Parliament election: ಮುಂಬರುವ ಲೋಕಸಭಾ ಚುನಾವಣೆಯನ್ನು(Parliament election) ಎದುರಿಸಲು ಎಲ್ಲಾ ರಾಜ್ಯಗಳಲ್ಲಿ ಪಕ್ಷಗಳು ತಯಾರಿ ನಡೆಸುತ್ತಿವೆ. ಕರ್ನಾಟಕದಲ್ಲಿ ಕೂಡ ಮೂರು ಪ್ರಬಲ ಪಕ್ಷಗಳಾಗಿರುವಂತಹ ಬಿಜೆಪಿ(BJP), ಕಾಂಗ್ರೆಸ್(Congress) ಹಾಗೂ ಜೆಡಿಎಸ್(JDS) ಚುನಾವಣಾ ಅಕಾಡಕ್ಕಿಳಿಯಲು ರೆಡಿಯಾಗಿದ್ದಾರೆ. ಅದರಲ್ಲೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ದೋಸ್ತಿ ಮೂಲಕ ಚುನಾವಣೆಯನ್ನು ಎದುರಿಸಲು ಸನ್ನದ್ಧರಾಗಿವೆ. ಆದರೆ ಈ ನಡುವೆ ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿರೋ 28 ಲೋಕಸಭಾ ಕ್ಷೇತ್ರಗಳಲ್ಲಿ ಯಾರು ಗೆಲವು ಸಾಧಿಸುತ್ತಾರೆ ಎಂಬ ಅಚ್ಚರಿಯಾದ ಚುನಾವಣಾ ಸಮೀಕ್ಷೆಯೊಂದು ಬಹಿರಂಗವಾಗಿದೆ.
ಹೌದು, ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಪರಿಪೂರ್ಣ ಬಹುಮತ ಪಡೆದು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. 2024ರ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು? ಸಿಗಲಿದೆ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಇಂತಹ ಸಮಯದಲ್ಲಿ ಸಮೀಕ್ಷೆಗಳು ಕೂಡ ನಡೆಯುತ್ತಿವೆ. ಅಂತೆಯೇ 2024ರ ಲೋಕಸಭೆ ಚುನಾವಣೆ ಕುರಿತು Janmatpolls ವಿವಿಧ ರಾಜ್ಯಗಳಲ್ಲಿ ಸಮೀಕ್ಷೆ ನಡೆಸಿದೆ. ಅದರಲ್ಲಿ ಕರ್ನಾಟಕವೂ ಒಂದಾಗಿದ್ದು ಅದರ ಸಮೀಕ್ಷೆ ಇಲ್ಲಿದೆ.
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡು ಮಂಕಾಗಿರುವ ಬಿಜೆಪಿಗೆ ಸ್ಪೂರ್ತಿ ನೀಡುವಂತೆ ಸಮೀಕ್ಷೆ ವರದಿ ಇದೆ. ಆದರೆ 2019ಕ್ಕೆ ಹೋಲಿಕೆ ಮಾಡಿದರೆ ಸೀಟುಗಳ ಸಂಖ್ಯೆ ಕಡಿಮೆಯಾಗಿದೆ. ಆದರೂ ಕೂಡ Janmatpolls ಚುನಾವಣಾ ಪೂರ್ವ ಸಮೀಕ್ಷೆಯ ಫಲಿತಾಂಶ ಕರ್ನಾಟಕದ ಬಿಜೆಪಿ ನಾಯಕರ ಉತ್ಸಾಹ ಇಮ್ಮಡಿಗೊಳಿಸುವಂತೆ ಇದೆ.
ಏನು ಹೇಳುತ್ತದೆ ಸಮೀಕ್ಷಾ ವರದಿ?
2019ರಲ್ಲಿ 25 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಿತ್ತು. ಅಲ್ಲದೇ ಬಿಜೆಪಿ ಬೆಂಬಲಿತ ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಸಹ ಗೆಲವು ಸಾಧಿಸಿದ್ದರು. ಆದರೆ ಈ ಬಾರಿ Janmatpolls ಟ್ವೀಟ್ ಮಾಡಿರುವ ಪ್ರಕಾರ ಕರ್ನಾಟಕದಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 15 ರಿಂದ 17 ಸ್ಥಾನಗಳಲ್ಲಿ ಜಯಗಳಿಸಲಿದೆ. ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್ ಗಳಿಸುವ ಸ್ಥಾನಗಳು ಎಷ್ಟು?, ಜೆಡಿಎಸ್ ಎಷ್ಟು ಸ್ಥಾನದಲ್ಲಿ ಜಯಗಳಿಸಲಿದೆ? ಎಂಬ ವಿವರಗಳನ್ನು ಟ್ವೀಟ್‌ನಲ್ಲಿ ನೀಡಲಾಗಿಲ್ಲ.
ಇನ್ನು ಈ ಸಮೀಕ್ಷೆಯನ್ನು ಯಾವಾಗ ನಡೆಸಲಾಗಿದೆ? ಎಂಬ ಮಾಹಿತಿಯೂ ಇಲ್ಲ. ಒಟ್ಟಾರೆಯಾಗಿ ಸಮೀಕ್ಷೆಗಳ ಪ್ರಕಾರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 275 ರಿಂದ 278 ಮತ್ತು ಕಾಂಗ್ರೆಸ್ ಪಕ್ಷ 66 ರಿಂದ 68 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆಯ ವರದಿ ಹೇಳಿದೆ.
ಇದನ್ನೂ ಓದಿ: Suicide at BJP MLA’s house: ಬಿಜೆಪಿ ಶಾಸಕನ ಮನೆಯಲ್ಲೇ 24ರ ಯುವಕ ಆತ್ಮಹತ್ಯೆಗೆ ಶರಣು – ಕಾರಣ ಕೇಳಿದ್ರೆ ನೀವೇ ಶಾಕ್ !!
