DCM D K SHIVAKUMAR : ಬ್ಯಾರಿ ಸಮುದಾಯ ಬಹಳ ಮೊದಲಿಂದಲೂ ನನಗೆ ಸ್ನೇಹ, ಭಾಂದವ್ಯ ಕೊಟ್ಟುಕೊಂಡು ಬಂದಿದೆ. ನನಗೂ ಬ್ಯಾರಿ ಸಮುದಾಯದ ಜೊತೆಗೆ ಉತ್ತಮವಾದ ವ್ಯಾವಹಾರಿಕ ಸಂಬಂಧ ಇದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್(DK Shivkumar) ಹೇಳಿದರು.
ಹೌದು, ಬೆಂಗಳೂರಿನಲ್ಲಿ(Bengalore) ಶನಿವಾರ ನಡೆದ ಬ್ಯಾರೀಸ್ ವೆಲ್‌ಫೇರ್ ಅಸೋಸಿಯೇಷನ್ನಿನ ನೂತನ ಸೌಹಾರ್ದ ಭವನ(Souhard bhavn) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಬ್ಯಾರಿ ಭಾಷಿಕ ಸಮುದಾಯ ಸಾಕಷ್ಟು ಕೊಡುಗೆ ನೀಡಿದೆ ಎಂದರು. ಅಲ್ಲದೆ ಈ ವೇಳೆ ನನಗೂ ‘ಬ್ಯಾರಿ’ ಸಮುದಾಯದ ಜೊತೆಗೆ ರಾಜಕೀಯ, ವ್ಯವಹಾರಿಕವಾಗಿ ಸಂಬಂಧ ಇದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(DCM D K SHIVAKUMAR) ಹೇಳಿದ್ದಾರೆ.
ಜೊತೆಗೆ ಬ್ಯಾರಿ(Byari) ಸಮುದಾಯವನ್ನು ಹಾಡಿ ಹೊಗಳಿದ ಅವರು ಎಲ್ಲಾ ಧರ್ಮದವರ ಜೊತೆ ಸ್ನೇಹಭಾವದಿಂದ ಇರುವ ಹಾಗೂ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವ ಸೌಹಾರ್ದಯುತ ಗುಣ ಈ ಸಮುದಾಯಕ್ಕೆ ಇದೆ. ಕನ್ನಡ ಸಾಹಿತ್ಯ, ಸಂಸ್ಕೃತಿ, ಭಾಷೆಗೆ ಬ್ಯಾರಿ ಭಾಷಿಕರು ನೀಡಿರುವ ಕೊಡುಗೆ ಸ್ಮರಣೀಯವಾದುದು. ಹೆಣ್ಣುಮಕ್ಕಳು ಒಡವೆ ಹಾಕಿಕೊಂಡರೆ ಸುಂದರವಾಗಿ ಕಾಣುತ್ತಾರೋ, ಬ್ಯಾರಿ ಭಾಷಿಕರು ಕನ್ನಡವನ್ನು ಸುಂದರಗೊಳಿಸಿದ್ದಾರೆ ಎಂದರು.
ಅಲ್ಲದೆ ಮಂಗಳೂರು, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಯಾರಾದರೂ ಬಂಡವಾಳ ಹೂಡಿಕೆ ಮಾಡಿದ್ದೀರಾ? ನೀವೆಲ್ಲ, ದುಬೈಗೆ ಹೋಗಿದ್ದೀರಿ. ಬಿಜೆಪಿ ಜಾತಿ ವಿಷಬೀಜ ಬಿತ್ತಿ ಸಾಮರಸ್ಯ ಹಾಳುಮಾಡಿದ್ದಾರೆ. ಖಾದರ್ ಅವರೇ ನೀವೇನು ಮಂತ್ರಿ ಆಗ್ಲಿಲ್ಲ ಎಂದು ಚಿಂತೆ ಮಾಡೊದು ಬೇಡ ಎಸ್ ಎಂ ಕೃಷ್ಣ ಅವರು ಸ್ಪೀಕರ್ ಆಗಿದ್ದರು. ಜಗದೀಶ್ ಶೆಟ್ಟರ್ ಅವರು ಸ್ಪೀಕರ್ ಆಗಿದ್ದರು. ಆಮೇಲೆ ಏನಾದ್ರು…? ಯು.ಟಿ.ಖಾದರ್ ಅವರ ಹಣೆ ಬರಹ ಹೇಗಿದ್ಯೋ ಏನೋ? ಎಂದು ಹೇಳುವ ಮೂಲಕ ಪರೋಕ್ಷವಾಗಿ ಮುಂದೆ ಸಿಎಂ ಆಗುವ ಅವಕಾಶ ಸಿಗಬಹುದು ಎಂದು ಡಿಕೆಶಿ ಹೇಳಿದರು.
ಇದನ್ನೂ ಓದಿ: Jagadish shetter: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆ ಉಪಮುಖ್ಯಮಂತ್ರಿ ಪಟ್ಟ ?!
