Home » Cauvery struggle: ಕಾವೇರಿ ಹೋರಾಟಕ್ಕೆ ‘ತಮಿಳು ಸಂಘ’ ಸಾಥ್- ಕರ್ನಾಟಕಕ್ಕೆ ಅನ್ಯಾಯವಾದರೆ ಸಹಿಸಲ್ಲ ಎಂದ ನಾಯಕರು !!

Cauvery struggle: ಕಾವೇರಿ ಹೋರಾಟಕ್ಕೆ ‘ತಮಿಳು ಸಂಘ’ ಸಾಥ್- ಕರ್ನಾಟಕಕ್ಕೆ ಅನ್ಯಾಯವಾದರೆ ಸಹಿಸಲ್ಲ ಎಂದ ನಾಯಕರು !!

1 comment
Cauvery struggle

Cauvery struggle: ಕಾವೇರಿಯ ಹೋರಾಟ ಇಂದು ಮೊನ್ನೆಯದಲ್ಲ ಹಲವಾರು ಸಮಯದಿಂದ ಕಾವೇರಿ ನೀರಿಗಾಗಿ ರೈತರು ಭರ್ಜರಿ ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ ರಾಜಕೀಯ, ನಟ ನಟಿಯರು ಕೂಡ ಈ ಪ್ರತಿಭಟನೆಯ ಚರ್ಚೆಯಲ್ಲಿ ಭಾಗಿಯಾಗಿದ್ದಾರೆ.

ಈ ಮೊದಲು ತಮಿಳುನಾಡಿಗೆ (tamilnaadu) ಕಾವೇರಿ ನೀರು ಬಿಡುವ ವಿಚಾರದ ಹೋರಾಟದಲ್ಲಿ ಸ್ಯಾಂಡಲ್‌ವುಡ್ (sandalwood) ನಟ, ನಟಿಯರು ಭಾಗಿಯಾಗುತ್ತಿಲ್ಲ. ಕಾವೇರಿ ಹೋರಾಟಕ್ಕೆ (Cauvery struggle) ಬರದ ನಟ-ನಟಿಯ ಚಿತ್ರ ಬ್ಯಾನ್ ಆಗಲಿ ಎಂಬ ಹೇಳಿಕೆಯನ್ನು ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್ ಅವರು ಹೇಳಿದ್ದರು.

ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ ಕಾವೇರಿ ವಿಚಾರವಾಗಿ ಸ್ಯಾಂಡಲ್ ವುಡ್ ನಟರ ಟ್ರೋಲ್ ಮಾಡಲಾಗುತ್ತಿದೆ. ಸದ್ಯ ಕಾವೇರಿ ಹೋರಾಟಕ್ಕೆ ‘ತಮಿಳು ಸಂಘ’ ಸಾಥ್ ನೀಡಿದೆ. ಕರ್ನಾಟಕಕ್ಕೆ ಅನ್ಯಾಯವಾದರೆ ಸಹಿಸಲ್ಲ ಎಂದು ನಾಯಕರು ಹೇಳಿದ್ದಾರೆ.

ಕಾವೇರಿ ಹೋರಾಟದ (Cauvery Protest) ಭಾಗವಾಗಿ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಚಾಮರಾಜನಗರ ಜಿಲ್ಲಾ ತಮಿಳಿಗರ ಸಂಘ (Tamil Organisation) ಬೆಂಬಲ ಘೋಷಿಸಿದೆ. ಕರ್ನಾಟಕ ಬಂದ್ ಸಂಬಂಧ ಚಾಮರಾಜನಗರದ (Chamarajanagar) ಪ್ರವಾಸಿ ಮಂದಿರದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಸೋಮವಾರ ಪೂರ್ವಭಾವಿ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಭಾಗವಹಿಸಿದ್ದ ಚಾಮರಾಜನಗರ ಜಿಲ್ಲಾ ತಮಿಳಿಗರ ಸಂಘದ ಕಾರ್ಯದರ್ಶಿ ಜಗದೀಶನ್ ಅವರು ಮಾತನಾಡಿ, ಕರ್ನಾಟಕದಲ್ಲಿ 19 ತಮಿಳು ಸಂಘಟನೆಗಳಿವೆ. ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದೆ. ಒಂದು ತೊಟ್ಟು ನೀರನ್ನು ಬಿಡುವ ಸ್ಥಿತಿಯಲ್ಲಿ ಕರ್ನಾಟಕ ಇಲ್ಲ. ಕಾವೇರಿ ವಿಚಾರದಲ್ಲಿ ಯಾವತ್ತೂ ತಮಿಳುನಾಡಿನ ವಿರುದ್ಧ ದಿಕ್ಕಾರ ಕೂಗ್ತೀವಿ. ನಾವು ಯಾವತ್ತಿಗೂ ಕರ್ನಾಟಕದ ಪರವೇ ಇರ್ತೀವಿ. ಕರ್ನಾಟಕದ ಮಣ್ಣು, ನೀರು, ಗಾಳಿ ಸೇವಿಸಿ ಜೀವಿಸುತ್ತಾ ಇದ್ದೇವೆ. ನಾವೆಲ್ಲರೂ ಕನ್ನಡಿಗರೇ ಆಗಿದ್ದೇವೆ. ಕರ್ನಾಟಕಕ್ಕೆ ಅನ್ಯಾಯವಾದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆಯ ಮಾತನ್ನಾಡಿದ್ದಾರೆ.

ಇದನ್ನೂ ಓದಿ: Loan: ನೀವು ಸಹಕಾರಿ ಸಂಘಗಳಲ್ಲಿ ಸಾಲ ತೆಗೆದಿದ್ದೀರಾ? ಹಾಗಿದ್ರೆ ತಪ್ಪದೆ ಈ ಸ್ಟೋರಿ ನೋಡಿ !

You may also like

Leave a Comment