Heart Attack: ಇತ್ತೀಚೆಗೆ ಸಣ್ಣ ವಯಸ್ಸಿನಲ್ಲಿ ಹೃದಯಾಘಾತದಿಂದ (Heart Attack) ಮರಣ ಹೊಂದುವವರ ಸಂಖ್ಯೆ ದಿನದಿಂದ ದಿನಕ್ಕೆ ಸಂಖ್ಯೆ ಏರುತ್ತಿದೆ. ಅಂತೆಯೇ, ಜಮಖಂಡಿ ತಾಲ್ಲೂಕಿನ ಇನಾಮ ಹಂಚಿನಾಳ ಗ್ರಾಮದ 15 ವರ್ಷದ ರಾಹುಲ್ ಕೋಲಕಾರ ಪರೀಕ್ಷೆ ಬರೆಯುವ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಬಾಲಕ ಹುಲ್ಯಾಳ ಗ್ರಾಮದ ಶಂಭುಲಿಂಗೇಶ್ವರ ಮಾದ್ಯಮಿಕ ಶಾಲೆಯಲ್ಲಿ 9 ನೇ ತರಗತಿ ಓದುತ್ತಿದ್ದು, ಶುಕ್ರವಾರ ಅರ್ಧವಾರ್ಷಿಕದ ಪರೀಕ್ಷೆ ಬರೆಯುತ್ತಿರುವ ವೇಳೆ ಹೃದಯಾಘಾತವಾಗಿದೆ.
ಆರೋಗ್ಯ ಹದಗೆಟ್ಟ ಕೂಡಲೆ ಶಿಕ್ಷಕರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಪ್ರಾಣ ಬಿಟ್ಟಿದ್ದಾನೆ ಎಂಬ ಮಾಹಿತಿ ದೊರೆತಿದೆ. ಈ ಕುರಿತು ವೈದ್ಯರ ಮಾಹಿತಿ ಪ್ರಕಾರ ವಿದ್ಯಾರ್ಥಿಗೆ ಹೃದಯ ಸಂಬಂಧಪಟ್ಟ ಖಾಯಿಲೆ ಇತ್ತು ಎಂಬ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ಕುಕ್ಕೇ ಸುಬ್ರಹ್ಮಣ್ಯನ ಹುಂಡಿ ಸೇರಿದ ಹಣ ಏನಾಗುತ್ತದೆ!?? ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಯಿತೊಂದು ಸತ್ಯ
