Crime news: ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ ಪ್ರಕರಣಗಳು(Crime News)ವರದಿಯಾಗುತ್ತಲೆ ಇರುತ್ತವೆ. ಈ ನಡುವೆ ಮಹಿಳೆಯರ ಮೇಲೆ ವಿಕೃತಿ ತೋರುವುದಲ್ಲದೆ ಏನು ಅರಿಯದ ಕಂದಮ್ಮಗಳ ಮೇಲೆ ಕೂಡ ದೌರ್ಜನ್ಯ ಎಸಗುವ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇವೆ. ಉತ್ತರ ಪ್ರದೇಶದಲ್ಲಿ (Uttar Pradesh) ತಂದೆಯೇ ತನ್ನ ಇಬ್ಬರು ಪುತ್ರಿಯರ ಮೇಲೆ ನಿರಂತರವಾಗಿ ಅತ್ಯಾಚಾರ (Physical Abuse) ಎಸಗುತ್ತಿದ್ದ ಹೇಯ ಕೃತ್ಯ ಮುನ್ನಲೆಗೆ ಬಂದಿದೆ.
ಘಾಜಿಯಾಬಾದ್ ನಿವಾಸಿಯಾದ 40 ವರ್ಷದ ತಂದೆ 17 ವರ್ಷದ ಹಾಗೂ 15 ವರ್ಷದ ಮಕ್ಕಳ ಮೇಲೆಯೇ ನಿರಂತರವಾಗಿ ಅತ್ಯಾಚಾರವೆಸಗುತ್ತಿದ್ದ ಎನ್ನಲಾಗಿದೆ. ಶಿಕ್ಷಕಿಯ ನೆರವಿನಿಂದ ತಂದೆಯ ವಿಕೃತ ಕೃತ್ಯದ ಕುರಿತು ಬಾಲಕಿಯರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕಳೆದ ನಾಲ್ಕು ವರ್ಷದಿಂದ ಇಬ್ಬರು ಪುತ್ರಿಯರ ಮೇಲೆ ನಿರಂತರವಾಗಿ ತಂದೆಯೇ ಅತ್ಯಾಚಾರ ಎಸಗುತ್ತಿದ್ದ. ಪಾಪಿ ಈ ವಿಚಾರವನ್ನು ಯಾರಿಗಾದರೂ ಹೇಳಿಬಿಟ್ಟರೆ ಇಬ್ಬರನ್ನೂ ಕೊಂದು ಹಾಕುತ್ತೇನೆ ಎಂದು ಇಬ್ಬರು ಮಕ್ಕಳನ್ನು ಹೆದರಿಸಿದ್ದಾನೆ. ಈ ನಡುವೆ, ತಾಯಿ ಬೇರೆಡೆಗೆ ಕೂಲಿಗೆ ಹೋಗುತ್ತಿದ್ದ ಹಿನ್ನೆಲೆ ಆಕೆಗೂ ಕೂಡ ಈ ವಿಚಾರ ತಿಳಿದಿರಲಿಲ್ಲ. ಇದರಿಂದಾಗಿ ಯಾರಿಗೂ ಹೇಳದ ಬಾಲಕಿಯರು, ಬೇರೆ ಯಾರ ಜತೆಗೂ ಬೆರೆಯುತ್ತಿರಲಿಲ್ಲ. ಶಾಲೆಯಲ್ಲಿಯೂ ಕೂಡ ತುಂಬಾ ಮಂಕಾಗಿ ಕೂರುತ್ತಿದ್ದರು. ಇವರಿಬ್ಬರನ್ನು ಗಮನಿಸಿದ ಶಿಕ್ಷಕಿ ಇಬ್ಬರೂ ಹೆಣ್ಣುಮಕ್ಕಳನ್ನು ಪಾರ್ಕ್‌ಗೆ ಕರೆದುಕೊಂಡು ಹೋಗಿ ಮಾತನಾಡಿಸಿದ್ದಾರೆ. ಈ ವೇಳೆ ಬಾಲಕಿಯರು ತಂದೆಯಿಂದ ತಮಗೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಶಿಕ್ಷಕಿ ಬಾಲಕಿಯರಿಗೆ ದೈರ್ಯ ತುಂಬಿದ ಹಿನ್ನೆಲೆ ಬಾಲಕಿಯರು ಪೊಲೀಸ್ ಠಾಣೆಗೆ ತೆರಳಿ ತಂದೆ ವಿರುದ್ಧ ದೂರು ನೀಡಿದ್ದು, ಪೊಲೀಸರು ವಿಕೃತ ಕಾಮಿಯನ್ನು ಬಂಧಿಸಿದ್ದಾರೆ.
ಇದನ್ನು ಓದಿ: Reels ನೋಡುತ್ತಿದ್ದ ಅಮ್ಮ, ಮಲಗಿದ್ದ ಮಕ್ಕಳು; ಆ ಕತ್ತಲಲ್ಲಿ ಬಂದೆರಗಿತು ಆಕಾಶದಿಂದ ದುರಂತ; 4 ರ ಸಾವು!!!
