Jo Biden: ಅಮೇರಿಕಾದ ಅಧ್ಯಕ್ಷರಾಗಿರುವ ಜೋ ಬೈಡೆನ್(Jo Biden)ಅವರು ತಮ್ಮ ಪ್ರೀತಿಯ ನಾಯಿಯನ್ನು ಇದೀಗ ವೈಟ್ ಹೌಸ್ ನಿಂದ ಹೊರಹಾಕಿ ಭಾರೀ ಸುದ್ದಿಯಾಗತ್ತಿದ್ದಾರೆ. ಇದರಿಂದಾಗಿ ಅಮೆರಿಕ ಅಧ್ಯಕ್ಷರ ಶ್ವೇತಭವನದಲ್ಲಿ(White house) ರಾಜನಂತಿದ್ದ 2 ವರ್ಷದ ಜರ್ಮನ್ ಶೆಫರ್ಡ್ ಇದೀಗ ಅನಾಥವಾಗಿದೆ.
ಹೌದು, 2021ರಲ್ಲಿ ವೈಟ್‌ಹೌಸ್‌ನಲ್ಲಿ ಡಾಗ್ ಕಮಾಂಡರ್ ಸೇವೆಗೆ ನಿಯುಕ್ತಿಗೊಂಡ ಜರ್ಮನ್ ಶೆಫರ್ಡ್ ಇದೀಗ ವೈಟ್‌ಹೌಸ್‌ನಿಂದಲೇ ಹೊರಬಿದ್ದಿದೆ. ನಾಯಿ ಈಗಾಗಲೇ 11 ಮಂದಿ ಕಚ್ಚಿರುವುದ್ದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಇದೀಗ ತಮ್ಮ ಮುದ್ದಿನ ಸಾಕು ಈ ನಾಯಿಯನ್ನು ವೈಟ್‌ಹೌಸ್‌ನಿಂದ ಹೊರಕ್ಕೆ ಹಾಕಿದ್ದಾರೆ.

ಅಂದಹಾಗೆ ಹೆಚ್ಚು ಆಕ್ರಮಣಕಾರಿಯಾಗಿದ್ದ ಈ ಜೆರ್ಮನ್ ಶೆಫರ್ಡ್‌ನಿಂದ ಗಾಯಗೊಂಡವರ ಸಂಖ್ಯೆಯು ಹೆಚ್ಚಿದ್ದು, ಸದ್ಯ ವೈಟ್‌ಹೌಸ್ ಸಿಬ್ಬಂದಿಗಳು ಸೇರಿದಂತೆ ಒಟ್ಟು 11 ಮಂದಿಗೆ ಕಚ್ಚಿದೆ. ಅಚ್ಚರಿ ಅಂದ್ರೆ ಸೆಕ್ರೆಟರಿ ಸರ್ವೀಸ್ ಏಜೆಂಟ್ ನಾಯಿ ಕಡಿತದಿಂದ ತೀವ್ರವಾಗಿ ಗಾಯಗೊಂಡಿದ್ದರು. ಇಷ್ಟೇ ಅಲ್ಲ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಡಾಗ್ ಕಮಾಂಡರ್‌ನಿಂದ ಅಪಾಯ ಹೆಚ್ಚುತ್ತಿದ್ದಂತೆ ಈ ಎಲ್ಲಾ ಕಾರಣಗಳಿಂದ ನಾಯಿಗೆ ಗೇಟ್ ಪಾಸ್ ನೀಡುವ ನಿರ್ಧಾರ ಮಾಡಲಾಗಿದೆ.
ಇದನ್ನು ಓದಿ: Bigg Boss Malayalam Shiyaz Kareem: ಮದುವೆ ಭರವಸೆ ಅತ್ಯಾಚಾರ ಪ್ರಕರಣ: ನಟ ಶಿಯಾಸ್ ಕರೀಂಗೆ ಮಧ್ಯಂತರ ಜಾಮೀನು ಮಂಜೂರು!
