Hanumantha Pair Asiya Begum: ಜಾತಿ, ಸಂಪ್ರದಾಯ ಕಟ್ಟುಪಾಡುಗಳ ನಡುವೆ, ಮೂಲತಃ ಮುಸ್ಲಿಂ ಯುವತಿಯಾದ್ರೂ, ಹಿಂದೂ ಸಂಪ್ರದಾಯದ ಯುವತಿಯಂತೆ ಮಹಾಲಕ್ಷ್ಮೀಯಾಗಿ ಆಸಿಯಾ ಬೇಗಂ ಕಾಣಿಸಿದ್ದಾಳೆ. ಹೌದು, ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮಕ್ಕೆ ಕುರಿಗಾಹಿ ಹನುಮಂತನಿಗೆ ಆಸಿಯಾ ಬೇಗಂ ಜೋಡಿಯಾಗಿದ್ದು (Hanumantha Pair Asiya Begum) , ಆಸಿಯಾ ಬೇಗಂ ಅವರು ನಾನಾ ರೀತಿಯ ಡ್ರೆಸ್‌ನಲ್ಲಿಯೂ ಮಿಂಚುತ್ತಿದ್ದಾರೆ. ಇದರಿಂದ ಯುವಕರನ್ನು ಆಕರ್ಷಿಸುವಲ್ಲಿ ಮುಂಚೂಣಿಯಲ್ಲಿದ್ದಾಳೆ. ಜೊತೆಗೆ ಹನುಮಂತನಿಗೂ ಕ್ರೇಸ್ ಹೆಚ್ಚಿದೆ.
ಆಸಿಯಾ ಬೇಗಂ ಕಳೆದ ವರ್ಷ ನಡೆದ ವರಮಹಾಲಕ್ಷ್ಮೀ ಹಬ್ಬದ ವೇಳೆ ಮಹಾಲಕ್ಷ್ಮಿ ಉಡುಗೆಯನ್ನು ತೊಟ್ಟುಕೊಂಡು ಲಕ್ಷ್ಮೀಯಾಗಿ ಕಂಗೊಳಿಸಿದ್ದಾಳೆ. ಆದರೆ ಮಾಡೆಲಿಂಗ್ ಕ್ಷೇತ್ರದಲ್ಲಿ ಭರ್ಜರಿಯಾಗಿಯೇ ಮಿಂಚುತ್ತಿರುವ ಆಸಿಯಾ ಬೇಗಂ ಹಿಂದೂ ಸಂಪ್ರದಾಯದ ಶೈಲಿಯ ಉಡುಪುಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾಳೆ. ಒಟ್ಟಿನಲ್ಲಿ ಜೀ ಕನ್ನಡದ ಭರ್ಜರಿ ಬ್ಯಾಚುಲರ್ ಹನುಮಂತನ ಜೋಡಿ ಆಸಿಯಾ ಬೇಗಂ ಮುಸ್ಲಿಂ ಯುವತಿ ಆದರೂ, ಈಕೆ ಮೊಡೆಲ್ ಆಗಿದ್ದರಿಂದ ಧರ್ಮದ ಸಂಪ್ರದಾಯ ಬದಿಗಿಟ್ಟು ಬೆಳೆಯುತ್ತಿದ್ದಾರೆ.
ವಿಶೇಷ ಎಂದರೆ ಮುಸ್ಲಿಂ ಸಮುದಾಯದ ಹುಡುಗಿಯಾದ್ರೂ ಹಿಂದೂ ಸಂಪ್ರದಾಯದ ಬಗ್ಗೆ ಆಸಿಯಾ ಬೇಗಂ ಎಲ್ಲವನ್ನೂ ತಿಳಿದುಕೊಂಡಿದ್ದಾಳೆ. ಇದಕ್ಕೆ ಮುಖ್ಯ ಕಾರಣವೂ ತಮ್ಮ ಕುಟುಂಬದಲ್ಲಿಯೇ ಇದೆ. ಯಾಕೆಂದರೆ ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮದ ಫ್ಯಾಮಿಲಿ ರೌಂಡ್‌ನಲ್ಲಿ ಆಸಿಯಾ ಬೇಗಂ ತಂದೆ ಹಾಗೂ ತಾಯಿ ಇಬ್ಬರೂ ಬಂದಿದ್ದರು. ಆಗಲೇ ಆಸಿಯಾ ಬೇಗಂಳಿಗೆ ಹಿಂದೂ ಸಂಪ್ರದಾಯದ ಪಾಲನೆ ಅರಿವು ಎಲ್ಲಿಂದ ಬಂದಿದೆ ಎಂಬುದು ತಿಳಿದಿದೆ.
ಭರ್ಜರಿ ಬ್ಯಾಚುಲರ್ಸ್ ಸೆಟ್‌ನಲ್ಲಿಯೂ ಆಸಿಯಾ ಬೇಗಂ ಹಿಂದೂ ಯುವತಿಯಂತೆ ಹಣೆಗೆ ಕುಂಕುಮ ಧರಿಸಿದ್ದು, ಬಹುತೇಕ ಪ್ರೇಕ್ಷಕರು ಈಕೆ ಹಿಂದೂ ಯುವತಿ ಎಂದೇ ಭಾವಿಸುತ್ತಿದ್ದಾರೆ. ಮಾಡೆಲಿಂಗ್‌ನಲ್ಲಿ ಹಿಂದೂ ಸಂಪ್ರದಾಯದ ಯುವತಿಯರಂತೆ ಸೀರೆಯನ್ನು ಧರಿಸಿರುವ ಹಾಗೂ ಬಂಗಾರದ ಆಭರಣಗಳನ್ನು ಧರಿಸಿರುವ ಮಾದರಿಯನ್ನು ಪ್ರದರ್ಶನ ಮಾಡಿದ್ದಾರೆ. ಈ ವೇಳೆ ಹಣೆಗೆ ಬಿಂದಿ, ಸೀರೆ, ಬಳೆ, ಮೂಗುತಿ, ತಲೆಗೆ ಹೂವು ಮುಡಿದು ಅಪ್ಪಟ ಲಕ್ಷ್ಮೀ ಯಂತೆ ಕಾಣಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ವಾರಕ್ಕೊಂದು ಟಾಸ್ಕ್, ವಾರಕ್ಕೊಂದು ರಿಸ್ಕ್ ತಗೊಂಡು ಭರ್ಜರಿ ಬ್ಯಾಚುಲರ್ಸ್‌ನಲ್ಲಿ ಹನುಮಂತ ಮತ್ತು ಆಸಿಯಾ ಬೇಗಂ ಜೋಡಿ ಸಕತ್ ಮಜಾ ಕೊಡುತ್ತಿದ್ದು, ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ.
