Home » Crime News: ಗೆಳೆಯ ಕೇಳಿದನೆಂದು ತನ್ನ ಮನದರಸಿಯನ್ನೇ ಕೊಟ್ಟ ಸ್ನೇಹಿತ! ಇದೇನು ತ್ಯಾಗ ಅಂದ್ಕೊಂಡ್ರ, ಅಲ್ಲ ಆಮೇಲೆ ಆದದ್ದು ಭಯಾನಕ!!!

Crime News: ಗೆಳೆಯ ಕೇಳಿದನೆಂದು ತನ್ನ ಮನದರಸಿಯನ್ನೇ ಕೊಟ್ಟ ಸ್ನೇಹಿತ! ಇದೇನು ತ್ಯಾಗ ಅಂದ್ಕೊಂಡ್ರ, ಅಲ್ಲ ಆಮೇಲೆ ಆದದ್ದು ಭಯಾನಕ!!!

1 comment
Crime News

Love and Friend: ಪ್ರೀತಿ ಕುರುಡು ಎಂಬ ಮಾತಿನಂತೆ ಪ್ರೀತಿಸಿ ಮದುವೆಯಾದ ಅದೆಷ್ಟೋ ಪ್ರಕರಣಗಳು ನಮ್ಮ ಕಣ್ಣ ಮುಂದೆಯೇ ಇದೆ. ಇದರ ನಡುವೆ, ಪ್ರೀತಿ ಪ್ರೇಮ ಪ್ರಣಯ ಎಂದೆಲ್ಲ ಕಥೆ ಕೇಳಿ ಮೋಸ ಮಾಡುವ ಪ್ರಕರಣಗಳು ಇರುವುದನ್ನು ಅಲ್ಲಗಳೆಯುವಂತಿಲ್ಲ. ಆದರೆ, ರಾಮನಗರದ ಐಜೂರಿನಲ್ಲಿ ವಿಚಿತ್ರ ಪ್ರೇಮ ಪ್ರಕರಣ ವರದಿಯಾಗಿದ್ದು, ಈ ಇಂಟ್ರೆಸ್ಟಿಂಗ್ ಕಹಾನಿ ಕೇಳಿ ನೀವು ಶಾಕ್ ಆಗೋದು ಗ್ಯಾರಂಟಿ!!

ಪ್ರಿಯಕರನೊಬ್ಬ ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನೇ (Lover and Friend) ಇನ್ನೊಬ್ಬನಿಗೆ ಅಂಗಡಿಯಲ್ಲಿ ಸಿಗುವ ಗೊಂಬೆಯ ಹಾಗೆ (Transfering lover to Male friend). ತನ್ನ ಗೆಳೆಯನಿಗೆ ಬಿಟ್ಟು ಕೊಡಲು ಮುಂದಾಗಿದ್ದಾನೆ. ಹಾಗೆಂದು ಅವನೊಬ್ಬ ವಿಶಾಲ ಹೃದಯಿ ಎಂದು ಅಂದುಕೊಂಡರೆ ಜೋಕೆ!! ಅವನ ಖತರ್ನಾಕ್ ಐಡಿಯಾ ಎಲ್ಲರನ್ನು ಬೆಚ್ಚಿ ಬೀಳಿಸುವುದು ಪಕ್ಕಾ!!

ರಾಮನಗರದ ಮಂಜು(21) ಅದು ಇದು ಕೆಲಸ ಮಾಡುತ್ತಾ ಹುಡುಗಿಯರನ್ನು ಬಲೆಗೆ ಬೀಳಿಸುವುದರಲ್ಲಿ ನಿಸ್ಸೀಮನಾಗಿದ್ದ. ಅದೇ ರೀತಿ, ಐಜೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಈತನ ಮೋಡಿಗೆ ಬಿದ್ದು ಪ್ರೀತಿಯ ಬಲೆಗೆ ಬಿದ್ದಿದ್ದಾಳೆ. ಮಂಜು ಇದೆ ರೀತಿ ಅನೇಕ ಹುಡುಗಿಯ ಜೊತೆಗೆ ಚಕ್ಕಂದ ಮಾಡುತ್ತಿದ್ದನಂತೆ. ಮಂಜು ತನ್ನ ಗೆಳೆಯ ರವಿಗೆ ತನ್ನ ಪ್ರೇಮ ಪ್ರಕರಣದ ಪುರಾಣವನ್ನು ವರದಿ ಒಪ್ಪಿಸುತ್ತಿದ್ದ.

ಹುಡುಗಿಯ ಜತೆಗೆ ತಾನಿರುವ ಫೋಟೊಗಳು, ಆತ್ಮೀಯ ಕ್ಷಣಗಳ ಚಿತ್ರಗಳನ್ನೆಲ್ಲ ಮಂಜು ರವಿಗೆ ತೋರಿಸಿದ್ದಾನೆ. ರವಿ ಕೂಡಾ ಅವರಿಬ್ಬರು ಜತೆಯಾಗಿ ಓಡಾಡುವುದನ್ನು ನೋಡಿದ್ದಾನೆ. ಹೀಗಾಗಿ, ತನಗೆ ನಿನ್ನ ಪ್ರೇಯಸಿಯನ್ನು ಬಿಟ್ಟು ಕೊಡು ಎಂದು ಡಿಮ್ಯಾಂಡ್ ಮಾಡಿದ್ದಾನೆ. ಗೆಳೆಯನಾಗಿ ತನ್ನ ಪ್ರೇಯಸಿಯನ್ನು ಬಿಟ್ಟು ಕೊಡುವ ಮೂಲಕ ತ್ಯಾಗ ಮಾಡುವ ಹಾಗೆ ಈತನು ಓಕೆ ಅಂದಿದ್ದಾನೆ. ಮಂಜು ತನ್ನ ಪ್ರೇಯಸಿಯನ್ನು ಗೆಳೆಯನ ಜತೆ ಕಳುಹಿಸಲು ಪ್ಲ್ಯಾನ್ ಮಾಡಿದ್ದಾನೆ.

