Fish price: ಮಾಂಸಪ್ರಿಯರಲ್ಲಿ ಹೆಚ್ಚಿನವರಿಗೆ ಮೀನು ಎಂದರೆ ತುಂಬಾ ಇಷ್ಟ. ಇದನ್ನು ತಿನ್ನಲು ತುಂಬಾ ಆಸೆ ಪಡುತ್ತಾರೆ. ಆದರೆ ಕೆಲವು ಮೀನಿನ(Fish) ಒಂದು ಕೆ ಜಿ ಬೆಲೆ(Fish price) ಕೇಳಿ ಸುಮ್ಮನಾಗುತ್ತಾರೆ. ಆದರೀಗ ಈ ತಲೆ ಬಿಸಿ ಬೇಡ. ಏಕೆಂದರೆ ಮೀನು ಪ್ರಿಯರಿಗೊಂದು ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು ಇಲ್ಲಿ ನೀವು ಯಾವ ಮೀನು ಕೊಂಡರೂ ಕೆಜಿಗೆ ಕೇವಲ 99 ಮಾತ್ರ.
ಶ್ರಾವಣ ಕಳೆದು ಇದೀಗ ಗೌರಿ ಗಣೇಶ ಹಬ್ಬವೂ ಕಳೆದಿದೆ. ಹೀಗಾಗಿ ಇಷ್ಟು ದಿನಗಳ ಕಾಲ ಸಸ್ಯಹಾರಿಗಳಾಗಿದ್ದ ಜನರು ಇದೀಗ ಮಾಂಸಾಹಾರದತ್ತ ಕಣ್ಣಿಟ್ಟಿದ್ದಾರೆ. ಎಲ್ಲಾ ಮಾಂಸಾಹಾರ ಪ್ರಿಯರು ಒಮ್ಮೆಲೇ ಮಾರುಕಟ್ಟೆಗೆ ಇಳಿದುದರಿಂದ ಅವುಗಳ ಬೆಲೆಯಲ್ಲೂ ಏರಿಕೆಯಾಗಿದೆ. ಹೀಗಾಗಿ ಕೆಲವರು ಕೊಳ್ಳಲು ಬಂದದ್ದಕ್ಕಿಂತ ಅದರ ಅರ್ಧ ಮಾತ್ರ ಕೊಂಡೊಯ್ಯುತ್ತಿದ್ದಾರೆ. ಆದರೆ ಈ ನಡುವೆ ಮಿನು ವ್ಯಾಪಾರಿಯೊಬ್ಬ ತನ್ನ ಬಳಿ ಇರುವ ಯಾವುದೇ ಮೀನುಗಳನ್ನು ಕೊಂಡರೂ ಅದನ್ನು ಕೇವಲ 99 ರೂಗಳಿಗೆ ಮಾರುತ್ತಿದ್ದಾನೆ. ಹೀಗಾಗಿ ಜನ ಕೊಳ್ಳಲು ಮುಗಿಬಿದ್ದಿದ್ದಾನೆ.
ಹೌದು, ಚಿಕ್ಕಬಳ್ಳಾಪುರದಲ್ಲಿ (Chikkaballapura) ಮೀನು ಮಾರಾಟಗಾರನೊರ್ವ ಯಾವುದೇ ಮೀನು ತಗೊಂಡ್ರೂ 99 ರೂ. ಮಾತ್ರ ಅಂತ ಆಫರ್ ಕೊಟ್ಟಿದ್ದು ಮೀನು (Fish) ಖರೀದಿಗಾಗಿ ಜನ ಮುಗಿಬೀಳುತ್ತಿದ್ದಾರೆ. ಆದರೆ ಈ ಆಫರ್ ಇದ್ದದ್ದು ಮಂಗಳವಾರ (ಇಂದು) ಮಾತ್ರ. ಹೀಗಾಗಿ ಇಂದು ಯಾರು ಕೂಡ ಕೊಳ್ಳಲು ಹೋಗಬೇಡಿ. ಇದು ನಿನ್ನೆಗೆ ಮುಕ್ತಾಯವಾಗಿದೆ.
ಅಂದಹಾಗೆ ಚಿಕ್ಕಬಳ್ಳಾಪುರದ ಗುಡಿಬಂಡೆ ಅಮಾನಿ ಬೈರಸಾಗರ ಕೆರೆಯಲ್ಲಿ ಮೀನು ಸಾಕಾಣಿಕೆ ಗುತ್ತಿಗೆ ಪಡೆದಿರೋ ಬಿಲಾಲ್ ಕಡಿಮೆ ದರಕ್ಕೆ ಮೀನು ಮಾರಾಟ ಮಾಡುತ್ತಿದ್ದಾರೆ. ಪ್ರತಿ ದಿನ ಯಾವುದೇ ಮೀನಿಗೂ ಕೆಜಿಗೆ 150 ರೂ. ಮಾರಾಟ ಮಾಡ್ತಿದ್ದ ಬಿಲಾಲ್ ಇಂದು 99 ರೂ.ಗೆ ಆಫರ್ ಮಾಡಿದ್ದಾರೆ. ಬೈರಸಾಗರ ಕೆರೆಯ ಮೀನು ಅಂದ್ರೆ ಜನರಿಗೂ ಬಹಳ ಫೇವರೆಟ್ ಆಗಿರುವುದರಿಂದ ಮುಗಿಬಿದ್ದು ಖರೀದಿಸಿದ್ದಾರೆ.
