Home » Vatal Nagraj: ಕನ್ನಡಕ್ಕಾಗಿ ಹೋರಾಡೋ ವಾಟಾಳ್ ನಾಗರಾಜ್ ವಯಸ್ಸು ಕೇಳಿದ್ರೆ ನೀವೇ ಶಾಕ್ ಆಗ್ತೀರಾ – 60,70, 80 ಅಲ್ಲಾ. ಮತ್ತೆಷ್ಟು ?

Vatal Nagraj: ಕನ್ನಡಕ್ಕಾಗಿ ಹೋರಾಡೋ ವಾಟಾಳ್ ನಾಗರಾಜ್ ವಯಸ್ಸು ಕೇಳಿದ್ರೆ ನೀವೇ ಶಾಕ್ ಆಗ್ತೀರಾ – 60,70, 80 ಅಲ್ಲಾ. ಮತ್ತೆಷ್ಟು ?

1 comment
Vatal Nagaraj

Vatal Nagaraj: ಕನ್ನಡ, ಕರ್ನಾಟಕ ಅಥವಾ ಕನ್ನಡಿಗರಿಗೆ ಏನಾದರೂ ಸಮಸ್ಯೆ ಎದರಾದಾಗ ಯಾರು ಬೀದಿಗಿಳಿದು ಹೋರಾಡುತ್ತಾರೋ ಗೊತ್ತಿಲ್ಲ. ಆದರೆ ಅವರು ಮಾತ್ರ ಬಂದೇ ಬರುತ್ತಾರೆ. ಎಲ್ಲರಿಗಿಂತ ಮೊದಲು ಬೀದಿಯಲ್ಲಿರುತ್ತಾರೆ. ವಿಭಿನ್ನವಾದ ಪ್ರತಿಭಟನೆಗಳ ಮೂಲಕ ಎಲ್ಲರ ಗಮನ ಸೆಳೆದು ಸರ್ಕಾರಕ್ಕೆ ತಿವಿಯುತ್ತಾರೆ. ಹರಯದ, ಪ್ರಾಯದ ಯುವಕರಂತೆ ಪುಟಿದೇಳುತ್ತಾರೆ. ಇಷ್ಟೆಲ್ಲಾ ಹೇಳುವಾಗ ಎಂತವರಿಗೂ ಅವರ್ಯಾರು ಅಂತ ಅಂದಾಜಾಗಿರಬಹುದು ಅಲ್ವಾ? ಯಸ್,ಅವರೇ ಸದಾ ಕನ್ನಡ ಪರ ಧ್ವನಿ ಎತ್ತೋ, ಕನ್ನಡಕ್ಕಾಗಿ ಹೋರಾಡೋ ವಾಟಾಳ್ ನಾಗರಾಜ್(Vatal Nagaraj).

ತಲೆಮೇಲೊಂದು ಟೊಪ್ಪಿ, ಕಣ್ಣಲ್ಲಿ ಸದಾ ಕನ್ನಡಕ, ಹೆಚ್ಚಾಗಿ ಶ್ವೇತವರ್ಣದ ಉಡುಗೆ ತೊಟ್ಟು ಕತ್ತೆ ಮೇಲೆ ಕೂರೋದು, ಗ್ಯಾಸ್ ಸಿಲಿಂಡರ್ ಹೊರುವುದು, ಬೀದಿಯಲ್ಲೇ ಮಲಗೋದು, ಬುರ್ಕಾ ಹಾಕಿ ಕೊಡ ಹೊತ್ತಿಕೊಳ್ಳುವುದ ಹೀಗೆ ಒಂದೊಂದುಬಾರಿಯೂ ಒಂದೊಂದು ತರದ ವಿಭಿನ್ನ ಪ್ರತಿಭಟನೆಗಳ ಮೂಲಕ ನಾಡಿನ, ದೇಶದ ಗಮನಸೆಳೆದಿರುವ ವಾಟಾಳ್ ನಾಗರಾಜ್ ಎಲ್ಲರಿಗೂ ಚಿರಪರಿಚಿತರೆ. ಅವರೊಂದು ಕರೆ ಕೊಟ್ಟರೆ ಸಾಕು ಇಡೀ ಕರ್ನಾಟಕವೇ ಹೋರಾಟಕ್ಕೆ ದುಮುಕುತ್ತದೆ. ಅಷ್ಟರಮಟ್ಟಿಗೆ ಅವರು ಕನ್ನಡಿಗರಮೇಲೆ ಪ್ರಭಾವ ಬೀರಿದ್ದಾರೆ. ಅಂದಹಾಗೆ ಅವರ ಹೋರಾಟಗಳನ್ನು ನೋಡಿರುವ ನಾವು ಅವರ ವೈಯಕ್ತಿಕ ಬದುಕಿನ ಬಗ್ಗೆ ಏನಾದರೂ ತಿಳಿದುಕೊಂಡಿದ್ದೇವೆಯೇ? ಅದು ಬಿಡಿ ಅವರ ವಯಸ್ಸು ಎಷ್ಟೆಂಬುದು ಗೊತ್ತೇ? ಅಯ್ಯೋ ಅವರಿಗೇನು ಮಹಾ ವಯಸ್ಸು, ಇನ್ನು ಹುಡುಗು ಇದ್ದಹಾಗೆ ಇದ್ದಾರೆ .. 55, 60 ಹೋಗ್ಲಿ 70 ? ಅಂತ ನೀವು ಕೇಳಬಹುದು. ಆದರೆ ಇದಾವದು ಅಲ್ಲ. ಅವರ ನಿಜ ವಯಸ್ಸು ಕೇಳಿದ್ರೆ ನೀವೇ ದಂಗಾಗಿಬಿಡ್ತೀರಾ !!

