Home » Mangaluru city bus: ಮಂಗಳೂರು ಸಿಟಿ ಬಸ್‌ಗಳ ಆಟಾಟೋಪಕ್ಕೆ ಕಮೀಷನರ್ ಮೂಗುದಾರ !

Mangaluru city bus: ಮಂಗಳೂರು ಸಿಟಿ ಬಸ್‌ಗಳ ಆಟಾಟೋಪಕ್ಕೆ ಕಮೀಷನರ್ ಮೂಗುದಾರ !

3 comments
Mangaluru city bus

Mangaluru city bus :ಮಂಗಳರು ನಗರ ಪೊಲೀಸ್‌ ಕಮಿಷನರ್‌ ಅನುಪನ್‌ ಅಗರ್‌ವಾಲ್‌ ಅವರು ಸಿಟಿಬಸ್‌ಗಳ(Mangaluru city bus )ಆಟಾಟೋಪಗಳಿಗೆ ಕಡಿವಾಣ ಹಾಕಲು ಬಸ್‌ ಮಾಲಕರೊಂದಿಗೆ ಸಭೆ ನಡೆಸಿ ಖಡಕ್‌ ವಾರ್ನಿಂಗ್‌ ನೀಡಿದ್ದಾರೆ.

ಇತ್ತೀಚೆಗೆ ನಗರದಲ್ಲಿ ನಡೆದ ಭೀಕರ ಅಪಘಾತಗಳ ವೀಡಿಯೋಗಳನ್ನು ತೋರಿಸಿದ್ದು, ಬಸ್‌ಮಾಲಕರ ಸಮ್ಮುಖದಲ್ಲೇ ಇದನ್ನೆಲ್ಲಾ ತೋರಿಸಿ ಕಮಿಷನರ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಅಲ್ಲದೇ ಈ ಸಭೆಯಲ್ಲಿ ಟೈಮ್‌ಕೀಪಿಂಗ್‌, ಅತಿ ವೇಗದ ಚಾಲನೆ, ನಿರ್ಲಕ್ಷ್ಯದ ಚಾಲನೆ, ಸಂಚಾರ ನಿಯಮ ಉಲ್ಲಂಘನೆ ಕುರಿತು ಎಚ್ಚರಿಕೆ ನೀಡಲಾಯಿತು.

ಬಸ್‌ಮಾಲಕರು ತಮ್ಮ ಚಾಲಕ ಮತ್ತು ನಿರ್ವಾಹಕರಿಗೆ ಎಚ್ಚರಿಕೆ ನೀಡಬೇಕು. ಇಲ್ಲದಿದ್ದರೆ ಚಾಲಕರ ಚಾಲನ ಪರವಾನಿಗೆ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಫುಟ್‌ಬೋರ್ಡ್‌ಗೆ ಬಾಗಿಲು ಹಾಕುವ ಚಿಂತನೆ ಮಾಡಬೇಕು, ಫುಟ್‌ಬೋರ್ಡ್‌ ಮೇಲೆ ಪ್ರಯಾಣಿಕರು ನಿಲ್ಲಲು ಅವಕಾಶ ನೀಡಬಾರದು, ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಪೊಲೀಸ್‌ ಕಮಿಷನರ್ ಹೇಳಿದ್ದಾರೆ.

ಇದನ್ನೂ ಓದಿ : ಸುಳ್ಯ ಕೆವಿಜಿ ಪಾಲಿಟೆಕ್ನಿಕ್ ಪ್ರಾಚಾರ್ಯ ಎ.ಎಸ್.ರಾಮಕೃಷ್ಣ ಕೊಲೆ ಪ್ರಕರಣ : ಕೆ.ವಿ.ಜಿ. ಪುತ್ರ ಡಾ.ರೇಣುಕಾಪ್ರಸಾದ್ ಸಹಿತ 6 ಮಂದಿ ದೋಷಿಗಳು !

You may also like

Leave a Comment