Home » Bengaluru Love Jihad:ಯುವಕನ ವಿರುದ್ಧ ಯುವತಿ ಮಾಡಿದ್ದ ಲವ್ ಜಿಹಾದ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಪೋಲಿಸರು ಬಿಚ್ಚಿಟ್ಟರು ಸ್ಪೋಟಕ ಸತ್ಯ !!

Bengaluru Love Jihad:ಯುವಕನ ವಿರುದ್ಧ ಯುವತಿ ಮಾಡಿದ್ದ ಲವ್ ಜಿಹಾದ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಪೋಲಿಸರು ಬಿಚ್ಚಿಟ್ಟರು ಸ್ಪೋಟಕ ಸತ್ಯ !!

1 comment
Bengaluru love jihad

Bengaluru Love Jihad: ಇತ್ತೀಚೆಗೆ ಯುವತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ (Social Media) ಯುವಕನೊಬ್ಬನ ಮೇಲೆ ಲವ್ ಜಿಹಾದ್ ( Bengaluru Love Jihad) ಆರೋಪ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಳು.ಬೆಂಗಳೂರು ಪೊಲೀಸರು(Bengaluru Police) ಇದನ್ನು ಗಮನಿಸಿ ನಗರ ಪೊಲೀಸರು ಯುವತಿಯಿಂದ ಹೇಳಿಕೆ ಪಡೆದು ಕಾಶ್ಮೀರ್ ಮೂಲದ ಯುವಕನ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದರು. ಇದೀಗ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಲವ್ ಜಿಹಾದ್ ಆರೋಪ ಮಾಡಿದ ಯುವತಿ 37 ವರ್ಷದ ಬೆಂಗಳೂರು ಮೂಲದ ಯುವತಿ ‘ಲವ್ ಜಿಹಾದ್’ ಆರೋಪ ಮಾಡಿ ಸಾಮಾಜಿಕ ಜಾಲತಾಣದಲ್ಲಿ(Social Media)ಪೋಸ್ಟ್ ಮಾಡಿದ್ದಳು. ಇದನ್ನು ಗಮನಿಸಿದ ಪೊಲೀಸರು ಯುವತಿಯನ್ನು ಪತ್ತೆ ಮಾಡಿ ಹೇಳಿಕೆ ಪಡೆದು ಯುವಕನ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಈ ಪ್ರಕರಣ ತನಿಖೆ ಆರಂಭಿಸಿದ್ದ ಬೆಂಗಳೂರು ಗ್ರಾಮಾಂತರ ಪೊಲೀಸರು ಕಳೆದ ವಾರ ಕಾಶ್ಮೀರದ ಶ್ರೀನಗರದ ಜಕುರಾ ಪ್ರದೇಶದ ಮೊಜಿಫ್ ಅಶ್ರಫ್ ಬೇಗ್ (32) ಎಂಬಾತನನ್ನು ಬಂಧಿಸಿದ್ದರು. ಆದರೆ, ಪೋಲಿಸರು ತನಿಖೆ ನಡೆಸಿದ ಸಂದರ್ಭ ಯುವಕ ಬೇರೆ ಯುವತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರಿಂದ ಕೋಪಗೊಂಡ ಬೆಂಗಳೂರು ಯುವತಿ ಯುವಕನ ಮೇಲೆ ಲವ್ ಜಿಹಾದ್ ಆರೋಪ ಮಾಡಿದ್ದಾಳೆ. ಈ ಪ್ರಕರಣದಲ್ಲಿ ಯಾವುದೇ ರೀತಿಯಲ್ಲೂ ಲವ್ ಜಿಹಾದ್ ಆಯಾಮ ಕಂಡುಬಂದಿಲ್ಲ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಪೊಲೀಸರ ಮಾಹಿತಿ ಅನುಸಾರ, ಯುವತಿ ಹಾಗೂ ಯುವಕ ಇಬ್ಬರೂ ಟೆಕ್ಕಿಗಳಾಗಿದ್ದು, ಬೆಂಗಳೂರು ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಂತೆ. 2018ರಲ್ಲಿ ಇಬ್ಬರಿಗೂ ಪರಿಚಯವಾಗಿ ಪ್ರೇಮವಾಗಿ ಬದಲಾಗಿದೆ. ಆನಂತರ, ಮೂರು ವರ್ಷ ಲೀವಿಂಗ್ ಟು ಗೆದರ್ ನಲ್ಲಿದ್ದು ಬ್ರೇಕ್ ಅಪ್ ಕೂಡ ಆಗಿದೆ. ಈ ನಡುವೆ, ಅಶ್ರಫ್ ಕೆಲಸದ ನಿಮಿತ್ತ ಪುಣೆಗೆ ಹೋಗಿದ್ದು, ಬ್ರೇಕ್ ಅಪ್ ಆಗಿದ್ದರು ಕೂಡ ಫೋನ್ ಕರೆಗಳ ಮೂಲಕ ಇಬ್ಬರೂ ಸಂಪರ್ಕದಲ್ಲಿದ್ದರಂತೆ. ಆದರೆ ಇತ್ತೀಚೆಗೆ ಅಶ್ರಫ್ ತನ್ನ ಊರಲ್ಲೇ ಬೇರೆ ಯುವತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರಿಂದ ಈ ವಿಚಾರ ತಿಳಿದ ಬೆಂಗಳೂರಿನಲ್ಲಿದ್ದ ಯುವತಿ ಅಶ್ರಫ್ ವಿರುದ್ಧ ಲವ್ ಜಿಹಾದ್ ಆರೋಪ ಮಾಡಿ ಪ್ರಕರಣ ದಾಖಲಿಸಿದ್ದಾಳೆ. ಸದ್ಯ ತನಿಖೆಯ ಬಳಿಕ, ಈ ಪ್ರಕರಣದಲ್ಲಿ ಯಾವುದೇ ‘ಲವ್ ಜಿಹಾದ್’ ಆಯಾಮವಿಲ್ಲ. ಹೀಗಾಗಿ, ನಾವು ಆರೋಪಗಳನ್ನು ಕೈಬಿಡುತ್ತಿದ್ದೇವೆ. ಆದರೆ ಅಶ್ರಫ್ ಬೇಗ್ ವಿರುದ್ಧ ಅತ್ಯಾಚಾರ, ವಂಚನೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪಗಳಿರುವ ಕುರಿತು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Manglore ಸೈಬರ್ ಕಳ್ಳರ ಕರಾಮತ್ತು ! ಸಬ್‌ ರಿಜಿಸ್ಪ್ರೇಶನ್‌ ಕಚೇರಿಯಲ್ಲೇ 100ಕ್ಕೂ ಅಧಿಕ ಮಂದಿಗೆ ಮಹಾಮೋಸ !

You may also like

Leave a Comment