Punjab: ಪಂಜಾಬಿನ( Punjab)ಕಪುರ್ತಲಾ ಜಿಲ್ಲೆಯ ಕಬಡ್ಡಿ ಆಟಗಾರನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ. ಈ ಘಟನೆ ಸೆಪ್ಟೆಂಬರ್ 19ರ ರಾತ್ರಿ ಕಬಡ್ಡಿ ಆಟಗಾರನ ಹತ್ಯೆ ನಡೆದಿದೆ ಎಂದು ವರದಿಯಾಗಿದ್ದು, ತಡವಾಗಿ ಮುನ್ನಲೆಗೆ ಬಂದಿದೆ ಎನ್ನಲಾಗಿದೆ.

ಪಂಜಾಬ್ ಕಪುರ್ತಲಾ ಜಿಲ್ಲೆಯ ಯುವ ಕಬಡ್ಡಿ ಆಟಗಾರ(Kabbadi Player)ಹರ್ದೀಪ್ ಸಿಂಗ್ ಅವರ ಬರ್ಬರ ಹತ್ಯೆಯ (Murder)ಮಾಡಿರುವ ಜೊತೆಗೆ ಆಟಗಾರನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಅವರ ಮನೆಯ ಮುಂದೆಯೇ ಬೀಸಾಡಲಾಗಿದೆ. ಹೀಗಾಗಿ, ಈ ಘಟನೆ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ಕೆಲವು ವರದಿಗಳ ಪ್ರಕಾರ, ಕಬಡ್ಡಿ ಆಟಗಾರ ಹರ್ದೀಪ್ ಸಿಂಗ್ ಮತ್ತು ಅದೇ ಏರಿಯಾದಲ್ಲಿ ನೆಲೆಸಿದ್ದ ಹರ್ಪ್ರೀತ್ ಸಿಂಗ್ ಮದ್ಯೆ ಆಗಾಗ ಕಿರಿಕ್ ಹಾಗೂ ಮಾರಾಮಾರಿ ನಡೆಯುತ್ತಿತ್ತಂತೆ. ಹೀಗಾಗಿ ಈ ಹಿಂದೆ ಅನೇಕ ಬಾರಿ ಹರ್ದೀಪ್ ಹಾಗೂ ಹರ್ಪ್ರೀತ್ ಅವರ ಮೇಲೆ ದಿಲ್ವಾನ್ ಪೊಲೀಸ್ ಠಾಣೆಯಲ್ಲಿ ಕೇಸ್ಗಳು ದಾಖಲಾಗಿತ್ತು ಎನ್ನಲಾಗಿದೆ. ಇನ್ನು ಕೆಲ ಸ್ಥಳೀಯ ವರದಿಗಳ ಅನುಸಾರ, ಯುವ ಕಬಡ್ಡಿ ಆಟಗಾರನನ್ನು ಬರ್ಬರವಾಗಿ ಹತ್ಯೆ ಮಾಡಿದ ಕುರಿತು ಇಲ್ಲಿಯವರೆಗೆ. ಯಾವುದೇ ವ್ಯಕ್ತಿಯನ್ನು ಪಂಜಾಬ್ ಪೊಲೀಸರು ಬಂಧಿಸಿಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿ: PM kisan Yojana: ರೈತರಿಗೆ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್- ಮತ್ತಷ್ಟು ಹೊಸ ಸೇವೆ ಒದಗಿಸಲು ರೆಡಿಯಾದ ಕೇಂದ್ರ
