Home » Jharkhand: ಹೆಂಡತಿಗಾಗಿ ಲಕ್ಷಗಟ್ಟಲೆ ಸಾಲ ಮಾಡಿ ಓದಿಸಿದ ಕೂಲಿ ಕಾರ್ಮಿಕ ಗಂಡ; ಕೊನೆಗೆ ಹೆಂಡತಿ ಮಾಡಿದ್ದೇನು ಗೊತ್ತೇ?

Jharkhand: ಹೆಂಡತಿಗಾಗಿ ಲಕ್ಷಗಟ್ಟಲೆ ಸಾಲ ಮಾಡಿ ಓದಿಸಿದ ಕೂಲಿ ಕಾರ್ಮಿಕ ಗಂಡ; ಕೊನೆಗೆ ಹೆಂಡತಿ ಮಾಡಿದ್ದೇನು ಗೊತ್ತೇ?

by Mallika
1 comment
Jharkhand

Jharkhand: ಕೂಲಿ ಕಾರ್ಮಿಕ ಪತಿಯೋರ್ವ ತನ್ನ ಪತ್ನಿಗಾಗಿ 2.5 ಲಕ್ಷ ಸಾಲ ಮಾಡಿ ನರ್ಸ್‌ ಓದಲು ಸಹಾಯ ಮಾಡಿದ್ದ. ಆದರೆ ಆಕೆ ನರ್ಸಿಂಗ್‌ ಓದಿದ ಬಳಿಕ ಕೂಲಿ ಕಾರ್ಮಿಕ ಪತಿಗೆ ಮೋಸ ಮಾಡಿ ಇನ್ನೊಬ್ಬನ ಜೊತೆ ಓಡಿ ಹೋಗಿರುವ ಘಟನೆಯೊಂದು ಜಾರ್ಖಂಡ್‌ನಲ್ಲಿ(Jharkhand) ನಡೆದಿದೆ.

ಪತ್ನಿ ಪ್ರಿಯಾ ಕುಮಾರಿ ಎಂಬಾಕೆಯೇ ತನ್ನ ಗಂಡನಿಗೆ ಮೋಸ ಮಾಡಿದ ಹೆಂಡತಿ. ನರ್ಸಿಂಗ್‌ ಕಲಿಕೆಯ ಕೊನೆಯ ವರ್ಷದಲ್ಲಿದ್ದ ಹೆಂಡತಿ ತನ್ನ ಪತಿಗೆ ಮೋಸ ಮಾಡಿ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ. ಅಷ್ಟು ಮಾತ್ರವಲ್ಲದೇ ಆಕೆ ದೆಹಲಿಯ ದೇವಸ್ಥಾನವೊಂದರಲ್ಲಿ ತನ್ನ ಪ್ರಿಯಕರನ ಜೊತೆ ಮದುವೆ ಕೂಡಾ ಮಾಡಿಕೊಂಡಿದ್ದಾಳೆ. ನಂತರ ತನ್ನ ಮದುವೆಯ ಫೋಟೋವನ್ನು ಪತಿ ಟಿಂಕು ಯಾದವ್‌ಗೆ ಕಳಿಸಲು ಬೇರೆಯವರ ಸಹಾಯ ಪಡೆದಿದ್ದಾಳೆ.

Jharkhand

ತನ್ನ ಪತ್ನಿ ಪ್ರಿಯಾ ಕುಮಾರಿ ತನ್ನ ಗೆಳೆಯ ದಿಲ್ಖುಷ್‌ ರಾವುತ್‌ ಜೊತೆಗಿನ ಮದುವೆಯ ಫೋಟೋ ನೋಡಿದ ಪತಿ ಟಿಂಕು ಕುಮಾರ್‌ ಯಾದವ್‌ಗೆ ನಿಜಕ್ಕೂ ದಿಗ್ಭ್ರಮೆಗೊಂಡಿದ್ದಾನೆ. ಪತ್ನಿಗಾಗಿ ಓದಲು ಲಕ್ಷಗಟ್ಟಲೆ ದುಡ್ಡು ಸಾಲ ಮಾಡಿ ಓದಿಸಿದ್ದು, ಈಗ ಅದೇ ಪತ್ನಿ ತನಗೆ ಮೋಸ ಮಾಡಿದ್ದು ಕಂಡಾಗ ನಿಜಕ್ಕೂ ಗಂಡನಿಗೆ ಶಾಕ್‌ ಆಗಿದೆ.

