Home » Aadhaar Card: ಆಧಾರ್ ಕಾರ್ಡ್ ಅಪ್ಡೇಟ್ ಮಾಡದವರಿಗೆ ಮಹತ್ವದ ಮಾಹಿತಿ- ಇನ್ಮುಂದೆ ಅಪ್ಡೇಟ್ ಮಾಡಿಸಲು ಈ ದಾಖಲೆ ಕಡ್ಡಾಯ !!

Aadhaar Card: ಆಧಾರ್ ಕಾರ್ಡ್ ಅಪ್ಡೇಟ್ ಮಾಡದವರಿಗೆ ಮಹತ್ವದ ಮಾಹಿತಿ- ಇನ್ಮುಂದೆ ಅಪ್ಡೇಟ್ ಮಾಡಿಸಲು ಈ ದಾಖಲೆ ಕಡ್ಡಾಯ !!

1 comment
Aadhaar Card

Aadhaar Card : ಸರಕಾರದ ಮೂಲಭೂತ ಸೌಕರ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಭಾರತದಲ್ಲಿ ಪ್ರತಿಯೊಬ್ಬ ನಾಗರಿಕ ಕೂಡ ಆಧಾರ್ ಕಾರ್ಡ್ (Aadhaar card) ಹೊಂದಿರುವುದು ಅತ್ಯಗತ್ಯವಾಗಿದೆ. ಆಧಾರ್ ಕಾರ್ಡ್​ ಅನ್ನು ವ್ಯಕ್ತಿಯ ಗುರುತನ್ನು ಸಂಕೇತಿಸುವ ಮೂಲ ದಾಖಲೆಯಾಗಿ ಕೂಡ ಪರಿಗಣಿಸಲಾಗುತ್ತದೆ.
ಜೊತೆಗೆ ಆಧಾರ್ ವಿವರಗಳನ್ನು ನವೀಕರಿಸುವುದು ಅಗತ್ಯವಾಗಿದೆ. ಸದ್ಯ ಆಧಾರ್ ಕಾರ್ಡ್ ಅಪ್ಡೇಟ್ ಮಾಡದವರಿಗೆ ಮಹತ್ವದ ಮಾಹಿತಿ ಇಲ್ಲಿದೆ. ಇನ್ಮುಂದೆ ಅಪ್ಡೇಟ್ ಮಾಡಿಸಲು ಈ ದಾಖಲೆ ಕಡ್ಡಾಯವಾಗಿ ಬೇಕು.

ಇಂದು ಸರ್ಕಾರದ (Government) ಪ್ರತಿಯೊಂದು ಯೋಜನೆಗಳನ್ನು, ಸವಲತ್ತುಗಳನ್ನು ಪಡೆಯುವುದಾದರೆ ಆಧಾರ್ ಕಾರ್ಡ್ (Adhar card) ತುಂಬಾ ಪ್ರಮುಖವಾದ ದಾಖಲೆಯಾಗಿದೆ. ಏನು ಮಾಡಿಸುವುದಿದ್ದರೂ ಆಧಾರ್ ಬೇಕೇ ಬೇಕು. ಹೀಗಾಗಿ ಸಮಯಕ್ಕೆ ಸರಿಯಾಗಿ ಇದರಲ್ಲಿರುವ ಮಾಹಿತಿಗಳನ್ನು ಆಗಾಗ ಅಪ್ಡೇಟ್ ಮಾಡೋದು ಅಗತ್ಯ. ಈ ನಡುವೆ 10 ವರ್ಷಗಳಿಗಿಂತ ಹಳೆಯದಾದ ಆಧಾರ್ ಕಾರ್ಡ್ ಅಪ್ಡೇಟ್ ಮಾಡೋದು ಕಡ್ಡಾಯ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತಿಳಿಸಿದೆ.

ಇತ್ತೀಚೆಗೆ ಭಾರತದ ಗೃಹ ವ್ಯವಹಾರಗಳ ಸಚಿವಾಲಯವು ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯಿದೆ, 2023 ಕುರಿತು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ ಜನನ ಪ್ರಮಾಣಪತ್ರವು (Birth Certificate) ಎಲ್ಲಾ ದಾಖಲೆಗಳಿಗೂ ಮುಖ್ಯ ಎಂದು ಪರಿಗಣಿಸಲಾಗಿದೆ. ಶೈಕ್ಷಣಿಕ ಸಂಸ್ಥೆಗಳ ಪ್ರವೇಶ , ಡಿಎಲ್ (DL) ಮತದಾರರ ಗುರುತಿನ ಚೀಟಿ (Voter ID) ಆಧಾರ್ ಕಾರ್ಡ್ ಸಂಖ್ಯೆ (Aadhaar Card Number) ಮದುವೆ ನೋಂದಣಿ ಈ ಎಲ್ಲಾ ದಾಖಲೆಗಳನ್ನು ಮಾಡಲು ಜನನ ಪ್ರಮಾಣ ಪತ್ರ (Birth Certificate) ಮೂಲ ದಾಖಲೆಗಳಾಗಿದೆ. ಅಕ್ಟೋಬರ್ 1 ರಿಂದ ಹಲವಾರು ಸೇವೆಗಳನ್ನು ಪಡೆಯಲು ಜನನ ಪ್ರಮಾಣಪತ್ರವನ್ನು ದಾಖಲೆಯಾಗಿ ಪರಿಗಣಿಸಲಾಗುತ್ತದೆ.

ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ (Nityananda Rai) ಅವರು, “ಈ ಕಾಯ್ದೆಯು ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ತಿದ್ದುಪಡಿ ಮಾಡಲಾಗಿಲ್ಲ. ಸದ್ಯ ಕಾಯ್ದೆಯನ್ನು ತಿದ್ದುಪಡಿ ಮಾಡುವ ಅವಶ್ಯಕತೆಯಿದೆ. ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಮಸೂದೆ, 2023 ನೋಂದಾಯಿತ ಜನನ ಮತ್ತು ಮರಣಗಳ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಡೇಟಾಬೇಸ್ ಅನ್ನು ರಚಿಸಲು ಸಹಾಯ ಮಾಡುತ್ತದೆ. ಇದು ಸಾರ್ವಜನಿಕ ಸೇವೆಗಳು ಮತ್ತು ಸಾಮಾಜಿಕ ಪ್ರಯೋಜನಗಳು ಮತ್ತು ಡಿಜಿಟಲ್ ನೋಂದಣಿಯ ಪರಿಣಾಮಕಾರಿ ಮತ್ತು ಪಾರದರ್ಶಕ ವಿತರಣೆಯನ್ನು ಖಚಿತಪಡಿಸುತ್ತದೆ” ಎಂದಿದ್ದರು.

 

ಇದನ್ನು ಓದಿ: Cheapest Liquor Price:ಅತೀ ಕಡಿಮೆ ಬೆಲೆಗೆ ಮದ್ಯ ಮಾರಾಟ ಮಾಡೋ ರಾಜ್ಯವಿದು- ಬೆಲೆ ಕೇಳಿದ್ರೆ ಮದ್ಯಪ್ರಿಯರೆಲ್ಲರೂ ಇಲ್ಲಿಗೆ ಓಡೋದು ಪಕ್ಕಾ !!

You may also like

Leave a Comment