Home » Post Office Scheme: ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ 2000 ರೂ. ಹೂಡಿಕೆ ಮಾಡಿ- ಶೀಘ್ರದಲ್ಲಿ 1,20,000 ರೂ. ಪಡೆಯಿರಿ

Post Office Scheme: ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ 2000 ರೂ. ಹೂಡಿಕೆ ಮಾಡಿ- ಶೀಘ್ರದಲ್ಲಿ 1,20,000 ರೂ. ಪಡೆಯಿರಿ

155 comments
Post office scheme

Post Office Scheme: ಸಾಮಾನ್ಯವಾಗಿ ಪ್ರತಿಯೊಬ್ಬರು ಯಾವುದಾದರೂ ಒಂದು ಕ್ಷೇತ್ರದಲ್ಲಿ ಹೂಡಿಕೆ ಮಾಡೋದು ಸಹಜ. ಸರ್ಕಾರಿ (Governament) ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು (Private Bank) ಖಾತೆಗಳ ಇಲ್ಲವೇ ಪೋಸ್ಟ್ ಆಫೀಸ್(Post Office), ಇನ್ಸೂರೆನ್ಸ್ ಕಂಪನಿಗಳಲ್ಲಿ ಇಲ್ಲವೇ ಇನ್ನಿತರ ಹಣಕಾಸಿನ ವ್ಯವಹಾರಗಳಲ್ಲಿ ಠೇವಣಿ(Deposit) ಇಟ್ಟು ನಿಶ್ಚಿತ ಲಾಭ ಪಡೆಯುವ ಸೌಲಭ್ಯ ಪಡೆಯಬಹುದಾಗಿದೆ

ಗ್ರಾಹಕರಿಗಾಗಿ ಪೋಸ್ಟ್ ಆಫೀಸ್ ನಲ್ಲಿ(Post Office Scheme)ಅನೇಕ ಉಳಿತಾಯ ಯೋಜನೆಗಳಿದ್ದು, ನಿಶ್ಚಿತ ಲಾಭದ ಜೊತೆಗೆ ಭದ್ರತೆ ಪಡೆಯುವುದಲ್ಲದೇ ತೆರಿಗೆ ವಿನಾಯಿತಿ ಕೂಡ ಪಡೆಯಬಹುದು. ಅಂಚೆ ಕಚೇರಿಯಲ್ಲಿ ಎಲ್ಲಾ ವಯಸ್ಸಿನವರಿಗೂ ಸೂಕ್ತವಾದ ಯೋಜನೆಗಳಿವೆ. ನೀವು RD ಗಳಲ್ಲಿ ಹೂಡಿಕೆ ಮಾಡುವ ಮೂಲಕ ದೊಡ್ಡ ಮಟ್ಟದ ರಿಟರ್ನ್ಸ್ ಪಡೆಯಬಹುದು.

# 5000 ರೂಪಾಯಿಗಳ ಆರ್‌ಡಿ
ಅಂಚೆ ಕಚೇರಿಯ 5000 ರೂಪಾಯಿಗಳ ಯೋಜನೆಯ ಮೂಲಕ ಮಾಸಿಕ ಡೆಪಾಸಿಟ್‌ನೊಂದಿಗೆ ವಾರ್ಷಿಕವಾಗಿ ನೀವು 60,000 ರೂಪಾಯಿ ಹೂಡಿಕೆ ಮಾಡಿದರೆ, 5 ವರ್ಷಗಳ ಅವಧಿಗೆ ನೀವು 3,00,000 ರೂಪಾಯಿ ಹೂಡಿಕೆ ಮಾಡಿದಂತಾಗುತ್ತದೆ. ಈ ಅವಧಿಯ ಕೊನೆಯ ವೇಳೆಗೆ 54,954 ರೂಪಾಯಿ ಬಡ್ಡಿದರವನ್ನು ಪಡೆದುಕೊಳ್ಳಬಹುದು.5 ವರ್ಷಗಳ ಬಳಿಕ 3,54,954 ರೂಪಾಯಿ ಪಡೆಯಬಹುದು.

