Student Brutal Murder: ಇತ್ತೀಚಿಗೆ ಕ್ಷುಲ್ಲಕ ಕಾರಣಕ್ಕೆ ಕೊಲೆ ಸುಲಿಗೆಯಂತ ಹೀನ ಕೃತ್ಯಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಇದೀಗ ಇನ್ನೂ ಸರಿಯಾಗಿ ಮೀಸೆ ಚಿಗುರದ ಯುವಕರು ತನ್ನ ಸಹಪಾಠಿಯನ್ನು ಬರ್ಬರವಾಗಿ ಕೊಲೆ (Student Brutal Murder) ಮಾಡಿರುವ ಮಾಹಿತಿ ಬೆಳಕಿಗೆ ಬಂದಿದೆ.
ಹೌದು, ಪ್ರಜ್ವಲ ಎಂಬಾತ ಪೋನಿನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆಂದು, ಕಿಶನ್ ಬಾವನ್ನವರ, ದರ್ಶನ ಬಾವನ್ನವರ, ವಿಶಾಲ ಕಲ್ಲವಡ್ಡರ, ಶರಣ ಬಾವನ್ನವರ, ನಾಗೇಶ ಕಲ್ಲವಡ್ಡರ ಎಂಬುವವರು ಪ್ರಜ್ವಲ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.
ಕಿತ್ತೂರಿನ ಮಲ್ಲಾಪುರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಈ ಕೊಲೆ ನಡೆದಿದ್ದು, ಮಲ್ಲಾಪುರ ಗ್ರಾಮದ ನಿವಾಸಿ 16 ವರ್ಷದ ಪ್ರಜ್ವಲ್ ಮಲ್ಲೇಶ ಸುಂಕದ ಮೃತ ವಿದ್ಯಾರ್ಥಿಯಾಗಿದ್ದಾನೆ. ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ತನಿಖೆ ನಂತರ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
