Gadaga: ಹದಿನಾಲ್ಕು ವರ್ಷದ ಬಾಲಕನೋರ್ವ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿರುವ ಘಟನೆಯೊಂದು ನಡೆದಿದೆ ಎಂಬ ಆರೋಪವೊಂದು ಕೇಳಿ ಬಂದಿದೆ(Gadaga).
ಬಾಲಕಿ ಭಾನುವಾರ ರಾತ್ರಿ ಮೂತ್ರ ವಿಸರ್ಜನೆಗೆಂದು ಹೋದ ಸಮಯದಲ್ಲಿ ತೊಂದರೆ ಪಟ್ಟಿದ್ದು, ಇದನ್ನು ಕಂಡ ತಾಯಿ ಏನೆಂದು ವಿಚಾರಿಸಿದಾಗ ಬಾಲಕಿ ಹೇಳಿದ್ದಾಳೆ. ತಾಯಿ ಸೋಮವಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪುಟ್ಟ ಬಾಲಕಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು, ಬಾಲಕನನ್ನು ವಶಕ್ಕೆ ಪಡೆದು ಬಾಲ ನ್ಯಾಯಮಂಡಳಿಗೆ ಕಳುಹಿಸಲಾಗಿದೆ. ಬಾಲಕ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪವಿದೆ. ಬಾಲಕಿ, ಮತ್ತು ಬಾಲಕಿ ಇಬ್ಬರು ಅಕ್ಕಪಕ್ಕದ ಮನೆಯವರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: RSS ಕಾರ್ಯಕರ್ತರೆಂದು ಹೇಳಿ ಗೋಮಾಂಸದ ಜೊತೆಗೆ ವ್ಯಕ್ತಿ ಕಿಡ್ನಾಪ್! ಇಲ್ಲಿದೆ ಪ್ರಕರಣದ ಅಸಲಿ ಕಹಾನಿ!!