# 4000 ರೂಪಾಯಿಗಳ ಆರ್‌ಡಿ
ಅಂಚೆ ಕಚೇರಿ ಆರ್‌ಡಿಯಲ್ಲಿ ಮಾಸಿಕವಾಗಿ 4000 ರೂಪಾಯಿ ಹೂಡಿಕೆ ಮಾಡಿದರೆ, ವಾರ್ಷಿಕವಾಗಿ 48,000 ರೂಪಾಯಿ ಹೂಡಿಕೆ ಮಾಡಿದಂತಾಗುತ್ತದೆ. ಐದು ವರ್ಷಕ್ಕೆ ನೀವು 2,40,000 ರೂಪಾಯಿ ಹೂಡಿಕೆ ಮಾಡಿದಂತಾಗಲಿದೆ. ಈ ಮೊತ್ತದ ಮೇಲೆ ಒಟ್ಟಾಗಿ 43,968 ರೂಪಾಯಿ ಬಡ್ಡಿದರ ದೊರೆಯಲಿದ್ದು, ಮೆಚ್ಯೂರಿಟಿ ವೇಳೆ ನಿಮಗೆ 2,83,968 ರೂಪಾಯಿ ಸಿಗಲಿದೆ.

# 2000 ರೂಪಾಯಿಗಳ ಆರ್‌ಡಿ
2000 ರೂಪಾಯಿ ಡೆಪಾಸಿಟ್‌ನೊಂದಿಗೆ ಮಾಸಿಕ ಆರ್‌ಡಿಯನ್ನು ಪ್ರಾರಂಭಿಸುವ ಮೂಲಕ ನೀವು ವಾರ್ಷಿಕವಾಗಿ 24,000 ರೂಪಾಯಿ ಹೂಡಿಕೆ ಮಾಡಬಹುದು.ಅದೇ 5 ವರ್ಷಗಳಿಗೆ ಆದರೆ, ಒಟ್ಟು 1,20,000 ರೂಪಾಯಿ ಹೂಡಿಕೆ ಮಾಡಿದಂತಾಗುತ್ತದೆ. ಶೇಕಡ 6.5 ರಷ್ಟು ಬಡ್ಡಿದರ ಇರುವ ಹಿನ್ನೆಲೆ ಈ ಅವಧಿಯಲ್ಲಿ 21,983 ರೂಪಾಯಿ ಬಡ್ಡಿದರವನ್ನು ಪಡೆಯಬಹುದು. ಅಂದರೆ, ಮೆಚ್ಯೂರಿಟಿಯ ಸಂದರ್ಭ ಒಟ್ಟು 1,41,983 ರೂಪಾಯಿ ಮೊತ್ತವನ್ನು ಪಡೆಯಬಹುದು.

# 3000 ರೂಪಾಯಿಗಳ ಆರ್‌ಡಿ
ನೀವು ಮಾಸಿಕವಾಗಿ 3000 ರೂಪಾಯಿ ಅಂಚೆ ಕಚೇರಿಯಲ್ಲಿ ಆರ್‌ಡಿಗಾಗಿ ಡೆಪಾಸಿಟ್ ಮಾಡಿದ್ದಲ್ಲಿ ವಾರ್ಷಿಕವಾಗಿ 36,000 ರೂಪಾಯಿ ಹೂಡಿಕೆ ಮಾಡಿದಂತಾಗುತ್ತದೆ. 5 ವರ್ಷಗಳ ಅವಧಿಗೆ 1,80,000 ರೂಪಾಯಿ ಹೂಡಿಕೆ ಆಗುತ್ತದೆ. ಈ ಮೂಲಕ ಅವಧಿಯಲ್ಲಿ ಒಟ್ಟು 32,972 ರೂಪಾಯಿ ಬಡ್ಡಿದರವನ್ನು ಪಡೆಯಬಹುದಾಗಿದ್ದು, ಅಂದರೆ ಮೆಚ್ಯೂರಿಟಿ ಮೊತ್ತವು 2,12,972 ರೂಪಾಯಿಯಾಗುತ್ತದೆ.

ಇದನ್ನೂ ಓದಿ: Yatindra Siddaramaiah: ಸಿಎಂ ಸಿದ್ದುಗೆ ಕಂಟಕವಾದ ಪುತ್ರ ಯತೀಂದ್ರ !! ಅದೊಂದು ಗುಟ್ಟು ರಟ್ಟು ಮಾಡಿ ತಪ್ಪು ಮಾಡಿಬಿಟ್ರಾ?

You may also like

Leave a Comment