Kundapur name: ಉದ್ಯಮಿ ಒಬ್ಬರಿಗೆ ಬಿಜೆಪಿ(BJP) ಟಿಕೆಟ್ ಕೊಡಿಸುವುದಾಗಿ ವಂಚಿಸಿರುವಂತಹ ಚೈತ್ರ ಪ್ರಕರಣ ಇಡೀ ರಾಜ್ಯಾದ್ಯಂತ ಭಾರಿ ಸಂಚಲನ ಸೃಷ್ಟಿಸುತ್ತಿದೆ. ದಿನದಿಂದ ದಿನಕ್ಕೆ ಹೊಸ ಹೊಸ ವಿಚಾರಗಳು ಹೊರ ಬೀಳುತ್ತಿವೆ. ಆಕೆಯ ಹೆಸರೊಂದಿಗೆ ಕುಂದಾಪುರ(Kundapur name) ಹೆಸರು ಸೇರಿಕೊಂಡಿರುವುದರಿಂದ ಕುಂದಾಪುರ ಜನತೆಗೆ ಭಾರೀ ಮುಜುಗರವಾಗುತ್ತಿದೆ. ಹೀಗಾಗಿ ಸದ್ಯ ಚೈತ್ರಾಳ ಹೆಸರೊಂದಿಗೆ ‘ಕುಂದಾಪುರ’ ಹೆಸರು ಬಳಸುವ ಕುರಿತು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಹೌದು, ಎಲ್ಲೆಲ್ಲೂ ಹಿಂದೂ ಕಾರ್ಯಕರ್ತೆಯೆಂದು ಅಬ್ಬರದ, ಪ್ರಚೋದನಾಕಾರಿಯಾಗಿ ಭಾಷಣ ಬಿಗಿಯುತ್ತಿದ್ದ ಈ ಚೈನ್ ಚೈತ್ರಾ ತನ್ನ ಹೆಸರೊಂದಿಗೆ ಕುಂದಾಪುರ ಹೆಸರನ್ನು ತಳುಕು ಹಾಕಿಕೊಂಡಿದ್ದಳು. ಹೀಗಾಗಿ ‘ಚೈತ್ರಾ ಕುಂದಾಪುರ’ ಎಂದೇ ಖ್ಯಾತಿ ಹೊಂದಿದ್ದಳು. ಇದೀಗ ಈಕೆಯ ಖತರ್ನಾಕ್ ಬಣ್ಣ ಬಯಲಾದರು ಜನರು ಹಾಗೂ ಮಾಧ್ಯಮಗಳು ಅದೇ ಹೆಸರಿಂದ ಚೈತ್ರಾ ಕುಂದಾಪುರ ಎಂದೇ ಗುರುತಿಸುತ್ತಿದ್ದಾರೆ. ಹೀಗಾಗಿ ಇದರಿಂದ ಕುಂದಾಪುರ ಜನತೆಗೆ ಇರುಸುಮುರುಸಾಗುತ್ತಿದ್ದು ತಾಲ್ಲೂಕಿಗೆ ಧಕ್ಕೆ ಆಗುತ್ತಿದೆ. ಹೀಗಾಗಿ ಕುಂದಾಪುರದ ಕೆಲ ಪ್ರಮುಖರು ಹಾಗೂ ಬಸವನಗುಡಿಯಲ್ಲಿ ಕಾಫಿ ಶಾಪ್ ನಡೆಸುತ್ತಿರುವ ಮೂಲತಃ ಕುಂದಾಪುರದ ಗಣೇಶ್ ಶೆಟ್ಟಿ ನ್ಯಾಯಾಲಯದ ಮೊರೆ ಹೋಗಿ ಈ ಪ್ರಕರಣದಲ್ಲಿ ಕುಂದಾಪುರ ಹೆಸರಾಗಲಿ, ಆಕೆಯನ್ನು ಚೈತ್ರಾ ಕುಂದಾಪುರ ಎಂದು ಕರೆಯುವುದಾಗಲಿ ಮಾಡಬಾರದು. ಈ ಕುರಿತು ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕೆಂದು ಮನವಿ ಮಾಡಿದ್ದರು.
ಆರೋಪಿಯನ್ನು ಹೆಸರಿಸುವಾಗ ‘ಕುಂದಾಪುರ’ ಎಂದು ಮಾಧ್ಯಮಗಳಲ್ಲಿ ಉಲ್ಲೇಖಿಸುತ್ತಿರುವುದರಿಂದ ತಾಲೂಕಿನ ಹೆಸರಿಗೆ ಧಕ್ಕೆ ಆಗುತ್ತಿದೆ. ಕುಂದಾಪುರದ ನಿವಾಸಿಗಳಿಗೆ ಅವಮಾನವಾಗುತ್ತಿದೆ. ಈ ಘಟನೆಯಿಂದ ಅಲ್ಲಿನ ಭವಿಷ್ಯದ ಪೀಳಿಗೆಯನ್ನು ಕೆಟ್ಟ ದೃಷ್ಟಿಯಿಂದ ನೋಡುವಂತಾಗಬಹುದು. ಹೀಗಾಗಿ ಮಾಧ್ಯಮಗಳು ಕುಂದಾಪುರ ಎಂದು ಉಲ್ಲೇಖಿಸಿರುವ ಸುದ್ದಿ, ವಿಡಿಯೋ, ಲೇಖನ, ಪೋಸ್ಟ್, ಲಿಂಕ್ ಅನ್ನು ಶಾಶ್ವತವಾಗಿ ತೆಗೆದು ಹಾಕುವಂತೆ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಸೂಚಿಸಬೇಕು ಎಂದು ಕೋರಿದ್ದರು.
ಅಂದಹಾಗೆ ಈ ವಿಚಾರಣೆಯನ್ನು ಕೈಗೆತ್ತಿಕೊಂಡು, ಮನವಿಯನ್ನು ಪುರಸ್ಕರಿಸಿರುವ 22ನೇ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಕುಂದಾಪುರದ ಚೈತ್ರಾ ಹೆಸರಿನ ಜತೆಗೆ ‘ಕುಂದಾಪುರ’ ಉಲ್ಲೇಖಿಸಿ ಸುದ್ದಿ ಪ್ರಸಾರ, ಅಭಿಪ್ರಾಯ ವ್ಯಕ್ತಪಡಿಸುವುದನ್ನು, ಚರ್ಚೆ ನಡೆಸುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಆದೇಶ ಹೊರಡಿಸಿದೆ. ಈ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ, ಮುಂದಿನ ವಿಚಾರಣೆವರೆಗೆ ಕುಂದಾಪುರದ ಹೆಸರನ್ನು ಬಳಸಿಕೊಂಡು ಚೈತ್ರಾ ಅವರ ಬಗ್ಗೆ ಯಾವುದೇ ಸುದ್ದಿಯ ಪ್ರಸಾರ, ಪ್ರಕಟ, ಚರ್ಚೆ ನಡೆಸದಂತೆ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿ ಸಮನ್ಸ್ ಜಾರಿಗೊಳಿಸಿದೆ.
ಇದನ್ನೂ ಓದಿ: H D Kumarswamy: ಬಿಜೆಪಿ ಕೂಟ ಸೇರಿದ ಬೆನ್ನಲ್ಲೇ ಅಮಿತ್ ಶಾಗೆ ಖಡಕ್ ಸೂಚನೆ ಕೊಟ್ಟ ಎಚ್ ಡಿ ಕುಮಾರಸ್ವಾಮಿ
