Viral video: ನಿರಂಜನ್ ದೇಶಪಾಂಡೆ (niranjan Deshpande) ಕನ್ನಡ ಚಿತ್ರರಂಗದ ಉದಯೋನ್ಮುಖ ನಟ. ಕಿರುತೆರೆಯಲ್ಲಿ ನಟಿಸುವ ಮುಖಾಂತರ ಪ್ರಸಿದ್ಧರಾದ ಇವರು ನಂತರ ಕನ್ನಡ ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದರು. `ಬಾಂಬೆ ಮಿಠಾಯಿ’,`ಪಾದರಸ’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಕನ್ನಡ ಕಿರುತೆರೆ ಜನಪ್ರಿಯ ನಿರೂಪಕ ನಿರಂಜನ್ ದೇಶಪಾಂಡೆ ಮತ್ತು ಪತ್ನಿ ಯಶಸ್ವಿನಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.
ಇದೀಗ ನಿರಂಜನ್ ದೇಶಪಾಂಡೆ ಸಿಟ್ಟಿನಿಂದ ಪತ್ನಿ ಮೇಲೆ ಕೈ ಮಾಡಿದ್ದು, ಹೆಂಡತಿ ನೋವಿನಿಂದ ಬಿದ್ದು ಹೊರಳಾಡಿದ ವಿಡಿಯೋ ವೈರಲ್ (viral video) ಆಗಿದೆ. ಹೌದು, ಮನೆಯ ಲೀವಿಂಗ್ ಏರಿಯಾದ ಸೋಫಾ ಮೇಲೆ ನಿರಂಜನ್ ದೇಶಪಾಂಡೆ ಮೊಬೈಲ್ ನೋಡಿಕೊಂಡು ಕುಳಿತಿದ್ದರು. ಒಂದೆರಡು ಸಲ ಪತ್ನಿ ಯಶಸ್ವಿನಿ ಕರೆಯುತ್ತಾರೆ ಆದರೂ ಕೇರ್ ಮಾಡದೆ ಮೊಬೈಲ್ ನೋಡುತ್ತಿದ್ದ ಕಾರಣ ಹಾಗೆ ಸುಮ್ಮನೆ ಮೊಬೈಲ್ ಬಿಡುವಂತೆ ನೂಕುತ್ತಾರೆ. ಸಿಟ್ಟು ಮಾಡಿಕೊಂಡು ನಿರಂಜನ್ ‘ಹೊಡೆಯುವುದು ಇಟ್ಟಿಕೊಳ್ಳಬೇಕು ಆಗಲಿಂದ ಹೇಳುತ್ತಿದ್ದೀನಿ’ ಎನ್ನುತ್ತಾರೆ. ಅಷ್ಟರಲ್ಲಿ ಹೈ ಡ್ರಾಮಾ ಕ್ರಿಯೇಟ್ ಮಾಡಿದ ಯಶಸ್ವಿನಿ ಹೊಡೆದೇ ಬಿಟ್ಟರು ಎನ್ನುವ ರೀತಿಯಲ್ಲಿ ಸೋಫಾದಿಂದ ನೆಲಕ್ಕೆ ಬೀಳುತ್ತಾರೆ.
ಅಯ್ಯೋ ನನ್ನ ಗಂಡ ನನಗೆ ಹೊಡೆದೇ ಬಿಟ್ಟ ಸಾಯಿಯೇ ಬಿಟ್ಟ ಅಯ್ಯೋ ಕಾಪಾಡಿ’ ಎಂದು ಯಶಸ್ವಿನಿ ಕೂಗಾಡುತ್ತಾರೆ. ನಿರಂಜನ್ ಎಬ್ಬಿಸಲು ಪ್ರಯತ್ನ ಪಟ್ಟರೂ ನಾನು ಎಷ್ಟು ಪ್ರೀತಿ ಮಾಡುತ್ತೀನಿ ನಿನ್ನನ್ನು ಯಾರೆ ನೀನು ಮಾತ್ರ ಹೇಗೆ ಹೊಡೆಯುತ್ತೀನಾ ನೋಡು ತುಂಬಾ ರಕ್ತ ಬರುತ್ತಿದೆ’ ಎಂದು ಯಶಸ್ವಿನಿ ಹೇಳುತ್ತಾರೆ.
ಈ ವೇಳೆ ನಿರಂಜನ್ ನಿಮ್ಮ ತಾಯಿಗೆ ಕರೆ ಮಾಡುತ್ತೀನಿ ಎಲ್ಲಾ ಸರಿಹೋಗುತ್ತದೆ ಎನ್ನುತ್ತಾರೆ ಅಷ್ಟರಲ್ಲಿ ಯಶಸ್ವಿನಿ ಎದ್ದು ಪರ್ಫೆಕ್ಟ್ ಆಗಿ ಎದ್ದು ನಾಟಕ ಮಾಡಿಕೊಂಡು ಎದ್ದು ಓಡಿ ಹೋಗುತ್ತಾರೆ. ಇದು
ಜನರನ್ನು ರಂಜಿಸಲು ಮಾಡಿದ ರೀಲ್ಸ್ ಆಗಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಸಖತ್ ಕಾಮೆಂಟ್ ಮಾಡಿದ್ದಾರೆ. ನೀವಿಬ್ಬರೂ ಸೂಪರ್ ಕಪಲ್ಸ್ ಬೆಸ್ಟ್ ಕಪ್ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
