Home » Uttar Pradesh: ಜನರು ಕುಳಿತಿದ್ದ ಪ್ಲಾಟ್ ಫಾರ್ಮ್ ಗೆ ಏಕಾಏಕಿ ನುಗ್ಗಿದ ರೈಲು!! ನಂತರ ಆದದ್ದೇನು ?

Uttar Pradesh: ಜನರು ಕುಳಿತಿದ್ದ ಪ್ಲಾಟ್ ಫಾರ್ಮ್ ಗೆ ಏಕಾಏಕಿ ನುಗ್ಗಿದ ರೈಲು!! ನಂತರ ಆದದ್ದೇನು ?

1 comment
Uttar Pradesh

Uttar Pradesh: ಉತ್ತರ ಪ್ರದೇಶದ (Uttar Pradesh)ಮಥುರಾ ರೈಲು ನಿಲ್ದಾಣದಲ್ಲಿ ಎಲೆಕ್ನಿಕ್ ಮಲ್ಟಿಪಲ್ ಯೂನಿಟ್ ರೈಲೊಂದು ಇದಕ್ಕಿದ್ದಂತೆ ಪ್ಲಾಟ್‌ಫಾರ್ಮ್‌ಗೆ ನುಗ್ಗಿದ ಘಟನೆ ನಡೆದಿದೆ.

ಆಗ್ರಾ ವಿಭಾಗದ ಅಧಿಕಾರಿಯ ಪ್ರಕಾರ, ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ (ಇಎಂಯು) ರೈಲು ಮಂಗಳವಾರ ರಾತ್ರಿ 10.50 ಕ್ಕೆ ಶಕುರ್ಬಸ್ತಿಯಿಂದ ಪ್ಲಾಟ್‌ಫಾರ್ಮ್ 2ಎಗೆ ಆಗಮಿಸಿದೆ.ಸಿಬ್ಬಂದಿ ಸೇರಿದಂತೆ ಎಲ್ಲಾ ಪ್ರಯಾಣಿಕರು ಡಿಬೋರ್ಡ್ ಮಾಡಿದ ಬಳಿಕ, ರೈಲು ಹಳಿಯಿಂದ ಉರುಳಿದ್ದು, ನಿಲ್ದಾಣಕ್ಕೆ ಬರುವ ಮೊದಲು ಪ್ಲಾಟ್‌ಫಾರ್ಮ್‌ಗೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಮಹಿಳೆಯೊಬ್ಬರು ವಿದ್ಯುತ್ ಆಘಾತಕ್ಕೆ ಒಳಗಾಗಿದ್ದು, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ” ಎಂದು ಉತ್ತರ ಮಧ್ಯ ರೈಲ್ವೆಯ ಆಗ್ರಾ ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಶಸ್ತಿ ಶ್ರೀವಾಸ್ತವ ಹೇಳಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಉನ್ನತ ಮಟ್ಟದ ತನಿಖೆಗೆ ರೈಲ್ವೇ ಇಲಾಖೆ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ.

 

ಇದನ್ನು ಓದಿ: KSET ಅಭ್ಯರ್ಥಿಗಳೇ, ಪರೀಕ್ಷೆ ಕುರಿತು ಇಲ್ಲಿದೆ ನೋಡಿ ಬಿಗ್ ಅಪ್ಡೇಟ್

You may also like

Leave a Comment