತ್ತದೆ, ಸ್ವಾಮೀಜಿ ಸಿಕ್ಕಿಬಿದ್ದ ನಂತರ ಎಲ್ಲಾ ಬಣ್ಣ ಬಯಲಾಗ್ತದೆ. ಇಂದಿರಾ ಕ್ಯಾಂಟೀನ್ ಬಿಲ್ ಬಾಕಿ ಇದೆ. ಹೀಗಾಗಿ ಈ ಷಡ್ಯಂತ್ರ ಮಾಡಲಾಗಿದೆ ಎಂದು ಅಬ್ಬರಿಸಿ ಮಾಧ್ಯಮಗಳೆದುರು ಕೂಗಾಡಿ ಹೋಗಿದ್ದಳು. ಚೈತ್ರಾ ಹೇಳಿದಂತೆ ಇದೀಗ ಸ್ವಾಮೀಜಿ ಸಿಕ್ಕಿ ಬಿದ್ದಿದ್ದಾರೆ. ಈಗಂತೂ ಆಕೆ ಬಾರಿ ಖುಷಿಯಾಗಿಬಿಟ್ಟಿದ್ದಾಳೆ.
ಒಟ್ಟಿನಲ್ಲಿ ಚೈತ್ರ ಕುಂದಾಪುರ ಹೇಳಿದಂತೆ ಇದೀಗ ಸ್ವಾಮೀಜಿಯ ಬಂಧನವಾಗಿದೆ ಇನ್ನೂ ವಿಚಾರಣೆ ಬಳಿಕ ಸತ್ಯಗಳು ಹೊರಬರಲಿದೆ. ಇಂದು ಸ್ವಾಮಿಯನ್ನು ಕೋರ್ಟ್ ಗೆ ಹಾಜರುಪಡಿಸಲಾಗುತ್ತದೆ. ಆಗ ಏನೆಲ್ಲಾ ಹೊಸ ಹೊಸ ವಿಚಾರಗಳು ಹೊರಬರುತ್ತಿವೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: UGC-NET: ಅಭ್ಯರ್ಥಿಗಳೇ ಗಮನಿಸಿ, UGC- NET ಪರೀಕ್ಷೆಯ ದಿನಾಂಕ ಪ್ರಕಟ !! ನಿಮ್ಮ ಪರೀಕ್ಷೆ ಯಾವಾಗಿದೆ ಗೊತ್ತಾ?
