Home » Catterpillar Fungus: ಅಬ್ಬಬ್ಬಾ.. ಬರೋಬ್ಬರಿ 70 ಲಕ್ಷ ರೂಪಾಯಿಗಳಿಗೆ ಮಾರಾಟವಾಯ್ತು ಈ ಗಿಡಮೂಲಿಕೆ- ಅಷ್ಟಕ್ಕೂ ಏನಿದರ ವಿಶೇಷತೆ?

Catterpillar Fungus: ಅಬ್ಬಬ್ಬಾ.. ಬರೋಬ್ಬರಿ 70 ಲಕ್ಷ ರೂಪಾಯಿಗಳಿಗೆ ಮಾರಾಟವಾಯ್ತು ಈ ಗಿಡಮೂಲಿಕೆ- ಅಷ್ಟಕ್ಕೂ ಏನಿದರ ವಿಶೇಷತೆ?

1 comment
Catterpillar fungus

Catterpillar Fungus:ಹಿಮಾಲಯದಲ್ಲಿರುವ ಕೀಡಾ ಜಡಿ(Catterpillar Fungus)ಎಂಬ ಹೆಸರಿನ ಗಿಡಮೂಲಿಕೆಯೊಂದು ದೊಡ್ದ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಕೀಡಾ ಜಡಿ ಎನ್ನುವುದು ಕಾರ್ಡಿಸೆಪ್ಸ್‌ ಎನ್ನುವ ಕಂಬಳಿ ಹುಳದ ಮಾದರಿಯ ಶಿಲೀಂಧ್ರದ ಫಂಗಸ್‌ ಆಗಿದ್ದು, ಸುಮಾರು 12 ಸಾವಿರ ಅಡಿ ಎತ್ತರದಲ್ಲಿರುವ ಹಿಮಾಲಯದ ಪ್ರದೇಶಗಳಲ್ಲಿ ಮಾತ್ರವೇ ಬೆಳೆಯುತ್ತದೆ. ಇದರ ಮೌಲ್ಯ ಕೇಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ!

ಕ್ಯಾಟರ್ಪಿಲ್ಲರ್ ಫಂಗಸ್ ಎಂದೂ ಕರೆಯಲ್ಪಡುವ ಈ ಗಿಡಮೂಲಿಕೆಯು ಹೆಚ್ಚಿನ ಪ್ರಯೋಜನ ಹೊಂದಿದೆ.ಕೀಡಾ ಜಡಿ ಎಂದರೆ, ಕೀಟದ ಸಸ್ಯ ಎಂದು ಕೂಡ ಕರೆಯಲಾಗುತ್ತದೆ.ದೊಡ್ಡ ಪ್ರಮಾಣದಲ್ಲಿ ಕಾಮೋತ್ತೇಜಕ ಎಂದು ಹೇಳಲಾಗಿರುವ ಕೀಡಾ ಜಡಿ ಎಲ್ಲ ಸಮಯದಲ್ಲಿಯು ಸಿಗುವಂತಹದಲ್ಲ. ಇದು ಲಾರ್ವಾಗಳ ತಲೆಯ ಮೇಲೆ ಬೆಳೆಯುವ ಗಿಡಮೂಲಿಕೆಯಾಗಿದ್ದು, ಇದು ಪರ್ವತ ಪ್ರದೇಶಗಳಲ್ಲಿ ಅಂದರೆ ವಿಶೇಷವಾಗಿ ಭೂತಾನ್, ಭಾರತ(India), ಚೀನಾ(China) ಹಾಗೂ ನೇಪಾಳದಲ್ಲಿ ಕಾಣಬಹುದಾಗಿದೆ.

ಏಪ್ರಿಲ್‌ನ ಅಂತಿಮ ವಾರದಿಂದ ಜೂನ್‌ ಮಧ್ಯಭಾಗದವರೆಗೆ ಸಂಗ್ರಹಕ್ಕೆ ಹೋದವರಿಗೆ ಮಾತ್ರವೇ ಇದು ದೊರೆಯುತ್ತದೆ. ತೀರಾ ಅಲ್ಪ ಅವಧಿಯಲ್ಲಿಯೇ ಇದನ್ನು ಸಂಗ್ರಹ ಮಾಡಿಕೊಳ್ಳುವ ಇಲ್ಲಿನ ಜನರು ಇದನ್ನು ಮಾರಾಟ ಮಾಡಿ ಲಾಭ ಪಡೆಯುತ್ತಾರೆ.3300 ಮೀಟರ್ಗಳಿಂದ 4500 ಮೀಟರ್ ಎತ್ತರವಿರುವ ಜಾಗಗಳಲ್ಲಿ ಕಾಣಬಹುದು. ಈ ಗಿಡಮೂಲಿಕೆಗೆ ಎಷ್ಟು ಡಿಮ್ಯಾಂಡ್ ಇದೆ ಗೊತ್ತಾ? ಕೇವಲ 1 ಕೆಜಿ ಕೀಡಾ ಜಡಿ ಗಿಡ ಮೂಲಿಕೆಯು ಬರೋಬ್ಬರಿ 70 ಲಕ್ಷ ರೂಪಾಯಿಗೆ ಮಾರಾಟವಾಗುತ್ತದೆ.ಈ ಗಿಡಮೂಲಿಕೆಯಿಂದ ಪಿತ್ತಜನಕಾಂಗದ ಕಾಯಿಲೆ, ನಿತ್ರಾಣ, ಕ್ಯಾನ್ಸರ್ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗುವುದರ ಜೊತೆಗೆ ರೋಗಿಗೆ ಹೆಚ್ಚುವರಿ ಚೈತನ್ಯ ಕೂಡ ದೊರೆಯುತ್ತದೆ.

ಇದನ್ನೂ ಓದಿ:Transport Employees Strike: ಮಹಿಳೆಯರೇ, ಈ ಒಂದು ದಿನ ನೀವು ಫ್ರೀ ಬಸ್ ನಲ್ಲಿ ಓಡಾಡೋ ಹಾಗಿಲ್ಲ – ಯಾಕೆ ಗೊತ್ತೇ ? 

You may also like

Leave a Comment