ಮಂಜು ತನ್ನ ಪ್ರೇಯಸಿಗೆ ಕರೆ ಮಾಡಿ ಸೆಪ್ಟೆಂಬರ್ 19ರಂದು ಸಿಗಲು ಹೇಳಿದ್ದು, ಹೀಗಾಗಿ,ಯುವತಿ ಪರೀಕ್ಷೆ ಅರ್ಧಕ್ಕೆ ಬಿಟ್ಟು ಪ್ರಿಯಕರನ ಭೇಟಿಗೆ ಓಡಿ ಬಂದಿದ್ದಾಳೆ. ಆದರೆ, ತನ್ನ ಪ್ರಿಯಕರ ನ ಬದಲಿಗೆ ಮತ್ತೊಬ್ಬನನ್ನು ಕಂಡು ಆಕೆ ಶಾಕ್ ಆಗಿದ್ದಾಳೆ. ಈ ವೇಳೆ ಕರೆ ಮಾಡಿದ ಮಂಜು, ಅಲ್ಲೇ ಪಕ್ಕದಲ್ಲಿ ನನ್ನ ಫ್ರೆಂಡ್ ರವಿ ಇದ್ದು ಅವನ ಜೊತೆಗೆ ಹೋಗು ಎಂದಿದ್ದು,ಇದಕ್ಕೆ ಯುವತಿ ನಿರಾಕರಿಸಿದ ಸಂದರ್ಭ ತನ್ನೊಂದಿಗೆ ಇರುವ ಫೋಟೋ ವೀಡಿಯೋ ಲೀಕ್ ಮಾಡುವ ಬೆದರಿಕೆ ಹಾಕಿದ್ದಾನೆ.

ಇದಕ್ಕೆ ಹೆದರಿ ಯುವತಿ ಅಪರಿಚಿತನ ಜೊತೆಗೆ ಹೊರಟಿದ್ದು, ಈ ನಡುವೆ ಆತ ದಾರವೊಂದನ್ನು ಕಟ್ಟಿ ನಾವಿನ್ನೂ ಗಂಡ ಹೆಂಡತಿ ಎಂಬ ಕಥೆ ಹೇಳಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಆ ಬಳಿಕ ಸಂಬಂಧಿಕರ ಮನೆಗೆ ರಾತ್ರಿ ಕರೆದೊಯ್ದಾಗ ಮನೆಯವರು ಅನುಮಾನಗೊಂಡು ಬೆಳಿಗ್ಗೆ ಬರುವಂತೆ ಹೇಳಿ ಕಳುಹಿಸಿದ್ದಾರೆ. ಈ ನಡುವೆ ತನ್ನ ಯಜಮಾನನ ಜೊತೆಗೆ ನಾವಿಬ್ಬರೂ ಗಂಡ ಹೆಂಡತಿ ಎಂದು ಹೇಳಿ ತುಮಕೂರಿನಲ್ಲಿ ಹುಡುಗಿಯನ್ನು ಕೂಡಿ ಹಾಕಿದ್ದಾನೆ.ಈ ನಡುವೆ, ಹುಡುಗಿಯ ಮನೆಯವರು ಮಗಳು ಕಾಣೆಯಾಗಿರುವ ಕುರಿತು ಪೊಲೀಸರಿಗೆ ದೂರು ಕೊಟ್ಟಿದ್ದರು. ಪೊಲೀಸರು ಆಕೆಯ ಮೊಬೈಲ್ ಟ್ರ್ಯಾಕ್ ಮಾಡಿದ ಸಂದರ್ಭ ಆಕೆ ತುಮಕೂರಿನಲ್ಲಿ ಇರುವ ವಿಚಾರ ಬೆಳಕಿಗೆ ಬಂದಿದೆ. ರವಿ ಮತ್ತು ಯುವತಿಯ ಹುಡುಕಾಟ ನಡೆಸಿದ ಪೊಲೀಸರು ಆರೋಪಿ ಮಂಜುವನ್ನೂ ಅರೆಸ್ಟ್ ಮಾಡಿದ್ದಾರೆ. ಹುಡುಗಿಯರನ್ನು ಮೋಹದ ಬಲೆಗೆ ಬೀಳಿಸಿ ವಂಚಿಸುವ ಮಂಜು ಮತ್ತು ರವಿಗೆ ತಕ್ಕ ಶಾಸ್ತ್ರಿ ಮಾಡಲು ಮುಂದಾಗಿದ್ದಾರೆ. ಸದ್ಯ, ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಇದನ್ನು ಓದಿ: World Cup 2023: ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ BJP; ಸಿಗಲಿದೆ 40 ಸಾವಿರ ಮಹಿಳೆಯರಿಗೆ ಉಚಿತ ಟಿಕೆಟ್!!!

You may also like

Leave a Comment