Home » Mangli Marriage: ʼಕಣ್ಣೇ ಅದಿರಿಂದಿʼ ಹಿಟ್‌ ಸಾಂಗ್‌ ಫೇಮ್‌ ಸಿಂಗರ್‌ ಮಂಗ್ಲಿ ಮದುವೆ!!! ಹುಡುಗ ಯಾರು ಗೊತ್ತಾ? ಗಾಯಕಿ ಈ ಬಗ್ಗೆ ಏನಂದ್ರು?

Mangli Marriage: ʼಕಣ್ಣೇ ಅದಿರಿಂದಿʼ ಹಿಟ್‌ ಸಾಂಗ್‌ ಫೇಮ್‌ ಸಿಂಗರ್‌ ಮಂಗ್ಲಿ ಮದುವೆ!!! ಹುಡುಗ ಯಾರು ಗೊತ್ತಾ? ಗಾಯಕಿ ಈ ಬಗ್ಗೆ ಏನಂದ್ರು?

1 comment
Singer Mangli

Singer Mangli: ಗಾಯಕಿ ಮಂಗ್ಲಿ(Singer Mangli) ಕನ್ನಡ ಹಾಗೂ ತೆಲುಗು ಸಿನಿಮಾ ಗೀತೆಗಳನ್ನು ಹಾಡಿ ಜನರ ಮನ ಸೆಳೆದಿದ್ದಾರೆ. ಕನ್ನಡದ ‘ರಾಬರ್ಟ್‘ ಸಿನಿಮಾ ತೆಲುಗು ಆವೃತ್ತಿಗಾಗಿ ‘ಕಣ್ಣೇ ಅದಿರಿಂದಿ’ ಹಾಡಿನ ಮೂಲಕ ಕರ್ನಾಟಕದಲ್ಲಿ ಭಾರೀ ಪ್ರಖ್ಯಾತಿ ಗಳಿಸಿದ್ದಾರೆ. ಸದ್ಯ, ತೆಲುಗಿನ ಜನಪ್ರಿಯ ಗಾಯಕಿ, ನಟಿ ಮಂಗ್ಲಿ ಮದುವೆಯ ಕುರಿತಂತೆ ಸುದ್ದಿಯೊಂದು ಹರಿದಾಡುತ್ತಿದೆ.

ಕರ್ನಾಟಕದಲ್ಲಿ ಕೆಲವು ಲೈವ್ ಶೋ ಕೂಡ ನೀಡಿರುವ ಮಂಗ್ಲಿ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇವರು ಯಾವುದೇ ನಟ, ಗಾಯಕನಲ್ಲದೆ ತಮ್ಮದೇ ಸಂಬಂಧಿಯೊಬ್ಬರ ಜೊತೆಗೆ ಮಂಗ್ಲಿಯ ಮದುವೆ ನಿಶ್ಚಯವಾಗಿದೆ ಎಂಬ ಸುದ್ದಿ ತೆಲುಗು ಚಿತ್ರರಂಗದಲ್ಲಿ ಜೋರಾಗಿ ಕೇಳಿಬಂದಿದೆ. ಮಂಗ್ಲಿ ತಮ್ಮ ಮಾವನ ಮಗನೊಂದಿಗೆ ನವೆಂಬರ್ ನಲ್ಲಿ ಸಪ್ತಪದಿ ತುಳಿಯಲಿದ್ದು, ಬಂಜಾರ ಸಮಯದಾಯಕ್ಕೆ ಸೇರಿದ ಮಂಗ್ಲಿಯ ವಿವಾಹ ಅವರ ನಂಬಿಕೆಯ ಅನುಸಾರ ಶಾಸ್ತ್ರೋಕ್ತವಾಗಿ ನಡೆಯಲಿದೆ. ಆಕೆ ತಮ್ಮ ಹತ್ತಿರದ ಸಂಬಂಧಿ ಬಾವ ಆಗುವವರ ಕೈ ಹಿಡಿಯುತ್ತಾರೆ ಎನ್ನುವ ಗುಸುಗುಸು ಜೋರಾಗಿ ಕೇಳಿಬಂದಿದೆ. ಈ ಸುದ್ದಿ ಟಾಲಿವುಡ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ನಡುವೆ, ಅಭಿಮಾನಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಕಂಚಿನ ಕಂಠದ ಗಾಯಕಿಗೆ ಶುಭ ಕೋರುತ್ತಿದ್ದಾರೆ. ಈ ಬಗ್ಗೆ ಮಂಗ್ಲಿ ಫಿಲ್ಮಿಬೀಟ್‌ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಮಂಗ್ಲಿ ಮದುವೆ ವಿಚಾರದ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, “ನನ್ನ ಮದುವೆನಾ? ಅಯ್ಯೋ ನನ್ನ ಕರ್ಮ.. ಯಾವ ಮದುವೆನೂ ಇಲ್ಲ. ಇದೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿಸುತ್ತಿರುವ ಸುಳ್ಳು ವದಂತಿ. ನನ್ನ ಬಾವನನ್ನು ನಾನು ಮದುವೆಯಾಗುತ್ತೀನಿ. ಅದ್ಯಾರು ನನ್ನ ಬಾವ? ಆ ಸುದ್ದಿ ಹಬ್ಬಿಸಿದವರನ್ನೇ ತೋರ್ಸೋಕೆ ಹೇಳಿ ಎಂದು ಫುಲ್ ಕ್ಲಾಸ್ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಸದ್ಯಕ್ಕೆ ಮದುವೆ ಆಲೋಚನೆಯೇ ಇಲ್ಲ” ಎಂಬುದನ್ನು ಗಾಯಕಿ ಮಂಗ್ಲಿ ಸ್ಪಷ್ಟ ಪಡಿಸಿದ್ದಾರೆ.

ಇದನ್ನೂ ಓದಿ: Hijab Issue: ಮೆಟ್ರೋದಲ್ಲಿ ಹಿಜಾಬ್‌ ಧರಿಸಿಲ್ಲವೆಂದು ಪೊಲೀಸರಿಂದ ಮಾರಣಾಂತಿಕ ಹಲ್ಲೆ, ಬಾಲಕಿ ಕೋಮಾದಲ್ಲಿ!!!

You may also like

Leave a Comment