Surathkal: ಇಲ್ಲಿನ ಹೊಸಬೆಟ್ಟು ಎಂಬಲ್ಲಿ ಫಾರ್ಚುನರ್ ಕಾರೊಂದು ಟಿಪ್ಪರ್ ಮತ್ತು ಮರಕ್ಕೆ ಡಿಕ್ಕಿ ಹೊಡೆದಿರುವ ಪರಿಣಾಮ, ಓರ್ವ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆಯೊಂದು ನಡೆದಿದೆ.
ಮೃತ ಕಾರು ಚಾಲಕ ಅರ್ಜುನ್ ಎಂದು ಗುರುತಿಸಲಾಗಿದೆ. ಸಹ ಪ್ರಯಾಣಿಕರಾದ ಮೊಹಮ್ಮದ್ ಫಿಜಾನ್ ಅವರ ತಲೆಯ ಒಳಭಾಗಕ್ಕೆ ಗಂಭೀರವಾಗ ಗಾಯವಾಗಿದೆ. ಹಾಗೂ ಇನ್ನೋರ್ವ ಪ್ರಯಾಣಿಕ ಅನಿರಿಧ್ ನಾಯರ್ ಅವರ ಹಣೆಯ ಮೇಲೆ ಗಾಯವಾಗಿದೆ ಎಂದು ವರದಿಯಾಗಿದೆ. ತೀವ್ರವಾಗಿ ಗಾಯಗೊಂಡ ಇವರಿಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಮುಂದುವರಿದೆ ಎಂದು ತಿಳಿದು ಬಂದಿದೆ. ಈ ಘಟನೆ ಸುರತ್ಕಲ್‌ನ(Surathkal) ಜ್ಯೋತಿಸರ್ವಿಸ್ ಸ್ಟೇಷನ್ ಬಳಿ ನಡೆದಿದೆ.
ಪೊಲೀಸರು ಮತ್ತು ಸಾರ್ವಜನಿಕರ ಸತತ ಪರಿಶ್ರಮದಿಂದ ಕಾರಿನೊಳಗಿದ್ದ ಶವವನ್ನು ಹೊರತೆಗೆಯಲಾಯಿತು ಎಂದು ತಿಳಿದು ಬಂದಿದೆ. ತಮಿಳುನಾಡು ನೋಂದಣಿಯ ಕಾರು ಇದು ಎಂದು ವರದಿಯಾಗಿದೆ.
ತಮಿಳುನಾಡು ನೊಂದಣಿಯ ಕಾರು ಇದಾಗಿದ್ದು, ಪೊಲೀಸರ ಮತ್ತು ಸಾರ್ವಜನಿಕರು ಸಹಕಾರದಿಂದ ಎರಡು ಗಂಟೆಯ ಪರಿಶ್ರಮದಿಂದ ಕಾರಿನ ಒಳಗೆ ಇದ್ದ ಶವವನ್ನು ಹೊರತೆಗೆಯಲಾಯಿತು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ?
