Udhayanidhi Stalin : ಸನಾತನ ಧರ್ಮದ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ತಮಿಳನಾಡು ಸಚಿವ ಉದಯನಿಧಿ ಸ್ಟಾಲಿನ್ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿ ನಾಲಿಗೆ ಹರಿ ಬಿಟ್ಟಿದ್ದಾರೆ. ನೂತನ ಸಂಸತ್ ಭವನ ಉದ್ಘಾಟನೆಗೆ ಬಿಜೆಪಿ ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu)ಅವರಿಗೆ ಏಕೆ ಆಹ್ವಾನ ನೀಡಿಲ್ಲ ಎಂಬ ಪ್ರಶ್ನೆಗೆ ಉತ್ತರ ನೀಡುವ ಭರದಲ್ಲಿ ಉದಯನಿಧಿ ಸ್ಟಾಲಿನ್ (Udhayanidhi Stalin)ತಮ್ಮ ಕೀಳುಮಟ್ಟದ ಯೋಚನಾ ಲಹರಿಯನ್ನೂ ಎಲ್ಲರ ಮುಂದೆ ಜಗಜ್ಜಾಹೀರು ಮಾಡಿದ್ದಾರೆ.
ಕೇಂದ್ರ ಸರ್ಕಾರ(Central Government)ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ತಮಿಳುನಾಡಿನ ಅಧೀನಂ ಸ್ವಾಮಿಜಿಗಳನ್ನು ಕರೆಸಲಾಗಿದ್ದು, ಆದರೆ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಆಹ್ವಾನ ನೀಡಿಲ್ಲ. ಹೀಗಾಗಿ, ದ್ರೌಪದಿ ಮುರ್ಮು ಅವರಿಗೆ ಏಕೆ ಆಹ್ವಾನ ನೀಡಿಲ್ಲ ಎಂಬ ಪ್ರಶ್ನೆ ಸಹಜವಾಗಿ ಕೇಳಲಾಗಿದೆ. ಇದಕ್ಕೆ ಉದಯನಿಧಿ ಸ್ಟಾಲಿನ್ ಕೊಟ್ಟಿರುವ ಉತ್ತರ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ” ದ್ರೌಪದಿ ಮುರ್ಮು ವಿಧವೆ ಮತ್ತು ಆದಿವಾಸಿ ಮಹಿಳೆ ಎನ್ನುವ ಕಾರಣದಿಂದ ಈ ಕಾರ್ಯಕ್ರಮಕ್ಕೆ ಕರೆಸಿಲ್ಲ. ಇದೇನಾದರೂ ಸನಾತನ ಧರ್ಮವೇ ಎಂದು ಉದಯನಿಧಿ ಸ್ಟಾಲಿನ್ ಇದೆ ವೇಳೆ ಪ್ರಶ್ನಿಸಿದ್ದಾರೆ. ಇವರ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ.
ಬಿಜೆಪಿ ಪಕ್ಷ ದ್ರೌಪದಿ ಮುರ್ಮು ಅವರನ್ನು ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಅನ್ನೋದನ್ನು ರಾಜಕೀಯವಾಗಿ ಬಳಕೆ ಮಾಡುವುದಾದರೂ ಸರಿ. ಆದರೆ ಮುರ್ಮು ವಿಧವೆ, ಆದಿವಾಸಿ ಮಹಿಳೆ ಎಂಬ ಹಾಗೆ ನಾಲಿಗೆ ಹರಿಬಿಟ್ಟು ನಿಮ್ಮ ಕೀಳು ಮಟ್ಟದ ರಾಜಕೀಯ ಪ್ರದರ್ಶಿಸಬೇಡಿ ಎಂದು ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ಖಡಕ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Google ವಿರುದ್ಧ ಮಹಿಳೆ ಕೇಸು! ನನ್ನ ಗಂಡನ ಸಾವಿಗೆ ಮ್ಯಾಪ್ ಕಾರಣ ಎಂದು ದಾವೆ ಹೂಡಿದೆ ಪತ್ನಿ!!!