ಹೌದು, ವಾಟಾಳ್ ಅವರ ನಿಜ ವಯಸ್ಸು ಕೇಳಿದ್ರೆ ನೀವೇ ಶಾಕ್ ಆಗ್ತೀರಾ. ಯಾಕೆಂದರೆ ಅವರಿಗೀಗ ಭರ್ತಿ 82 ವರ್ಷ!! ಇದು ನಿಮಗೆ ಶಾಕ್ ಅನಿಸಿದರೂ ನಂಬಲೇಬೇಕು. ಪ್ರಾಯದ ಹುಡುಗರಂತೆ, ಹರೆಯದ ಯುವಕರಂತೆ ಪುಟಿದೇಳುವ ಇವರು ಇಷ್ಟು ವಯಸ್ಸಾದರೂ ಹೋರಾಡೋದನ್ನು ಕಂಡರೆ ಜನ ಬಲೇ ವಾಟಾಳ್ ಅಂತಿದ್ದಾರೆ. ಒಟ್ನಲ್ಲಿ 82ರ ಇಳಿ ವಯಸ್ಸಿನಲ್ಲಿ ಕೂಡ ವಾಟಾಳ್ ನಾಗರಾಜ್ ಅವರು ಮತ್ತೆ ಕಾವೇರಿಯ ರಕ್ಷಣೆಗಾಗಿ ಹೋರಾಟಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನೀರೇ ಇಲ್ಲದೆ ಕರ್ನಾಟಕದ ಜನತೆ ಇದೀಗ ನರಳುವ ಸ್ಥಿತಿ ಬಂದಿದೆ. ಆದರೂ ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇನ್ನು ನಿನ್ನೆ ನಡೆದ ಕರ್ನಾಟಕ ಬಂದ್ ನಲ್ಲಿ ಹಾಗೂ ಕಾವೇರಿ ಹೋರಾಟದಲ್ಲಿ ಕಪ್ಪು ಬಣ್ಣದ ಬುರ್ಖಾ ಧರಿಸಿ ವಾಟಾಳ್ ನಾಗರಾಜ್ ವಿಭಿನ್ನವಾಗಿ ಪ್ರತಿಭಟನೆಗೆ ಇಳಿದಿದ್ದರು. ಈ ಬಗ್ಗೆ ಮಾತನಾಡಿದ ಅವರು ಕಪ್ಪು ಬಟ್ಟೆ ವಿರೋಧದ ಸಂಕೇತ. ಜೊತೆಗೆ ನ್ಯಾಯ ದೇವತೆಯ ಸಂಕೇತ ಎಂದು ವಾಟಾಳ್ ತಿಳಿಸಿದ್ದಾರೆ. ಇದು ನ್ಯಾಯದ ಸಂದೇಶ. ಕಪ್ಪು ಬಟ್ಟೆ ಧರಿಸಿ ಖಾಲಿ ಕೊಡ ಹಿಡಿದಿರುವ ದೃಶ್ಯ. ಮಹಿಳೆಯರ ಪರವಾಗಿಯೂ ಈ ಬಟ್ಟೆ ಧರಿಸಿದ್ದೇನೆ ಎಂದಿದ್ದರು.

ಇದನ್ನೂ ಓದಿ: Sukhpal Singh Khaira: ಡ್ರಗ್ಸ್ ಕೇಸ್ ಅಡಿಯಲ್ಲಿ ಕಾಂಗ್ರೆಸ್ ಶಾಸಕ ಅರೆಸ್ಟ್ !!

You may also like

Leave a Comment