Home » Pakistani hackers: ಮೊಬೈಲ್ ಬಳಕೆದಾರರೇ ಎಚ್ಚರ.. ಈ 3 ಅಪ್ಲಿಕೇಶನ್‌ ಮೂಲಕ ಭಾರತೀಯರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಪಾಕಿಸ್ತಾನಿ ಹ್ಯಾಕರ್‌ಗಳು

Pakistani hackers: ಮೊಬೈಲ್ ಬಳಕೆದಾರರೇ ಎಚ್ಚರ.. ಈ 3 ಅಪ್ಲಿಕೇಶನ್‌ ಮೂಲಕ ಭಾರತೀಯರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಪಾಕಿಸ್ತಾನಿ ಹ್ಯಾಕರ್‌ಗಳು

3 comments
Pakistani Hackers

Pakistani Hackers: ಮೊಬೈಲ್ ಹ್ಯಾಕಿಂಗ್ ಮೂಲಕ ನಿಮ್ಮ ಪ್ರತಿಯೊಂದು ದಾಖಲೆ ಮಾಹಿತಿ ಕಳ್ಳತನ ಆಗುತ್ತೆ. ಹಾಗಾಗಿ ಭಾರತೀಯರು ಎಚ್ಚರವಾಗಿರಬೇಕಾಗುತ್ತದೆ. ಈಗಾಗಲೇ ಸ್ಮಾರ್ಟ್ಫೋನ್ ನಲ್ಲಿರುವ ಕೆಲವು ಅಪ್ಲಿಕೇಶನ್‌ಗಳ ಸಹಾಯದಿಂದ ಪಾಕಿಸ್ತಾನಿಗಳು ( Pakistani Hackers) ನಿಮ್ಮನ್ನು ಟಾರ್ಗೆಟ್ ಮಾಡುತ್ತಿದೆ ಎಂಬ ಶಾಕಿಂಗ್ ಸುದ್ದಿ ಲಭ್ಯವಾಗಿದೆ.

ಸೈಬರ್‌ ಸೆಕ್ಯುರಿಟಿ ಕಂಪನಿ ಸೆಂಟಿನೆಲ್‌ಒನ್‌ನ ಮಾಹಿತಿ ಪ್ರಕಾರ, ಮೂರು ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಪಾಕಿಸ್ತಾನಿ ಹ್ಯಾಕರ್‌ಗಳು ಭಾರತೀಯರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ, ಯೂಟ್ಯೂಬ್ ನ ಕಾಪಿ ಆಪ್ ಬಳಸಿ ಪಾಕಿಸ್ತಾನಿ ಹ್ಯಾಕರ್‌ಗಳು ಭಾರತೀಯರ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಮೇಲೆ ಹತೋಟಿ ಸಾಧಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಆತಂಕಕಾರಿ ವಿಷಯವೆಂದರೆ, ಈ ಅಪ್ಲಿಕೇಶನ್‌ಗಳನ್ನು ಕ್ಯಾಪ್ರಾರಾಟ್ ಟೂಲ್‌ನೊಂದಿಗೆ ಬಳಸಲಾಗುತ್ತಿದ್ದು ಇವು ಆಂಡ್ರಾಯ್ಡ್ ಸಾಧನದ ಸಾಧನದ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸಬಹುದಾದ ಸೂಕ್ಷ್ಮ ಸಾಧನವಾಗಿದೆ ಎಂದು ತಿಳಿದುಬಂದಿದೆ.

ಮುಖ್ಯವಾಗಿ ಅಂತಹ ಹ್ಯಾಕರ್ ಅಪ್ಲಿಕೇಶನ್‌ಗಳು ಭಾರತೀಯರ ಮೊಬೈಲ್‌ನ ಮೈಕ್ರೊಫೋನ್ ಜೊತೆಗೆ ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾಗಳನ್ನು ರೆಕಾರ್ಡ್ ಮಾಡಬಹುದಾಗಿದೆ. ಅದಲ್ಲದೆ ಈ ಅಪ್ಲಿಕೇಶನ್ ಎಸ್‌ಎಮ್‌ಎಸ್ ಮತ್ತು ಮಲ್ಟಿಮೀಡಿಯಾ ಸಂದೇಶಗಳು, ಕರೆ ದಾಖಲೆಗಳು ಮತ್ತು ಇತರ ಸಂದೇಶ ವಿಷಯವನ್ನು ಸಂಗ್ರಹಿಸುತ್ತದೆ. ಇನ್ನು ಆಪ್ ಮೂಲಕ ವ್ಯವಹಾರದಿಂದ ಕಳುಹಿಸಲಾದ ಸಂದೇಶಗಳು ಮತ್ತು ಒಳಬರುವ ಕರೆಗಳನ್ನು ಟ್ರ್ಯಾಕ್ ಮಾಡಬಹುದು. ಅಪ್ಲಿಕೇಶನ್ ಮೂಲಕ ಸ್ವತಃ ಕರೆಗಳನ್ನು ಮಾಡಬಹುದು ಮತ್ತು ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳಬಹುದು. ಅದಲ್ಲದೆ ಈ ಅಪ್ಲಿಕೇಶನ್ ಮೂಲಕ, ಜಿಪಿಎಸ್ ಮತ್ತು ನೆಟ್‌ವರ್ಕ್ ಸೆಟ್ಟಿಂಗ್‌ಗಳನ್ನು ತಿದ್ದಿ ಬರೆಯಬಹುದು ಮತ್ತು ಅದು ಫೋನ್‌ನ ಫೈಲ್‌ಗಳನ್ನು ಮಾರ್ಪಡಿಸಬಹುದು.

ಸದ್ಯ ಇಂತಹ ಅಪ್ಲಿಕೇಶನ್‌ಗಳಿಂದ ವಂಚನೆಗೆ ಬಲಿಯಾಗುವುದನ್ನು ತಪ್ಪಿಸಲು ಇನ್ನುಮುಂದೆ ಯಾವುದೇ ಸುರಕ್ಷಿತವಲ್ಲದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವುದನ್ನು ತಪ್ಪಿಸಲು ಸೈಬರ್‌ ಸೆಕ್ಯುರಿಟಿ ಕಂಪನಿ ಸೂಚಿಸಿದೆ.

ಇದನ್ನೂ ಓದಿ: Love vs crime : ನೀನಿಲ್ಲದಿದ್ರೆ ಸಾಯುತ್ತೇನೆ ಎಂದ ಭಗ್ನ ಪ್ರೇಯಸಿ; ಉಲ್ಟಾ ಹೊಡೆದ ಪ್ರೇಮಿ, ವಿಷ ತಂದುಕೊಟ್ಟು ನೈಸ್ ಆಗಿ ಕೊಂದೇ ಬಿಟ್ಟ!

You may also like

Leave a Comment