ಪತಿ ಟಿಂಕು ಯಾದವ್ ಪೊಲೀಸರನ್ನು ಸಂಪರ್ಕಿಸಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾನೆ. ಅಲ್ಲದೆ, ನೊಂದ ಪತಿ ತನ್ನ ವಿದ್ಯಾಭ್ಯಾಸಕ್ಕೆ ವ್ಯಯಿಸಿರುವ ಲಕ್ಷ ಲಕ್ಷ ರೂಪಾಯಿ ವಾಪಸ್ ನೀಡುವಂತೆ ವಂಚನೆ ಮಾಡಿದ ಪತ್ನಿಗೆ ಬೇಡಿಕೆ ಇಟ್ಟಿದ್ದಾನೆ.

2020 ರಲ್ಲಿ, ಟಿಂಕು ಕುಮಾರ್ ಯಾದವ್ ಪ್ರಿಯಾ ಕುಮಾರಿ ಮದುವೆಯಾಗಿದ್ದಾರೆ. ಮದುವೆಯ ನಂತರ ಪತ್ನಿ ಪ್ರಿಯಾ ಕುಮಾರಿ ಮುಂದೆ ಓದುವ ಆಸೆ ವ್ಯಕ್ತಪಡಿಸಿ ತನ್ನನ್ನು ನರ್ಸಿಂಗ್ ಕಾಲೇಜಿಗೆ ಸೇರಿಸುವಂತೆ ಪತಿ ಟಿಂಕು ಯಾದವ್‌ಗೆ ಹೇಳಿದ್ದಳು. ಹಾಗಾಗಿ ಪತಿ ಟಿಂಕುಕುಮಾರ್ ಯಾದವ್ ಸಾಲ ಮಾಡಿ ಪತ್ನಿಯನ್ನು ಗೊಡ್ಡಾ ಜಿಲ್ಲೆಯ ಶಕುಂತಲಾ ನರ್ಸಿಂಗ್ ಕಾಲೇಜಿಗೆ ಸೇರಿಸಿದ್ದಾರೆ. ಅಷ್ಟೇ ಅಲ್ಲ, ಪತ್ನಿಗೆ ವ್ಯಾಸಂಗಕ್ಕೆ ಯಾವುದೇ ತೊಂದರೆಯಾಗದಂತೆ ನಗರದ ಹಾಸ್ಟೆಲ್‌ನಲ್ಲಿ ಆಕೆಗೆ ಉಳಿದುಕೊಳ್ಳಲು ಮತ್ತು ಊಟಕ್ಕೆ ವ್ಯವಸ್ಥೆ ಮಾಡಿದ್ದಾನೆ.

ಪತಿ ನೀಡಿದ ದೂರಿನ ಆಧಾರದ ಮೇಲೆ ಗೊಡ್ಡನಗರ ಠಾಣೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: Viral News: ಸರ್ಕಾರಿ ಆಸ್ಪತ್ರೆಯಲ್ಲಿ 31 ಸಾವು – ಹಾಸ್ಪಿಟಲ್ ಡೀನ್ ಕೈಯಲ್ಲೇ ಶೌಚಾಲಯ ಸ್ವಚ್ಛಗೊಳಿಸಿದ ಬಿಜೆಪಿ ಸಂಸದ !!

You may also like

Leave a Comment