Home » ದಕ್ಷಿಣ ಕನ್ನಡ (ಪುತ್ತೂರು): ಬೆಕ್ಕಿನ ಕಣ್ಣಿನ ಸುಂದರಿಯರನ್ನು ಮೀರಿಸುವಂತ ಸೌಂದರ್ಯ ಹೊಂದಿದ ಬೆಕ್ಕಿನ ಕಣ್ಣಿನ ಹಾವು ಪತ್ತೆ!

ದಕ್ಷಿಣ ಕನ್ನಡ (ಪುತ್ತೂರು): ಬೆಕ್ಕಿನ ಕಣ್ಣಿನ ಸುಂದರಿಯರನ್ನು ಮೀರಿಸುವಂತ ಸೌಂದರ್ಯ ಹೊಂದಿದ ಬೆಕ್ಕಿನ ಕಣ್ಣಿನ ಹಾವು ಪತ್ತೆ!

by Mallika
1 comment
Cat eyed Snake

Cat Eyed Snake: ಬೆಕ್ಕಿನ ಕಣ್ಣು ಹೊಂದಿರುವ (Cat eyed Beauties) ಸುಂದರಿಯರನ್ನು ನೀವು ನೋಡಿರಬಹುದು. ಒಮ್ಮೆ ನೋಡಿದರೆ ಅವರನ್ನು ಮತ್ತೊಮ್ಮೆ ತಿರುಗಿ ನೋಡುವ ಅಂತ ಅನಿಸುವುದು ಎಲ್ಲರಿಗೂ ಸಹಜ. ಏಕೆಂದರೆ ಆ ಕಣ್ಣು ಸಾಧಾರವಾಣವಾಗಿ ಬಹಳ ಆಕರ್ಷಣೀಯವಾಗಿರುತ್ತದೆ. ಆದರೆ ನಿಮಗೆ ಗೊತ್ತೇ? ಬೆಕ್ಕಿನ ಕಣ್ಣಿನ ಹಾವೊಂದು (Cat Eyed Snake) ಇರುವ ಕುರಿತು? ನೋಡಿಲ್ಲದಿದ್ದರೆ ಒಮ್ಮೆ ನೋಡಿ ಬರುವ ಬನ್ನಿ.

ಈ ಹಾವು ಪುತ್ತೂರಿನ ಒಂದು ಮನೆಗೆ ಬಂದಿತ್ತು. ನೇರವಾಗಿ ಬಂದು ಮನೆಯೊಂದರ ಟೇಬಲ್‌ ಮೇಲೆ ಆರಾಮವಾಗಿ ಮಲಗಿತ್ತು ಈ ಬೆಕ್ಕಿನ ಕಣ್ಣಿನ ಹಾವು. ಮನೆಯವರು ಬಂದು ನೋಡಿದಾಗ ಟೇಬಲ್‌ ಮೇಲೆ ಹಳದಿ
ಬಣ್ಣದ ವಸ್ತು ಬಿದ್ದಿದೆ ಎನ್ನೋ ತರಹ ಕಾಣುತಿತ್ತು. ಹತ್ತಿರ ಹೋಗಿ ನೋಡಿದಾಗ ಗೊತ್ತಾದದ್ದು ಹಾವು ಎಂದು.

ಕಂದು ಬಣ್ಣದ ಪಟ್ಟೆ ಹೊಂದಿದ್ದ ರೀತಿ ಕಂಡು ಬಂದಿದ್ದು, ವಿಷಕಾರಿ ಕನ್ನಡಿ ಹಾವು ತರಹ ಕಂಡು ಬಂತಿತ್ತು. ಕೂಡಲೇ ಉರಗ ತಜ್ಞರಿಗೆ ಫೋನ್‌ ಮಾಡಿದಾಗ ಅವರು ಬಂದಿದ್ದು ಮಲಗಿದ್ದ ಹಾವನ್ನು ನೋಡಿ ಇದು ಕನ್ನಡಿ ಹಾವಲ್ಲ, ಇದು ಬಹಳ ಪಾಪದ ಹಾವು ಎಂದು ಹೇಳಿದ್ದಾರೆ.

ಅವರು ಹಾವನ್ನು ಕೈಯಲ್ಲಿ ಹಿಡಿಯುತ್ತಾ ಈ ಹಾವಿನ ಕುರಿತು ವಿವರಣೆ ನೀಡಿದ್ದು, ಇದು ಪಶ್ಚಿಮ ಘಟ್ಟದಂತಹ ದಟ್ಟ ಅರಣ್ಯಗಳ ಮಧ್ಯೆ ಅಪರೂಪವಾಗಿ ಕಾಣಲು ದೊರಕುವ ಬೆಕ್ಕು ಕಣ್ಣಿನ ಹಾವು. ಇದರ ಕಣ್ಣು ನೋಡಿ, ಆ ಕಾರಣದಿಂದ ಈ ಹೆಸರು ಬಂದಿದೆ ಎಂದಿದ್ದಾರೆ.

ಇದರ ಹೆಸರು ಫಾರೆಸ್ಟಿನ್‌ ಕ್ಯಾಟ್‌ ಸ್ನೇಕ್‌ (Forestian Cat snake), ರಾತ್ರಿ ವೇಳೆಯಲ್ಲಿ ಮಾತ್ರ ಇದು ಸಂಚರಿಸುತ್ತದೆ. ಬೆಕ್ಕಿನ ಕಣ್ಣಿನಂತೆ ಬಿಳಿ ಕಣ್ಣುಗಳನ್ನು ಹೊಂದಿದೆ. ಇವು ರಾತ್ರಿ ವೇಳೆ ಮೊಟ್ಟೆ, ಹಕ್ಕಿ, ಓತಿಕ್ಯಾತ ಮುಂತಾದ ಸಣ್ಣ ಗಾತ್ರದ ಪ್ರಾಣಿ, ಪಕ್ಷಿಗಳನ್ನು ಬೇಟೆ ಮಾಡುತ್ತದೆ. ವಿಷಕಾರಿಯಲ್ಲದ ಹಾವು ಇದೆ. ಯಾರಿಗೂ ಕಚ್ಚಿ ತೊಂದರೆ ಕೊಡುವುದಿಲ್ಲ. ಹಳದಿ ಬಣ್ಣದಲ್ಲಿ ಕಂದು ಪಟ್ಟೆಗಳನ್ನು ಹೊಂದಿರುವ ಕನ್ನಡಿ ಹಾವನ್ನೇ ಹೋಲುತ್ತದೆ ಎಂಬಿತ್ಯಾದಿ ವಿವರಗಳನ್ನು ಉರಗ ತಜ್ಞರಾದ ತೇಜಸ್‌ ಪುತ್ತೂರು ನೀಡಿದ್ದಾರೆ.

ನಂತರ ಅವರು ಇದನ್ನು ದಟ್ಟ ಅರಣ್ಯಕ್ಕೆ ಬಿಟ್ಟಿದ್ದಾರೆ. ಈ ರೀತಿಯ ಹಾವು ಅಪರೂಪದಲ್ಲಿ ಅಪರೂಪ ಪತ್ತೆಯಾಗಿರುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: 50ಕ್ಕೂ ಹೆಚ್ಚು ಇಲಿಗಳಿಂದ 6 ತಿಂಗಳ ಮಗುವಿಗೆ ಕಡಿತ! ಪೋಷಕರು, ಚಿಕ್ಕಮ್ಮನ ಬಂಧನ!!

You may also like

Leave a Comment