Home » Vehicle Scrappage Policy: ಹಳೇ ವಾಹನ ಇರುವವರಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ- ಸಂಪುಟ ಸಭೆಯಲ್ಲಿ ಆಯ್ತೊಂದು ಮಹತ್ವದ ನಿರ್ಧಾರ !!

Vehicle Scrappage Policy: ಹಳೇ ವಾಹನ ಇರುವವರಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ- ಸಂಪುಟ ಸಭೆಯಲ್ಲಿ ಆಯ್ತೊಂದು ಮಹತ್ವದ ನಿರ್ಧಾರ !!

2 comments
Vehicle Scrappage Policy

Vehicle Scrappage Policy :ಕೇಂದ್ರ ಸರ್ಕಾರ (Central Government)ವಾಹನ ಗುಜರಿ ನೀತಿಯನ್ನು (Vehicle Scrappage Policy)ಕಳೆದ ವರ್ಷ ಪ್ರಕಟಿಸಿದೆ. ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು(Nithin Gadakari)ಇತ್ತೀಚೆಗಷ್ಟೇ, ಈ ವಿಚಾರವನ್ನು ಪ್ರಸ್ತಾಪಿಸಿದ್ದು, 15 ವರ್ಷಕ್ಕಿಂತ ಹಳೆಯದಾದ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕಲಾಗುವ ಕುರಿತು ಮಾಹಿತಿ ನೀಡಿದ್ದರು. ಇದೀಗ, ಕೇಂದ್ರ ಸರ್ಕಾರದ 2022ರ ನೋಂದಾಯಿತ ವಾಹನಗಳ ಸ್ಕ್ರಾಪಿಂಗ್ ನೀತಿಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(D. K. Shivakumar) ಮಾಹಿತಿ ನೀಡಿದ್ದಾರೆ.

ಸರ್ಕಾರದ ಬಳಿ ಇರುವ 15 ವರ್ಷ ಹಳೆಯ ವಾಹನಗಳನ್ನು ಗುಜರಿಗೆ ಹಾಕಲು ನಿರ್ಣಯ ಕೈಗೊಂಡಿರುವ ಕುರಿತು ಡಿಕೆಶಿ ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರದಿಂದ 100 ಕೋಟಿ ರೂ.ನಷ್ಟು ಪ್ರೋತ್ಸಾಹ ಧನ ದೊರೆಯಲಿದ್ದು, ಮೊದಲ ಹಂತದಲ್ಲಿ 5000 ವಾಹನಗಳನ್ನು ಗುಜರಿಗೆ ಹಾಕಲಿದ್ದು, ಆ ಬಳಿಕ ಹಂತವಾಗಿ ಇನ್ನುಳಿದ ವಾಹನಗಳನ್ನು ಗುಜರಿಗೆ ಹಾಕಲಾಗುತ್ತದೆ. ಖಾಸಗಿ ವಾಹನಗಳಿಗೂ ಕೂಡ 15 ವರ್ಷ ಹಳೆಯ ವಾಹನ ಗುಜರಿಗೆ ಹಾಕುವ ಈ ನೀತಿ ಅನ್ವಯಿಸಲಿದ್ದು, ಖಾಸಗಿ ವಾಹನಗಳಿಗೂ ಜಾರಿಗೊಳಿಸಲು ಕೇಂದ್ರ ಸರ್ಕಾರದ ಒತ್ತಡ ಹಾಕುತ್ತಿದೆ.

ಈ ನಡುವೆ, ಸರ್ಕಾರಿ ವಾಹನಗಳಿಗೆ ಮಾತ್ರ ಇದು ಜಾರಿಯಾಗಲಿರುವ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೆ. ರಾಜ್ಯ ಸರ್ಕಾರದ ಬಳಿ 15 ವರ್ಷಕ್ಕಿಂತ ಹಳೆಯ ಒಟ್ಟು 15,295 ವಾಹನಗಳಿದ್ದು, ಇವುಗಳನ್ನು ಗುಜರಿಗೆ ಹಾಕಿದ ನಂತರ ಹೊಸ ವಾಹನ ಪಡೆಯುವ ಪ್ರಕ್ರಿಯೆ ಆಗಬೇಕಾಗಿದೆ. ಹೀಗಾಗಿ, ಸರ್ಕಾರಕ್ಕೆ 500 ಕೋಟಿ ರೂ. ಯಷ್ಟು ಖರ್ಚು ವೆಚ್ಚಗಳಾಗುವ ಕುರಿತು ಮಾತನಾಡಿದ್ದಾರೆ.

ಇದನ್ನೂ ಓದಿ: Nanu Nandini Song: ಪರೀಕ್ಷೆಯಲ್ಲಿ ವರ್ಲ್ಡ್ ಫೇಮಸ್ ಆದ ‘ನಾನು ನಂದಿನಿ’ ಹಾಡು ಬರೆದಿಟ್ಟ ವಿದ್ಯಾರ್ಥಿ: ವೈರಲ್ ಆಯ್ತು ಪೋಸ್ಟ್!

You may also like

Leave a Comment